Bollywood actress lifestyle : ಚಿತ್ರರಂಗಕ್ಕೆ ಅನೇಕ ನಟರು ಬಂದು ಹೋಗುತ್ತಾರೆ. ಆದರೆ ಕೆಲವರು ಮಾತ್ರ ಪ್ರೇಕ್ಷಕರ ಹೃದಯಲ್ಲಿ ಅಜರಾಮರವಾಗಿ ಉಳಿದುಕೊಳ್ಳುತ್ತಾರೆ.. ಅವರಿಲ್ಲ ಅಂದರೂ ಅವರ ನೆನಪು ಸದಾ ಸಿನಿರಸಿಕರನ್ನು ಕಾಡುತ್ತಿರುತ್ತದೆ.. ಅಂತಹ ಒಬ್ಬ ನಟಿಯ ದುರಂತ ಅಂತ್ಯದ ಕಥೆ ಇಲ್ಲಿದೆ..
Leela Naidu Life : ಈಕೆ ಒಂದು ಕಾಲದಲ್ಲಿ ಬಾಲಿವುಡ್ ಸ್ಟಾರ್ ನಟಿ. ಅವಳ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಈ ಮೋಹನಾಂಗಿಯ ನಟನಾ ಕೌಶಲ್ಯ ಅತ್ಯದ್ಭುತವಾಗಿತ್ತು. ಅದಕ್ಕಾಗಿಯೇ ನಿರ್ದೇಶಕರು ಮತ್ತು ನಿರ್ಮಾಪಕರು ಆಕೆಯ ಡೇಟ್‌ಗಾಗಿ ಕಾಯುತ್ತಿದ್ದರು. ಆ ಸುಂದರ ಮತ್ತು ಪ್ರತಿಭಾವಂತ ನಟಿ ಬೇರೆ ಯಾರೂ ಅಲ್ಲ ಲೀಲಾ ನಾಯ್ಡು.
ಹೌದು.. ಲೀಲಾ ನಾಯ್ಡು ಅವರು 50 ಮತ್ತು 60 ರ ದಶಕದಲ್ಲಿ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸೂಪರ್ ಸ್ಟಾರ್ ಗುರುತಿಸಿಕೊಂಡವರು. 1954 ರಲ್ಲಿ ಕೇವಲ 14 ನೇ ವಯಸ್ಸಿನಲ್ಲಿ "ಫೆಮಿನಾ ಮಿಸ್ ಇಂಡಿಯಾ" ಕಿರೀಟವನ್ನು ಗೆದ್ದರು ಮತ್ತು ಎಲ್ಲರ ಗಮನವನ್ನು ಸೆಳೆದರು.
ಆ ಸಮಯದಲ್ಲಿ ಹತ್ತು ವರ್ಷಗಳ ಕಾಲ, ವೋಗ್ ನಿಯತಕಾಲಿಕವು ಲೀಲಾ ಅವರನ್ನು ʼ10 ಅತ್ಯಂತ ಸುಂದರ ಮಹಿಳೆಯರುʼ ಪಟ್ಟಿಯಲ್ಲಿ ಹೆಸರಿಸಿತು. ರಾಜ್ ಕಪೂರ್ ಸೇರಿದಂತೆ ಹಲವು ಖ್ಯಾತ ನಟರು ಆಕೆಯ ಸೌಂದರ್ಯಕ್ಕೆ ಮಾರುಹೋಗಿದ್ದರು. ಆದರೆ ವೃತ್ತಿ ಜೀವನದಲ್ಲಿ ಸಿಕ್ಕಷ್ಟೇ ಗೌರವ, ವೈಯಕ್ತಿಕ ಬದುಕಿನಲ್ಲಿ ಸಿಗಲಿಲ್ಲ, ಹೆಚ್ಚು ನೋವುಗಳನ್ನು ಎದುರಿಸಬೇಕಾಯಿತು..
ಮುಂಬೈನಲ್ಲಿ ಜನಿಸಿದ ಲೀಲಾ ನಾಯ್ಡು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಕಾರಣದಿಂದ ಆಕೆಗೆ ಹಲವು ಸಿನಿಮಾ ಅವಕಾಶಗಳು ಬಂದರೂ ಕೈ ಬಿಟ್ಟರು. ಆದರೆ, 1960ರಲ್ಲಿ ಹೃಷಿಕೇಶ್ ಮುಖರ್ಜಿ ನಿರ್ದೇಶನದ ‘ಅನುರಾಧಾ’ ಚಿತ್ರದ ಮೂಲಕ ಲೀಲಾ ಚಿತ್ರರಂಗ ಪ್ರವೇಶಿಸಿದರು.
ಅನುರಾಧಾ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗದಿದ್ದರೂ, ಲೀಲಾ ನಾಯ್ಡು ಅವರ ಅಭಿನಯವು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಚಿತ್ರವು ಅತ್ಯುತ್ತಮ ಫೀಚರ್‌ಗಾಗಿ ಫಿಲಿಂಗಾ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರಿಂದ ಚಿತ್ರದ ನಿರ್ಮಾಪಕರಿಗೆ ಒಂದಿಷ್ಟು ಹಣ ದೊರೆಯಿತು.
