Darshan-Kiccha Sudeep: ಕನ್ನಡ ಸಿನಿಮಾರಂಗ ಎಂದರೇ ನಮಗೆ ಮೊದಲು ಕಣ್ಣಮುಂದೆ ಬರೋದು ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್ ಅವರಂತಹ ದಿಗ್ಗಜ ನಟರು.. ಇವರೆಲ್ಲರೂ ಆಗಿನ ಕಾಲದವರಾದರೇ ಸದ್ಯ ಈ ಸಿನಿರಂಗವನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸತತ ಪ್ರಯತ್ನ ಮಾಡುತ್ತಿರುವ ನಟರ ಪಟ್ಟಿಯಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಅಗ್ರಸ್ಥಾನದಲ್ಲಿದ್ದಾರೆ..
ಮೆಜೆಸ್ಟಿಕ್, ಸ್ಪರ್ಶದಂತಹ ಅದ್ಭುತ ಸಿನಿಮಾಗಳ ಮೂಲಕ ಕನ್ನಡ ಸಿನಿರಂಗಕ್ಕೆ ಪರಿಚಯವಾದ ಕಿಚ್ಚ ಸುದೀಪ್ ಹಾಗೂ ದರ್ಶನ್ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯವಾಗಿರುವ ನಟರಾಗಿದ್ದಾರೆ..
ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಈ ಇಬ್ಬರೂ ನಟರು ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರಂತೆ ಕುಚಿಕುಗಳಾಗಿದ್ದರು..
ಆದರೆ ದಚ್ಚು ಕಿಚ್ಚು ಕೆಲವು ಮನಸ್ಥಾಪಗಳಿಂದ ದೂರವಾದವರು ಇಂದಿಗೂ ಒಬ್ಬರಿಗೊಬ್ಬರು ಪರಸ್ಪರ ಮಾತನಾಡಿಲ್ಲ.. ಇದು ಎಷ್ಟೋ ಕನ್ನಡಾಭಿಮಾನಿಗಳಿಗೆ ಬೇಸರ ತಂದಿದೆ ಎಂದರೇ ತಪ್ಪಾಗುವುದಿಲ್ಲ..
ನಟ ದರ್ಶನ್ ಕ್ರಾಂತಿ ಸಿನಿಮಾದ ಪ್ರಮೋಷನ್ ಸಮಯದಲ್ಲಿ ಸರ್ಕಾರಿ ಶಾಲೆಯ ಬಗ್ಗೆ ಮಾತನಾಡುವಾಗ "ನಾನು ಓದಿದ್ದು 10ನೇ ತರಗತಿ" ಎಂದು ತಮ್ಮ ವಿದ್ಯಾಭ್ಯಾಸ ಎಷ್ಟು ಎನ್ನುವುದನ್ನು ಹೇಳಿಕೊಂಡಿದ್ದರು.
ಇನ್ನು ಮೂಲತಃ ಶಿವಮೊಗ್ಗದವರಾದ ಸುದೀಪ್ ಶಿಕ್ಷಣಕ್ಕಾಗಿ ಬೆಂಗಳುರಿಗೆ ಬಂದು ಇಂಜಿನಿಯರಿಂಗ್ ನಲ್ಲಿ ಕೈಗಾರಿಕಾ ಮತ್ತು ಉತ್ಪಾದನಾ ವಿಷಯಕ್ಕೆ ಸಂಬಂಧಿಸಿದ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ.