Pension Plan: ವೃದ್ಧಾಪ್ಯದಲ್ಲಿ ಹಣದ ಸಹಾಯ ಬೇಕೆ? ಸರ್ಕಾರದ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ!

ಪ್ರಧಾನ್ ಮಂತ್ರಿ ಕಿಸಾನ್ ಮಧನ್ ಯೋಜನೆಯಡಿ ರೈತರಿಗೆ ಪಿಂಚಣಿ

Last Updated : Mar 24, 2021, 01:53 PM IST
  • ಕೇಂದ್ರ ಸರ್ಕಾರ ನಡೆಸುತ್ತಿರುವ ಕೆಲವು ವಿಶೇಷ ಯೋಜನೆಗಳಿವೆ
  • ಯಾವುದೇ ಭಾರತೀಯರು ಕೂಡ ಅಟಲ್ ಪಿಂಚಣಿ ಯೋಜನೆ (APY) ನಲ್ಲಿ ಹೂಡಿಕೆ ಮಾಡಬಹುದು
  • ಪ್ರಧಾನ್ ಮಂತ್ರಿ ಕಿಸಾನ್ ಮಧನ್ ಯೋಜನೆಯಡಿ ರೈತರಿಗೆ ಪಿಂಚಣಿ
Pension Plan: ವೃದ್ಧಾಪ್ಯದಲ್ಲಿ ಹಣದ ಸಹಾಯ ಬೇಕೆ? ಸರ್ಕಾರದ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ! title=

ನವದೆಹಲಿ: ಕೇಂದ್ರ ಸರ್ಕಾರ ನಡೆಸುತ್ತಿರುವ ಕೆಲವು ವಿಶೇಷ ಯೋಜನೆಗಳಿವೆ, ಸರ್ಕಾರವು ದೇಶದ ಬಡ ಜನರಿಗೆ, ರೈತರು ಮತ್ತು ಹಿರಿಯ ನಾಗರಿಕರಿಗಾಗಿ ಅನೇಕ ವಿಶೇಷ ವ್ಯವಸ್ಥೆಗಳನ್ನು ಮಾಡಿದ್ದು ಅಂತಹ 4 ಸರ್ಕಾರಿ ಯೋಜನೆಗಳ (ಸರ್ಕಾರಿ ಯೋಜನೆಗಳು) ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ, ಇದರಲ್ಲಿ ಹೂಡಿಕೆ ಮಾಡಬಹುದಾಗಿದೆ.

ಅಟಲ್ ಪಿಂಚಣಿ ಯೋಜನೆ(Atal Pension Yojana): ಯಾವುದೇ ಭಾರತೀಯರು ಕೂಡ ಅಟಲ್ ಪಿಂಚಣಿ ಯೋಜನೆ (APY) ನಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಗಾಗಿ, ನೀವು ಬ್ಯಾಂಕ್ ಖಾತೆಯನ್ನು ಹೊಂದಿರಬೇಕಾಗಿದ್ದು. ಯೋಜನೆಯ ಲಾಭ ಪಡೆಯಲು, ನೀವು 18 ರಿಂದ 40 ವರ್ಷ ವಯಸ್ಸಿನವರಾಗಿರಬೇಕು. ಅಲ್ಲದೆ, ಎಪಿವೈ ಅಡಿಯಲ್ಲಿ ಪಿಂಚಣಿ ಪಡೆಯಲು, ನೀವು ಕನಿಷ್ಠ 20 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗಿದೆ. ಪಿಂಚಣಿ ಯೋಜನೆ (ಎಪಿವೈ) ಅಡಿಯಲ್ಲಿ ಕನಿಷ್ಠ 1,000 ರೂ ಪಿಂಚಣಿ ಮತ್ತು ಗರಿಷ್ಠ 5,000 ರೂ ಮಾಸಿಕ ಪಿಂಚಣಿ ಪಡೆಯಬಹುದಾಗಿದೆ. ಈ ಯೋಜನೆಯ ಅಡಿಯಲ್ಲಿ 60 ವರ್ಷದಿಂದ, ನೀವು ಎಪಿವೈ ಅಡಿಯಲ್ಲಿ ಪಿಂಚಣಿ ಪಡೆಯಲು ಪ್ರಾರಂಭಿಸುತ್ತೀರಿ.

Fact Check: ಗುಮಾಸ್ತ ಹುದ್ದೆಗಳಿಗೆ ಐಆರ್‌ಸಿಟಿಸಿ ಆಫರ್ ಲೆಟರ್ ನೀಡಿದೆಯೇ? ಇಲ್ಲಿದೆ ಸತ್ಯಾಸತ್ಯತೆ

ಪಿಎಂ ಶ್ರಮಯೋಗಿ ಮಾನ್ ಧನ್ ಯೋಜನೆ(PM Shram Yogi Mandhan Yojana): ಈ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ 2019 ರಲ್ಲಿ ಪ್ರಾರಂಭಿಸಿದೆ. ಈ ಯೋಜನೆಯಡಿ ಅಸಂಘಟಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರಿಗೆ ಸರ್ಕಾರದಿಂದ ಪಿಂಚಣಿ ನೀಡಲಾಗುತ್ತದೆ. ಈ ಯೋಜನೆಯಡಿ, 60 ವರ್ಷದ ನಂತರ, ಪ್ರತಿ ತಿಂಗಳು 3000 ರೂಪಾಯಿಗಳ ಪಿಂಚಣಿ ನೀಡಲಾಗುವುದು. ಅಂದರೆ, ನಿಮಗೆ ವಾರ್ಷಿಕವಾಗಿ 36 ಸಾವಿರ ರೂಪಾಯಿಗಳು ಸಿಗುತ್ತವೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಾರ, ಈ ಯೋಜನೆಯ ಮೂಲಕ ಈವರೆಗೆ ಸುಮಾರು 43.7 ಲಕ್ಷ ಜನರನ್ನು ಸೇರಿಸಲಾಗಿದೆ.

