ಕಣಂಜಾರು ಚಿತ್ರದ ಟೀಸರ್ ಬಿಡುಗಡೆ : ಆರ್ ಪಿ ಫಿಲಂಸ್ ಯೂ ಟ್ಯೂಬ್ ಚಾನಲ್ ನಲ್ಲಿ ರಿಲೀಸ್

ಥ್ರಿಲ್ಲರ್ ವಿಷಯವನ್ನು ಮುಂದಿಟ್ಟುಕೊಂಡು ಆರ್.ಬಾಲಚಂದ್ರ ನಿರ್ದೇಶನ ಮಾಡುವ ಜೊತೆಗೆ  ನಾಯಕನಾಗಿ ಕಾಣಿಸಿಕೊಂಡಿದ್ದಾರೆ.ಚಿತ್ರವನ್ನು ಕಾರ್ಕಳ, ಉಡುಪಿ, ಹೊನ್ನಾವರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 55 ರಿಂದ 60 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

Written by - Ranjitha R K | Last Updated : Jul 3, 2024, 01:10 PM IST
  • ಕಣಂಜಾರು ಚಿತ್ರದ ಟೀಸರ್ ಬಿಡುಗಡೆ
  • ಆರ್.ಬಾಲಚಂದ್ರ ನಿರ್ದೇಶನ ಮಾಡುವ ಜೊತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
  • 55 ರಿಂದ 60 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.
ಕಣಂಜಾರು ಚಿತ್ರದ ಟೀಸರ್ ಬಿಡುಗಡೆ : ಆರ್ ಪಿ ಫಿಲಂಸ್ ಯೂ ಟ್ಯೂಬ್ ಚಾನಲ್ ನಲ್ಲಿ ರಿಲೀಸ್  title=

ಬೆಂಗಳೂರು : ಆರ್ ಪಿ ಫಿಲ್ಮ್ಸ್ ಬ್ಯಾನರ್ ಅಡಿ ಆರ್.ಬಾಲಚಂದ್ರ ನಿರ್ಮಿಸಿ, ನಿರ್ದೇಶಿಸಿರುವ “ಕಣಂಜಾರು” ಚಿತ್ರದ ಟೀಸರ್ ಬಿಡುಗಡೆಯಾಗಿದೆ.ಆರ್ ಪಿ ಫಿಲಂಸ್ ಯೂ ಟ್ಯೂಬ್ ಚಾನಲ್ ನಲ್ಲಿ ಟೀಸರ್ ಬಿಡುಗಡೆ ಆಗಿದೆ.ಈಗ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಥ್ರಿಲ್ಲರ್ ವಿಷಯವನ್ನು ಮುಂದಿಟ್ಟುಕೊಂಡು ಆರ್.ಬಾಲಚಂದ್ರ ನಿರ್ದೇಶನ ಮಾಡುವ ಜೊತೆಗೆ  ನಾಯಕನಾಗಿ ಕಾಣಿಸಿಕೊಂಡಿದ್ದಾರೆ.ಚಿತ್ರವನ್ನು ಕಾರ್ಕಳ, ಉಡುಪಿ, ಹೊನ್ನಾವರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 55 ರಿಂದ 60 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.ಕಾರ್ಕಳ ಬಳಿಯ ಊರಿನ ಹೆಸರು ಕಣಂಜಾರು.ಥ್ರಿಲ್ಲರ್ ವಿಷಯ ಆಗಿರುವುದರಿಂದ ಆ ಹೆಸರು ಇಡಲಾಗಿದೆ.

ಇದನ್ನೂ ಓದಿ : MC Baba: ಮಾತು ಬಾರದೆ ಇದ್ದರೂ ಈತ ಫೇಮಸ್‌ ಯಾರ್ಪರ್‌..?

ಈ ಹಿಂದೆ ಮಹಾನುಭಾವರು ಚಿತ್ರದಲ್ಲಿ ನಾಯಕನಾಗಿದ್ದು ಚಿತ್ರವನ್ನು  ನಿರ್ಮಾಣ ಮಾಡಿದ್ದೆ. ಇದೊಂದು ಆಸಕ್ತಿ ಮತ್ತು ಕುತೂಹಲ ಕಾರಿ ಸಂಗತಿಯ ಕಥೆಯನ್ನು ಹೊಂದಿದ್ದರಿಂದ ನಾನೇ ನಿರ್ದೇಶನ ಮಾಡಲು ಮುಂದಾದೆ ಎಂದಿದ್ದಾರೆ ಆರ್. ಬಾಲಚಂದ್ರ.ಚಿತ್ರದ ಉಳಿದ ಮಾಹಿತಿಯನ್ನು ಹಂತ ಹಂತವಾಗಿ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. 

ಬಾಲಚಂದ್ರ, ಅಪೂರ್ವ, ಶರ್ಮಿತಾ ಗೌಡ, ಹಿರಿಯ ನಟ ರಾಮಕೃಷ್ಣ, ಪಿ.ಎಸ್ ಶ್ರೀಧರ್ ಹಾಗು ಮೇಘ ಸೇರಿದಂತೆ  ಹೊಸ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : 'ಡಬಲ್ ಇಸ್ಮಾರ್ಟ್' ಫಸ್ಟ್‌ ಸಾಂಗ್‌ ರಿಲೀಸ್..! ರಾಮ್‌ ಎನರ್ಜಿಟಿಕ್‌ ಸ್ಟೆಪ್‌ಗೆ ಪ್ಯಾನ್ಸ್‌ ಫಿದಾ

ಹರ್ಷವರ್ಧನ್ ರಾಜ್  ಸಂಗೀತ, ಶಶಾಂಕ್ ಶೇಷಗಿರಿ ಹಿನ್ನೆಲೆ ಸಂಗೀತ, ವೆಂಕಿ ಯುಡಿವಿ ಸಂಕಲನ, ಮಂಜುನಾಥ್ ಹೆಗ್ಡ್ ಕ್ಯಾಮರ ಚಿತ್ರಕ್ಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News