ಲೀಲಾ ನಾಯ್ಡು ಅವರ ವೃತ್ತಿಜೀವನ ಅದ್ಭುತ, ಆದರೆ, ಅವರು ವಯಕ್ತಿಕ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಎದುರಿಸಿದರು. 17 ನೇ ವಯಸ್ಸಿನಲ್ಲಿ, ಅವರು ಒಬೆರಾಯ್ ಹೋಟೆಲ್ ಸರಪಳಿಯ ಮಾಲೀಕರ ಮಗ ತಿಲಕ್ ಒಬೆರಾಯ್ ಅವರನ್ನು ವಿವಾಹವಾದರು. ತಿಲಕ್ ಅವರಿಗಿಂತ 16 ವರ್ಷ ದೊಡ್ಡವರು, ಆಗ ಅವರಿಗೆ 33 ವರ್ಷ. ಆದರೆ ಅವರ ದಾಂಪತ್ಯ ಜೀವನ ಹೆಚ್ಚು ಕಾಲ ಉಳಿಯಲಿಲ್ಲ. ತಿಲಕ್ ಅವರು ಲೀಲಾರನ್ನ ತುಂಬಾ ಕೀಳಾಗಿರುತ್ತಿದ್ದರು ಎಂದು ಹೇಳಲಾಗುತ್ತದೆ, ಆದರೆ ನಾಯ್ಡು ಇದನ್ನು ಎಂದಿಗೂ ಬಹಿರಂಗಪಡಿಸಲಿಲ್ಲ. ಈ ದಂಪತಿಗೆ ಮಾಯಾ ಮತ್ತು ಪ್ರಿಯಾ ಎಂಬ ಇಬ್ಬರು ಅವಳಿ ಮಕ್ಕಳು ಜನಿಸಿದರು. ವಿಚ್ಛೇದನದ ನಂತರ ತಿಲಕರು ಮಕ್ಕಳ ಪಾಲನೆಯನ್ನು ಪಡೆದರು.
1969ರಲ್ಲಿ ಲೀಲಾ ಎರಡನೇ ಮದುವೆಯಾದರು. ಈ ಬಾರಿ ಅವರ ಪತಿ ಮುಂಬೈ ಮೂಲದ ಕವಿ ಡೊಮ್ ಮೋರೆಸ್. ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ಎರಡು ದಶಕಗಳ ನಂತರ ಅವರು ವಿಚ್ಛೇದನ ಪಡೆದರು. ಇದರಿಂದಾಗಿ ನಟಿ ಖಿನ್ನತೆಗೆ ಒಳಗಾಗಿ, ಎಲ್ಲರಿಂದ ದೂರವಿರಲು ಪ್ರಾರಂಭಿಸಿದರು. ಒಂಟಿಯಾಗಿ ಜೀವನ ನಡೆಸುತ್ತಿದ್ದ ಆಕೆ ಮಾದಕ ವ್ಯಸನಕ್ಕೂ ಒಳಗಾಗಿದ್ದರು ಎನ್ನಲಾಗಿದೆ.
ಲೀಲಾ ಅವರ ತಂದೆ 1991 ರಲ್ಲಿ ನಿಧನರಾದರು. ಕಾರಣಾಂತರದಿಂದ ತಮ್ಮ ಹತ್ತಿರ ಇದ್ದ ಹಣವೆಲ್ಲ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿತು. ಖರ್ಚಿಗೆ ಬೇರೆಯವರನ್ನು ತನ್ನ ಮನೆಯಲ್ಲಿ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ಎದರುಸಿದರು. ಜುಲೈ 2009 ರಲ್ಲಿ, ಲೀಲಾ ನಾಯ್ಡು ಅವರು ತಮ್ಮ 69ನೇ ವಯಸ್ಸಿನಲ್ಲಿ ಶ್ವಾಸಕೋಶದ ವೈಫಲ್ಯದಿಂದ ಮುಂಬೈನಲ್ಲಿ ನಿಧನರಾದರು.
ಲೀಲಾ ನಾಯ್ಡು ಅವರು ತಮ್ಮ ವೃತ್ತಿಜೀವನದಲ್ಲಿ 'ಯೇ ರಸ್ತೆ ಹೈ ಪ್ಯಾರ್ ಕೆ', 'ಉಮೀದ್', 'ಅಬ್ರು' ಮತ್ತು 'ದಿ ಗುರು' ಮುಂತಾದ ಹಿಟ್ ಸಿನಿಮಾಗಳನ್ನು ನಟಿಸಿದ್ದಾರೆ. ಹಿಂದಿ ಚಿತ್ರಗಳಲ್ಲದೆ ಕೆಲವು ಇಂಗ್ಲಿಷ್ ಚಿತ್ರಗಳಲ್ಲೂ ನಟಿಸಿದ್ದಾರೆ. ಹಲವಾರು ವಿದೇಶಿ ಚಿತ್ರಗಳಿಗೂ ಡಬ್ಬಿಂಗ್ ನೀಡಿದ್ದಾರೆ...