Viral News: ಗದ್ದೆಯಲ್ಲಿ ಆಲೂಗಡ್ಡೆ ಬದಲು ಹೊರಬಂದ ಚಿನ್ನದ ನಾಣ್ಯಗಳು..!

ಬಕ್ಸಾರ್‌ನ ಸೋನ್‌ಬರ್ಸಾ ಪೊಲೀಸ್ ಠಾಣೆಯ ಒಪಿ ಪ್ರದೇಶದ ಗಿರ್ಧರ್ ಬರಾವೊ ಗ್ರಾಮದಲ್ಲಿ ಆಲೂಗೆಡ್ಡೆ ಬೆಳೆದಿದ್ದ ಜಮೀನಿನಲ್ಲಿ ಕೆಲಸ ಮಾಡುವಾಗ ಮಹಿಳೆಯೊಬ್ಬರಿಗೆ ಪುರಾತನ ಚಿನ್ನದ ನಾಣ್ಯಗಳು ಸಿಕ್ಕಿವೆ.   

Written by - Puttaraj K Alur | Last Updated : Mar 25, 2022, 01:56 PM IST
  • ಬಕ್ಸಾರ್‌ನ ಗಿರ್ಧರ್ ಬರಾವೊ ಗ್ರಾಮದಲ್ಲಿ ಆಲೂಗೆಡ್ಡೆ ಬೆಳೆದಿದ್ದ ಜಮೀನಿನಲ್ಲಿ ಚಿನ್ನದ ನಾಣ್ಯ ಪತ್ತೆ
  • ಜಮೀನಿನಲ್ಲಿ ಆಲೂಗಡ್ಡೆ ಕೀಳುತ್ತಿದ್ದ ವೇಳೆ ಮಹಿಳೆಗೆ ಸಿಕ್ಕ ಪುರಾತನ ಕಾಲದ ಚಿನ್ನದ ನಾಣ್ಯಗಳು
  • ಚಿನ್ನದ ನಾಣ್ಯ ಸಿಕ್ಕ ಜಮೀನಿಗೆ ಗ್ರಾಮಸ್ಥರಿಗೆ ನಿರ್ಬಂಧ ವಿಧಿಸಿ ಪೊಲೀಸರಿಂದ ತನಿಖೆ
Viral News: ಗದ್ದೆಯಲ್ಲಿ ಆಲೂಗಡ್ಡೆ ಬದಲು ಹೊರಬಂದ ಚಿನ್ನದ ನಾಣ್ಯಗಳು..! title=
ಆಲೂಗೆಡ್ಡೆ ಬೆಳೆದಿದ್ದ ಜಮೀನಿನಲ್ಲಿ ಚಿನ್ನದ ನಾಣ್ಯ ಪತ್ತೆ!

ಬಕ್ಸಾರ್: ಗದ್ದೆಯಲ್ಲಿ ಕೆಲಸ ಮಾಡುವಾಗ ಆಲೂಗಡ್ಡೆ(Potato) ಬದಲು ಚಿನ್ನದ ನಾಣ್ಯಗಳು ಹೊರಬಂದರೆ ಹೇಗಾಗಬೇಡ! ಬಕ್ಸಾರ್ ಜಿಲ್ಲೆಯಲ್ಲಿ ಈ ರೀತಿಯ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಬಳಿಕ ಇದು ವ್ಯಾಪಕ ಚರ್ಚೆಗೂ ಗ್ರಾಸವಾಗಿದೆ.

ಮಹಿಳೆಗೆ ದೊರೆತ ಚಿನ್ನದ ನಾಣ್ಯಗಳು

ಬಕ್ಸಾರ್‌ನ ಸೋನ್‌ಬರ್ಸಾ ಪೊಲೀಸ್ ಠಾಣೆ(Police station sonbarsa)ಯ ಒಪಿ ಪ್ರದೇಶದ ಗಿರ್ಧರ್ ಬರಾವೊ ಗ್ರಾಮದಲ್ಲಿ ಆಲೂಗೆಡ್ಡೆ ಬೆಳೆದಿದ್ದ ಜಮೀನಿನಲ್ಲಿ ಕೆಲಸ ಮಾಡುವಾಗ ಮಹಿಳೆಯೊಬ್ಬರಿಗೆ ಪುರಾತನ ಚಿನ್ನದ ನಾಣ್ಯಗಳು ಸಿಕ್ಕಿವೆ.   

ಜಮೀನಿನಲ್ಲಿ ಬಂಗಾರದ ನಾಣ್ಯಗಳು!

