Aamir khan: ಈಗಾಗಲೇ 22 ಮನೆ.. ಮತ್ತೊಂದು ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಅಮೀರ್ ಖಾನ್, ಬೆಲೆ ಎಷ್ಟು ಗೊತ್ತಾ?

Aamir Khan Laxury apartment: ಬಾಲಿವುಡ್ ಸ್ಟಾರ್‌ ನಟ ಅಮೀರ್ ಖಾನ್ ಮುಂಬೈನ ಬಾಂದ್ರಾದಲ್ಲಿ ಮತ್ತೊಂದು ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.

Written by - Chetana Devarmani | Last Updated : Jun 29, 2024, 07:44 AM IST
  • ಬಾಲಿವುಡ್ ಸ್ಟಾರ್‌ ನಟ ಅಮೀರ್ ಖಾನ್
  • ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಅಮೀರ್ ಖಾನ್
  • ಅಮೀರ್ ಖಾನ್ ಅಪಾರ್ಟ್‌ಮೆಂಟ್ ಬೆಲೆ ಎಷ್ಟು ಗೊತ್ತಾ?
Aamir khan: ಈಗಾಗಲೇ 22 ಮನೆ.. ಮತ್ತೊಂದು ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಅಮೀರ್ ಖಾನ್, ಬೆಲೆ ಎಷ್ಟು ಗೊತ್ತಾ? title=

Aamir Khan New house: ಬಾಲಿವುಡ್ ನಟ ಅಮೀರ್ ಖಾನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈಗಾಗಲೇ ಹಲವೆಡೆ ಸ್ವಂತ ಮನೆ ಖರೀದಿಸಿದ್ದಾರೆ. ಇತ್ತೀಚೆಗಷ್ಟೇ ಅಮೀರ್ ಖಾನ್ ಅವರ ಮಗಳು ಇರಾ ಖಾನ್ ತಮ್ಮ ಜಿಮ್ ಟ್ರೈನರ್ ಶಿಕ್ರೆ ಅವರನ್ನು ವಿವಾಹವಾದರು. 

ನಟ ಅಮೀರ್ ಖಾನ್ ಈಗಾಗಲೇ ಹಲವೆಡೆ ಆಸ್ತಿ ಮತ್ತು ಮನೆಗಳನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈ ಮತ್ತು ಪಂಚಗಣಿಯಲ್ಲಿ ಹಲವು ಮನೆಗಳಿವೆ. ಅಮೀರ್ ಖಾನ್ ಒಟ್ಟು ಆಸ್ತಿ 1,780 ಕೋಟಿ ರೂಪಾಯಿ. ಅಮೀರ್ ಖಾನ್ ನಟ, ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಮತ್ತು ದೂರದರ್ಶನದಲ್ಲಿ ಟಾಕ್-ಶೋ ಹೋಸ್ಟ್ ಆಗಿ ಕಾರ್ಯನಿರ್ವಹಿಸುತ್ತಾರೆ.  

ಅಮೀರ್ ಖಾನ್ ವಿಶೇಷವಾಗಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಅಮೀರ್ ಖಾನ್ ಈ ಹಿಂದೆ ಮುಂಬೈನಲ್ಲಿ ರಿಯಲ್ ಎಸ್ಟೇಟ್‌ನಲ್ಲಿ 35 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಸಾಂತಾಕ್ರೂಜ್ ವೆಸ್ಟ್‌ನ ಎಸ್‌ವಿ ರಸ್ತೆಯಲ್ಲಿರುವ ಪ್ರೈಮ್ ಪ್ಲಾಜಾ ಕಟ್ಟಡ ಹೊಂದಿದ್ದಾರೆ.

ಇದನ್ನೂ ಓದಿ: ಎಂಟು ವಾರಗಳ ನಂತರ ಓಟಿಟಿಗೆ ಬರಲಿದೆ ಕಲ್ಕಿ 2898 AD, ಯಾವಾಗ? ಯಾವುದರಲ್ಲಿ? ಎಂಬುವುದರ ಕುರಿತು ಮಾಹಿತಿ ಇಲ್ಲಿದೆ!!

ಇತ್ತೀಚೆಗೆ ಅಮೀರ್ ಖಾನ್ ಮುಂಬೈನ ಬಾಂದ್ರಾದಲ್ಲಿ ಮತ್ತೊಂದು ಮನೆ ಖರೀದಿಸಿದ್ದಾರೆ. ಅಮೀರ್ ಖಾನ್ ಬಾಂದ್ರಾದ ಪಾಲಿ ಹಿಲ್‌ನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಇದಲ್ಲದೆ, ಸ್ಟಾರ್ ಮರೀನಾದಲ್ಲಿ ಇನ್ನೂ ಎರಡು ಮತ್ತು ಬೆಲ್ಲಾ ವಿಸ್ಟಾದಲ್ಲಿ ಒಂದು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದಾರೆ. 

1027 ಚದರ ಅಡಿ ಕಾರ್ಪೆಟ್ ಏರಿಯಾ ಇರುವ ಆ ಮನೆಯನ್ನು ಅಮೀರ್ ಖಾನ್ ಖರೀದಿಸಿದ್ದಾರೆ. ನೋಂದಣಿ ದಾಖಲೆಗಳ ಪ್ರಕಾರ, ಜೂನ್ 25 ರಂದು 9.75 ಕೋಟಿಗೆ ಈ ಮನೆ ಖರೀದಿಸಲಾಗಿದೆ. ಇದಕ್ಕಾಗಿ ರೂ. 58.5 ಲಕ್ಷ ಮುದ್ರಾಂಕ ಶುಲ್ಕ ಮತ್ತು ರೂ.30 ಸಾವಿರ ನೋಂದಣಿ ಶುಲ್ಕ ಪಾವತಿಸಲಾಗಿದೆ.

ಮಹಾರಾಷ್ಟ್ರದ ಪಂಚಗಣಿಯಲ್ಲಿ ಕೂಡ ಅಮೀರ್ ಖಾನ್ ಮನೆ ಹೊಂದಿದ್ದಾರೆ. 2012-2013ರಲ್ಲಿ ಅಮೀರ್ ದಂಪತಿ ಹೆಚ್ಚು ಸಮಯ ಇಲ್ಲಿಯೇ ಇರುತ್ತಿದ್ದರು. ಅಮೀರ್ ಖಾನ್ ಉತ್ತರ ಪ್ರದೇಶದ ಶಹಾಬಾದ್‌ನಲ್ಲಿ 22 ಮನೆಗಳನ್ನು ಹೊಂದಿದ್ದಾರೆ. ಈ ಮನೆಗಳು ಅಮೀರ್ ಖಾನ್ ಅವರ ಪಿತ್ರಾರ್ಜಿತ ಆಸ್ತಿಯಾಗಿದೆ. 

ಇದನ್ನೂ ಓದಿ: ಕೆಜಿಎಫ್, ಕಾಟೇರ, ಕಾಂತಾರ ಬಾಕ್ಸ್ ಆಫೀಸ್ ದಾಖಲೆಗಳನ್ನು ಧ್ವಂಸ ಮಾಡಿ ಕಲ್ಕಿ ಗಳಿಸಿದ್ದೇಷ್ಟು..? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News