Modi Government ನೆರವಿನಿಂದ ಈ ಬಿಸಿನೆಸ್ ಆರಂಭಿಸಿ ತಿಂಗಳಿಗೆ 1 ಲಕ್ಷಕ್ಕೂ ಅಧಿಕ ಸಂಪಾದಿಸಿ

ಕೇಂದ್ರ ಸರ್ಕಾರದ ಇದೀಗ ಸಂಪೂರ್ಣ ಗಮನವನ್ನು ಇದೀಗ ಸ್ಥಳೀಯ ಉತ್ಪಾದನೆ, ಸ್ಥಳೀಯ ಉತ್ಪನ್ನಗಳು ಹಾಗೂ ಲಘು ಕೈಗಾರಿಕೆಗಳ ಮೇಲೆ ಕೇಂದ್ರೀಕರಿಸಿದೆ. ಇದು ಸ್ವಾವಲಂಭಿ ಭಾರತದ ಸರ್ಕಾರದ ಕನಸು ಈಡೇರಿಸುವತ್ತ ಇತ್ತ ಮೊದಲ ಹೆಜ್ಜೆಯಾಗಿದೆ.

Last Updated : May 14, 2020, 02:08 PM IST
Modi Government ನೆರವಿನಿಂದ ಈ ಬಿಸಿನೆಸ್ ಆರಂಭಿಸಿ ತಿಂಗಳಿಗೆ 1 ಲಕ್ಷಕ್ಕೂ ಅಧಿಕ ಸಂಪಾದಿಸಿ title=

ನವದೆಹಲಿ: ಕೇಂದ್ರ ಸರ್ಕಾರದ ಇದೀಗ ಸಂಪೂರ್ಣ ಗಮನವನ್ನು ಇದೀಗ ಸ್ಥಳೀಯ ಉತ್ಪಾದನೆ, ಸ್ಥಳೀಯ ಉತ್ಪನ್ನಗಳು ಹಾಗೂ ಲಘು ಕೈಗಾರಿಕೆಗಳ ಮೇಲೆ ಕೇಂದ್ರೀಕರಿಸಿದೆ. ಇದು ಸ್ವಾವಲಂಭಿ ಭಾರತದ ಸರ್ಕಾರದ ಕನಸು ಈಡೇರಿಸುವತ್ತ ಇತ್ತ ಮೊದಲ ಹೆಜ್ಜೆಯಾಗಿದೆ. ಖಾದಿ ಜೊತೆಗೆ ಇತರ ಗ್ರಾಮೀಣ ಕೈಗಾರಿಕೆಗಳನ್ನು ವಿಸ್ತರಿಸುವತ್ತ ಸರ್ಕಾರ ಗಮನ ಹರಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಹೆಚ್ಚಿಸಲು ಸರ್ಕಾರ ದೊಡ್ಡ ಪ್ರಮಾಣದಲ್ಲಿ ಜೇನು ಉತ್ಪಾದನೆಗೆ ಉತ್ತೇಜನ ನೀಡುತ್ತಿದೆ.

ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವೂ ಇದಕ್ಕಾಗಿ ನೀತಿಯೊಂದನ್ನು ಸಿದ್ಧಪಡಿಸಿದೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಕೂಡ ಕಳೆದ ಎರಡು ವರ್ಷಗಳಲ್ಲಿ ದೇಶದ ರೈತರಿಗೆ ಹಾಗೂ ನಿರುದ್ಯೋಗಿ ಯುವಕರಿಗೆ ಲಕ್ಷಕ್ಕೂ ಅಧಿಕ ಧನಸಹಾಯ ಒದಗಿಸಿದೆ. 'ಹನಿ ಮಿಶನ್' ಅಡಿಯಲ್ಲಿ ಆಯೋಗ ಈ ಧನಸಹಾಯ ನೀಡಿದೆ.  ಒಂದು ವೇಳೆ ನೀವೂ ಕೂಡ ನಿಮ್ಮ ಸ್ವಂತ ಉದ್ಯಮವನ್ನು ಸ್ಥಾಪಿಸಲು ಯೋಜನೆ ರೂಪಿಸುತ್ತಿದ್ದರೆ, ಹನಿ ಹೌಸ್ ಅಥವಾ ಹನಿ ಪ್ರೊಸೆಸಿಂಗ್ ಪ್ಲಾಂಟ್ ಸ್ಥಾಪಿಸಬಹುದಾಗಿದೆ.

