ಜಗತ್ತಿನ ಲಕ್ಷಾಂತರ ಜನರು ತಮ್ಮ ಭಾಷಾ ಅನುವಾದಕ್ಕಾಗಿ ಗೂಗಲ್ ಅನುವಾದವನ್ನು ಬಳಸುತ್ತಾರೆ ಮತ್ತು ಜನರಿಗೆ ಹಲವು ವರ್ಷಗಳಿಂದ ಸಹಾಯ ಮಾಡುತ್ತಾ ಬಂದಿದೆ ಮತ್ತು ಅದರ ಜೊತೆಗೆ ಸದ್ಯ ಗೂಗಲ್ ವೈಶಿಷ್ಟ್ಯವನ್ನು ಘೋಷಿಸಿದೆ.
Google ಅನುವಾದವು ಹೊಸ ನವೀಕರಣವನ್ನು ಪ್ರಕಟಿಸಿದ್ದು, Google ಅನುವಾದ ಅಪ್ಲಿಕೇಶನ್ ಮೂಲಕ ಬೆಂಬಲಿಸುವ ವಿವಿಧ ಭಾಷೆಗಳನ್ನು ವಿಸ್ತರಿಸಲು Google PaLM 2 ಬೆಂಬಲದೊಂದಿಗೆ AI ಅನ್ನು ಬಳಸುತ್ತಿದೆ ಎಂದು ಗೂಗಲ್ ಹೇಳಿದೆ. Google ಇದೀಗ 110 ಹೊಸ ಭಾಷೆಗಳನ್ನು Google ಅನುವಾದಕ್ಕೆ ಸೇರ್ಪಡೆ ಮಾಡಿದೆ. ಈ ಮೂಲಕ ಆಲ್ಫಾಬೆಟ್ Inc. ಕಂಪನಿಯು ಇದು ತನ್ನ ಅತಿದೊಡ್ಡ ವಿಸ್ತರಣೆಯಾಗಿದೆ ಎಂದು ಹೇಳಿಕೊಂಡಿದೆ.
ಇದನ್ನು ಓದಿ : ಜಾರಕಿಹೊಳಿ ಬ್ರದರ್ಸ್ ಮಣಿಸಲು ಲಕ್ಷ್ಮಣ ಸವದಿಗೆ ಒಲಿಯುತ್ತಾ ಕೆಪಿಸಿಸಿ ಪಟ್ಟ..!?
ಗೂಗಲ್ ಅನುವಾದವು 2006 ರಲ್ಲಿ ಮೊದಲು ಪರಿಚಯಕ್ಕೆ ಬಂತು ಅದಾದ ಬಳಿಕ 2024 ರ ಜೂನ್ ವೇಳೆಗೆ ಇದು ತನ್ನಲ್ಲಿ 243 ಭಾಷೆಗಳನ್ನು ಒಳಗೊಂಡಿದೆ. ಜನರ ಬಳಕೆಗೆ ಸಹಾಯವಾಗುವಂತೆ ಗೂಗಲ್ ಅನುವಾದವು ಹೊಸ ತಂತ್ರಜ್ಞಾನಗಳನ್ನು ಸತತವಾಗಿ ಅನ್ವಯಿಸಿಕೊಳ್ಳುತ್ತಲೇ ಇದೆ ಮತ್ತು ಇದಕ್ಕೂ ಮೊದಲು 2022 ರಲ್ಲಿ ಕಂಪನಿಯು ಝೀರೋ-ಶಾಟ್ ಮೆಷಿನ್ ಅನುವಾದವನ್ನು ಬಳಸಿಕೊಂಡು 24 ಹೊಸ ಭಾಷೆಗಳನ್ನು ಸೇರಿಸಿತ್ತು. ಈ ತಂತ್ರದ ಮೂಲಕ ಯಂತ್ರ ಕಲಿಕೆಯ ಮಾದರಿಗಳು ಹೇಗೆ ಅನುವಾದಿಸಬೇಕೆಂದು ಕಲಿಯುವಂತಿತ್ತು.
ಇದನ್ನು ಓದಿ : ಪುಷ್ಪಾ ವಿಲನ್ ಫಹಾದ್ ಫಾಜಿಲ್ ವಿರುದ್ಧ ಪ್ರಕರಣ ದಾಖಲು!
ಇದಾದ ಬಳಿಕ ಇದೀಗ ಕಂಪನಿಯು ಜಗತ್ತಿನಲ್ಲಿ ಹೆಚ್ಚು ಚಾಲ್ತಿಯಲ್ಲಿರುವ 1,000 ಭಾಷೆಗಳನ್ನು ಬೆಂಬಲಿಸುವ AI ಮಾದರಿಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಸದ್ಯ ಗೂಗಲ್ ತನ್ನ ಅಧಿಕೃತ ಬಿಡುಗಡೆಯಲ್ಲಿ ಹೊಸ ಭಾಷೆಗಳು 614 ಮಿಲಿಯನ್‌ಗಿಂತಲೂ ಹೆಚ್ಚು ಮಾತನಾಡುವವರನ್ನು ಪ್ರತಿನಿಧಿಸುತ್ತದೆ. ಇವುಗಳಲ್ಲಿ 100 ಮಿಲಿಯನ್‌ಗಿಂತಲೂ ಹೆಚ್ಚು ಮಾತನಾಡುವ ಪ್ರಮುಖ ಭಾಷೆಗಳಾಗಿವೆ, ಈ ಭಾಷಾ ವಿಸ್ತರಣೆಯಲ್ಲಿ ಫೋನ್, ಲುವೊ, ಗಾ, ಕಿಕೊಂಗೊ, ಸ್ವಾತಿ, ವೆಂಡಾ ಮತ್ತು ವುಲ್ಫ್‌ನಂತಹ ಹೆಚ್ಚಿನ ಆಫ್ರಿಕನ್ ಭಾಷೆಗಳನ್ನು ಸೇರ್ಪಡೆಗೊಳಿಸಿವೆ. ಅದರ ಜೊತೆಗೆ ಏಳು ಭಾರತೀಯ ಭಾಷೆಗಳಾದ ಅವಧಿ, ಬೋಡೋ, ಖಾಸಿ, ಕೊಕ್ಬೊರೊಕ್, ಮಾರ್ವಾಡಿ, ಸಂತಾಲಿ ಮತ್ತು ತುಳುವನ್ನು ಸಹ ಸೇರ್ಪಡೆಗಳಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