Pakistan National Day: ಇಮ್ರಾನ್ ಖಾನ್‌ಗೆ ಪತ್ರ ಬರೆದ ಪ್ರಧಾನಿ ಮೋದಿ ನೀಡಿದ ಸಲಹೆ ಇದು

PM ಮನ್‌ಧನ್ ಯೋಜನೆ (PM Mandhan Yojna): ಪ್ರಧಾನ್ ಮಂತ್ರಿ ಕಿಸಾನ್ ಮನ್‌ಧನ್ ಯೋಜನೆಯಡಿ ರೈತರಿಗೆ ಪಿಂಚಣಿ ನೀಡಲಾಗುತ್ತದೆ. 18 ರಿಂದ 40 ವರ್ಷದೊಳಗಿನ ಯಾವುದೇ ರೈತ ಪಿಎಂ ಕಿಸಾನ್ ಮನ್‌ಧನ್ ಯೋಜನೆಯಡಿ ಭಾಗವಹಿಸಬಹುದಾಗಿದೆ. 60 ವರ್ಷದ ನಂತರ ರೈತರಿಗೆ ತಿಂಗಳಿಗೆ 3 ಸಾವಿರ ರೂಪಾಯಿ ಅಥವಾ ಯೋಜನೆಯಡಿ 36 ಸಾವಿರ ರೂಪಾಯಿ ವಾರ್ಷಿಕ ಪಿಂಚಣಿ ಸಿಗುತ್ತದೆ. ಈ ಯೋಜನೆಗೆ ಈವರೆಗೆ ಸುಮಾರು 20 ಲಕ್ಷ ರೈತರು ಸಂಪರ್ಕ ಹೊಂದಿದ್ದಾರೆ.

ಮಾರ್ಚ್ 24 ರಿಂದ ಈ ರಾಜ್ಯದಲ್ಲಿ ಶಾಲಾ ಕಾಲೇಜುಗಳು ಬಂದ್...!

ಪ್ರಧಾನ್ ಮಂತ್ರಿ ಸಣ್ಣ ಉದ್ಯಮ ಮನ್‌ಧನ್ ಯೋಜನೆ(PM Small Business Mandhan Yojana): ಪ್ರಧಾನಿ ನರೇಂದ್ರ ಮೋದಿ ಅವರು 2019 ರ ಸೆಪ್ಟೆಂಬರ್‌ನಲ್ಲಿ ಜಾರ್ಖಂಡ್‌ನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದರು. ಇದು ಮುಖ್ಯವಾಗಿ ಸಣ್ಣ ಉದ್ಯಮಿಗಳಿಗೆ ಪಿಂಚಣಿ ಯೋಜನೆಯಾಗಿದೆ. ಸಣ್ಣ ಉದ್ಯಮಿಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಉಪಕ್ರಮ ಇದಾಗಿದ್ದು, ಇದರ ಅಡಿಯಲ್ಲಿ ಅವರಿಗೆ 60 ವರ್ಷದ ನಂತರ ಮಾಸಿಕ 3000 ರೂ ಸಿಗಲಿದೆ.

ಕೊರೊನಾವೈರಸ್ ಪ್ರಕರಣ ಹೆಚ್ಚಳ ಹಿನ್ನಲೆಯಲ್ಲಿ ಹೋಳಿ, ನವರಾತ್ರಿಗೆ ನಿಷೇಧ ಹೇರಿದ ದೆಹಲಿ ಸರ್ಕಾರ

ಪಿಂಚಣಿ ಯೋಜನೆಯ ಲಾಭ ಪಡೆಯಲು, ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ ನೋಂದಾಯಿಸಿಕೊಳ್ಳಬಹುದು. ಪಿಂಚಣಿ ಯೋಜನೆಯಲ್ಲೂ ಸರ್ಕಾರ ಸಮಾನವಾಗಿ ಕೊಡುಗೆ ನೀಡಲಿದೆ. ವಿಶೇಷವೆಂದರೆ ಈ ಯೋಜನೆಯ ಲಾಭ ಪಡೆಯಲು, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯನ್ನು ಹೊರತುಪಡಿಸಿ ಯಾವುದೇ ದಾಖಲೆಗಳು ಅಗತ್ಯವಿಲ್ಲ.

Hafta Vasooli Case - ಸಂಕಷ್ಟದಲ್ಲಿ ಉದ್ಧವ ಸರ್ಕಾರ, MHAಗೆ 6.3 ಜಿಬಿ ಸಾಕ್ಸ್ಯ ಸಲ್ಲಿಸಿದ ಫಡ್ನವಿಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News