ಏನಿದು 'ಹನಿ ಮಿಷನ್'
'ಹನಿ ಮಿಷನ್' ಇದು ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಆರಂಭಿಸಿರುವ ಒಂದು ಉಪಕ್ರಮವಾಗಿದೆ. ಇದರ ಮೂಲಕ ಹಣ ಸಂಪಾದಿಸಲು ಬಯಸುವ ರೈತರು ಮತ್ತು ದೇಶದ ನಿರುದ್ಯೋಗಿ ಯುವಕರು ತಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಿ ದೊಡ್ಡ ಪ್ರಮಾಣದ ಆದಾಯವನ್ನು ಪಡೆಯಬಹುದಾಗಿದೆ. ಈ ಮಿಷನ್ ಅಡಿಯಲ್ಲಿ ಜನರು ಜೇನುಸಾಕಣೆ ಮಾಡುವ ಮೂಲಕ ಹಣಗಳಿಸಬಹುದು. ಅಷ್ಟೇ ಅಲ್ಲ ಈ ಉದ್ಯಮದಲ್ಲಿ ಜೇನು ತೆಗೆಯುವಾಗ ಜೇನು ನೊಣಗಳು ಕೂಡ ಸಾವನ್ನಪ್ಪುವುದಿಲ್ಲ. ಏಕೆಂದರೆ ಅಂತಹ ಒಂದು ನೂತನ ತಂತ್ರಜ್ಞಾನ ಇದೀಗ ಅಸ್ತಿತ್ವದಲ್ಲಿದೆ. ಅಷ್ಟೇ ಅಲ್ಲ ಇದರಲ್ಲಿ ಮೇನ ಹಾಗೂ ಪರಾಗವನ್ನೂ ಕೂಡ ತಯಾರಿಸಲಾಗುತ್ತದೆ. ಸದ್ಯ ಈ ಉದ್ಯಮದತ್ತ ರೈತರು ಮಾತ್ರವೇ ಅಲ್ಲ ನಿರುದ್ಯೋಗಿ ಯುವಕರೂ ಕೂಡ ಆಕರ್ಷಿತರಾಗುತ್ತಿದ್ದಾರೆ.

ಸರ್ಕಾರ ಕೂಡ ಸಹಾಯ ಒದಗಿಸುತ್ತದೆ
ಈ ಯೋಜನೆಯ ಅಡಿ ಒಂದು ವೇಳೆ ನೀವೂ ಕೂಡ ಸಂಸ್ಕರಣಾ ಘಟಕ ಸ್ಥಾಪಿಸಲು ಬಯಸುತ್ತಿದ್ದರೆ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ನಿಮಗೆ ಶೇ.65 ರಷ್ಟು ಸಾಲ ಸೌಲಭ್ಯ ಒದಗಿಸುತ್ತದೆ. ಜೊತೆಗೆ ಶೇ. 25ರಷ್ಟು ಸಬ್ಸಿಡಿ ಕೂಡ ನೀಡುತ್ತದೆ. ಅಂದರೆ ನಿಮ್ಮ ಮೂಲ ಹೂಡಿಕೆ ಕೇವಲ ಶೇ.10 ರಷ್ಟು ಮಾತ್ರ ಇರಲಿದೆ.

ಸಿಗಲಿದೆ 16 ಲಕ್ಷ ರೂ. ಸಾಲ ಸೌಲಭ್ಯ
KVIC ಪ್ರಕಾರ ಒಂದು ವೇಳೆ ನೀವು ವಾರ್ಷಿಕವಾಗಿ 20 ಸಾವಿರ ಕೆ.ಜಿ ಜೇನುತುಪ್ಪ ಸಂಸ್ಕರಿಸುವ ಘಟಕ ಸ್ಥಾಪಿಸಲು ಬಯಸುತ್ತಿದ್ದರೆ. ಅದಕ್ಕಾಗಿ 24.5 ಲಕ್ಷ ರೂ. ವೆಚ್ಚ ತಗಲುತ್ತದೆ. ಇದಕ್ಕಾಗಿ ನಿಮಗೆ ಆಯೋಗ 16 ಲಕ್ಷ ರೂ. ಸಾಲ ಸೌಲಭ್ಯ ನೀಡಿ, 6.15 ಲಕ್ಷ ರೂ.ಮಾರ್ಜಿನಲ್ ಮನಿ ರೂಪದಲ್ಲಿ ನೀಡುತ್ತದೆ. ನೀವು ನಿಮ್ಮ ವತಿಯಿಂದ ಕೇವಲ 2.35 ಲಕ್ಷ ರೂ. ಹೂಡಿಕೆ ಮಾಡಬೇಕು.

ವರ್ಷಕ್ಕೆ 1 ಲಕ್ಷಕ್ಕೂ ಅಧಿಕ ಸಂಪಾದನೆ ಮಾಡುವ ಅವಕಾಶ
ಈ ಕುರಿತು ಹೇಳಿಕೆ ನೀಡುವ KVIC, ಒಂದು ವೇಳೆ ನೀವು ವಾರ್ಷಿಕವಾಗಿ 20 ಕೆ.ಜಿ ಜೇನುತುಪ್ಪ ಉತ್ಪಾದಿಸಿದರೆ ಮತ್ತು ಅದರಲ್ಲಿನ ಶೇ.4 ರಷ್ಟನ್ನು ವರ್ಕಿಂಗ್ ಲಾಸ್ ಎಂದು ಪರಿಗಣಿಸಿದರೆ, 250 ರೂ. ಪ್ರತಿ ಕೆ.ಜಿ ಲೆಕ್ಕದಲ್ಲಿ ನೀವು ವಾರ್ಷಿಕವಾಗಿ 48 ಲಕ್ಷ ಸಂಪಾದಿಸಬಹುದು ಎಂದಿದೆ. ಇದರಲ್ಲಿ ನೀವು ನಿಮ್ಮ ಎಲ್ಲ ಖರ್ಚು ಅಂದರೆ ಸುಮಾರು 34.5 ಲಕ್ಷ ರೂ ವಜಾಗೊಳಿಸಿದರೆ ನಿಮಗೆ ವಾರ್ಷಿಕವಾಗಿ 13.85 ಲಕ್ಷ ನಿವ್ವಳ ಆದಾಯ ಬರಲಿದೆ. ಇದರ ಅರ್ಥ ನೀವು ಮಾಸಿಕ 1 ಲಕ್ಷಕ್ಕೂ ಅಧಿಕ ಸಂಪಾದಿಸಬಹುದು.

Trending News