ಅಖಾಡಕ್ಕಿಳಿದ ಫ್ಯಾಮಿಲಿ: ಅಭ್ಯರ್ಥಿಗಳ ಪರ ಕುಟುಂಬಸ್ಥರ ಮತಬೇಟೆ!

Karnataka Assembly Election 2023: ವಿ.ಸೋಮಣ್ಣ ಪತ್ನಿ ಶೈಲಜಾ ಸೋಮಣ್ಣ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತುತ್ತಿದ್ದು, ಮಹಿಳಾ ಸಂಘಗಳು, ಮುಖಂಡರ ಮನೆಗೆ ಭೇಟಿ ಕೊಟ್ಟು ಟ್ರಬಲ್ ಶೂಟರ್ ಆಗಿ ಕೆಲಸ‌ ಮಾಡುತ್ತಿದ್ದಾರೆ.

Written by - Zee Kannada News Desk | Last Updated : Apr 28, 2023, 09:57 AM IST
  • ಹೈವೋಲ್ಟೇಜ್ ಕ್ಷೇತ್ರವಾಗಿರುವ ಚಾಮರಾಜನಗರದಲ್ಲಿ ಅಭ್ಯರ್ಥಿಗಳ ಪರ ಅಖಾಡಕ್ಕಿಳಿದ ಫ್ಯಾಮಿಲಿ ಮೆಂಬರ್ಸ್
  • ವಿ.ಸೋಮಣ್ಣ ಪರ ಪ್ರಚಾರ ನಡೆಸಲು ಪತ್ನಿ ಶೈಲಜಾ ಸೋಮಣ್ಣ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತುತ್ತಿದ್ದಾರೆ
  • ಪುಟ್ಟರಂಗಶೆಟ್ಟಿ ಪುತ್ರಿಯರಾದ ಶೀಲಾ, ವೇದಾ ಹಳ್ಳಿಗಳಿಗೆ ಭೇಟಿ ಕೊಟ್ಟು ಮನೆ-ಮನೆ ಪ್ರಚಾರ ನಡೆಸುತ್ತಿದ್ದಾರೆ
ಅಖಾಡಕ್ಕಿಳಿದ ಫ್ಯಾಮಿಲಿ: ಅಭ್ಯರ್ಥಿಗಳ ಪರ ಕುಟುಂಬಸ್ಥರ ಮತಬೇಟೆ! title=
ಅಭ್ಯರ್ಥಿಗಳ ಪರ ಅಖಾಡಕ್ಕಿಳಿದ ಫ್ಯಾಮಿಲಿ!

ಚಾಮರಾಜನಗರ: ಬಿಜೆಪಿ ಅಭ್ಯರ್ಥಿ ಸಚಿವ ವಿ.ಸೋಮಣ್ಣ ಸ್ಪರ್ಧೆ ಬಳಿಕ ಚಾಮರಾಜನಗರ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿ ಬದಲಾಗಿದೆ. ಇದೀಗ ಅಭ್ಯರ್ಥಿಗಳ ಪರ ಫ್ಯಾಮಿಲಿ ಅಖಾಡಕ್ಕೆ ಎಂಟ್ರಿಯಾಗಿದ್ದು, ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ವಿ.ಸೋಮಣ್ಣ ಪತ್ನಿ ಶೈಲಜಾ ಸೋಮಣ್ಣ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತುತ್ತಿದ್ದು, ಮಹಿಳಾ ಸಂಘಗಳು, ಮುಖಂಡರ ಮನೆಗೆ ಭೇಟಿ ಕೊಟ್ಟು ಟ್ರಬಲ್ ಶೂಟರ್ ಆಗಿ ಕೆಲಸ‌ ಮಾಡುತ್ತಿದ್ದಾರೆ. ಮತ್ತೊಂದಡೆ ಪುಟ್ಟರಂಗಶೆಟ್ಟಿ ಪುತ್ರಿಯರಾದ ಶೀಲಾ, ವೇದಾ ಹಳ್ಳಿಗಳಿಗೆ ಭೇಟಿ ಕೊಟ್ಟು ಮನೆ-ಮನೆ ತಲುಪುತ್ತಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಮತ ಬೇಟೆಗೆ ಆಗಮಿಸುತ್ತಿದೆ ಘಟಾನುಘಟಿ ನಾಯಕರ ದಂಡು

ವಿ.ಸೋಮಣ್ಣ ಅನುಪಸ್ಥಿತಿಯನ್ನು ಪತ್ನಿ ಶೈಲಜಾ ತುಂಬುವ ಮೂಲಕ ಸ್ಪರ್ಧೆಯನ್ನು ಬಿರುಸು ಮಾಡಿದ್ದರೇ, ‘ಕೈ’ ಅಭ್ಯರ್ಥಿಗೆ ಮಕ್ಕಳ ಪ್ರಚಾರ ಬಲ‌ ತಂದುಕೊಟ್ಟಿದೆ. ಇದಷ್ಟೇ ಅಲ್ಲದೇ ಗುಂಡ್ಲುಪೇಟೆಯಲ್ಲಿ ‘ಕೈ’ ಅಭ್ಯರ್ಥಿ ಗಣೇಶ್ ಪ್ರಸಾದ್ ಪತ್ನಿ ವಿದ್ಯಾ ಮತ್ತು ಬಿಜೆಪಿ ಅಭ್ಯರ್ಥಿ ಪರ ಪತ್ನಿಸವಿತಾ, ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಪರ ಶ್ರೀವರ್ಧನ್, ಹನೂರಲ್ಲಿ ‘ಕೈ’ ಶಾಸಕ ನರೇಂದ್ರ ಪರ ಮಗ ನವನೀತ್ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ.

ರಾಜ್ಯ ವಿಧಾನಸಭಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಎದುರಾಳಿಗಳ ವಿರುದ್ಧ ದಿಗ್ಗಜ ನಾಯಕರು ರಣತಂತ್ರ ರೂಪಿಸುತ್ತಿದ್ದಾರೆ.

ಇದನ್ನೂ ಓದಿ: ಜೆಡಿಎಸ್ ಜನತಾ ಪ್ರಣಾಳಿಕೆ ಬಿಡುಗಡೆ: ರೈತರು, ಯುವಕರು,ಮಹಿಳೆಯರಿಗೆ ಬಂಪರ್ ಘೋಷಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News