ಮಾಹಿತಿ ಪ್ರಕಾರ ಮಹಿಳೆಯೊಬ್ಬರು ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಆಲೂಗಡ್ಡೆ(Potato) ಕೀಳುತ್ತಿದ್ದ ಅವರಿಗೆ ಮೊದಲು 1 ಚಿನ್ನದ ನಾಣ್ಯ ಸಿಕ್ಕಿದೆ. ನಂತರ ಅವರು ನಾಣ್ಯ ಸಿಕ್ಕ ಜಾಗದಲ್ಲಿಯೇ ಅಗೆಯಲು ಪ್ರಾರಂಭಿಸಿದ್ದಾರೆ. ಬಳಿಕ ಅವರಿಗೆ ಮತ್ತೆ 2 ನಾಣ್ಯಗಳು ಸಿಕ್ಕಿವೆ. ಗದ್ದೆಯಲ್ಲಿ ಚಿನ್ನದ ನಾಣ್ಯಗಳು ಸಿಕ್ಕಿರುವ ಸುದ್ದಿ ಗ್ರಾಮದ ತುಂಬಾ ಕಾಡ್ಗಿಚ್ಚಿನಂತೆ ಹಬ್ಬಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಜಮೀನಿನತ್ತ ಬಂದಿದ್ದಾರೆ. ಈ ವೇಳೆ ಉತ್ಖನನದ ಸಮಯದಲ್ಲಿ ಇನ್ನೊಬ್ಬ ವ್ಯಕ್ತಿಗೆ ಚಿನ್ನದ ನಾಣ್ಯ(Ancient Gold Coins) ಸಿಕ್ಕಿದೆ.

ಇದನ್ನೂ ಓದಿ: WATCH:ಜೀಪಿಗೆ ಗುದ್ದಲು ಬಂದ ಕಾಡಾನೆ.. ಸಖತ್ ವೈರಲ್ ಆಯ್ತು ವಿಡಿಯೋ!

1 ನಾಣ್ಯ 27 ಸಾವಿರ ರೂ.ಗೆ ಮಾರಾಟಕ್ಕೆ ಯತ್ನ!

ಆಲೂಗಡ್ಡೆ ಬೆಳೆದಿದ್ದ ಜಮೀನಿನಲ್ಲಿ ಚಿನ್ನದ ನಾಣ್ಯಗಳು(Gold Coins) ಸಿಕ್ಕಿರುವ ಸುದ್ದಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರಿಗೆ ವಿಷಯ ತಲುಪಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆ ಮತ್ತು ವ್ಯಕ್ತಿಯಿಂದ ಒಟ್ಟು 3 ಚಿನ್ನದ ನಾಣ್ಯಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ವೇಳೆ 1 ನಾಣ್ಯವನ್ನು 27 ಸಾವಿರ ರೂ.ಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಂಶವೂ ಗೊತ್ತಾಗಿದೆ. ಹೀಗಾಗಿ ಜಮೀನಿನಲ್ಲಿ ಸಿಕ್ಕಿರುವುದು ಚಿನ್ನದ ನಾಣ್ಯವೇ ಎಂಬುದು ದೃಢಪಟ್ಟಿದೆ.    

ಚಿನ್ನದ ನಾಣ್ಯದ ರಹಸ್ಯಕ್ಕಾಗಿ ಪೊಲೀಸರು ಹುಡುಕಾಟ!  

ಚಿನ್ನದ ನಾಣ್ಯಗಳು ಸಿಕ್ಕಿರುವ ಜಮೀನಿನ ಬಳಿ ಪೊಲೀಸರು ಬ್ಯಾರಿಕೇಡ್‌ ಹಾಕಿ ಸುತ್ತುವರಿದಿದ್ದು, ಹಿರಿಯ ಅಧಿಕಾರಿಗಳ ನೆರವಿನೊಂದಿಗೆ ಪುರಾತತ್ವ ಇಲಾಖೆಯ ತಂಡಕ್ಕೂ ಮಾಹಿತಿ ನೀಡಲಾಗಿದೆ. ಗ್ರಾಮದ ಜನರನ್ನು ಜಮೀನಿನಿಂದ ದೂರವಿಡಲಾಗುತ್ತಿದ್ದು, ಗದ್ದೆಯಲ್ಲಿ ಪುರಾತನ ಕಾಲದ ಚಿನ್ನದ ನಾಣ್ಯಗಳು ಸಿಕ್ಕಿರುವ ರಹಸ್ಯವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Vultures Emergency Meeting: ರಣಹದ್ದುಗಳು ತುರ್ತು ಸಭೆ; ವಿಡಿಯೋ ವೈರಲ್

ಬಂಜರು ಭೂಮಿಯಾಗಿದ್ದ ಜಮೀನು

ಪುರಾತನ ಚಿನ್ನದ ನಾಣ್ಯಗಳು ಸಿಕ್ಕಿರುವ ಜಾಗ ಜಮೀನು ಹಿಂದಿನಿಂದಲೂ ಬಂಜರು ಭೂಮಿಯಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಇತ್ತೀಚೆಗಷ್ಟೇ ಗ್ರಾಮದ ವ್ಯಕ್ತಿಯೊಬ್ಬರು ಆ ಗದ್ದೆಯಲ್ಲಿ ಆಲೂಗಡ್ಡೆ ಕೃಷಿ(Potato Cultivation) ಮಾಡಿದ್ದರು. ಗ್ರಾಮದ ಮಹಿಳೆಯರು ಗದ್ದೆಯಲ್ಲಿ ಆಲೂಗಡ್ಡೆ ಕೊಯ್ಲು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರಿಗೆ ಚಿನ್ನದ ನಾಣ್ಯ ಪತ್ತೆಯಾಗಿ ಇದೀಗ ದೊಡ್ಡ ಸುದ್ದಿಯಾಗಿದೆ. ಸದ್ಯ ಪುರಾತನ ಚಿನ್ನದ ನಾಣ್ಯ ಸಿಕ್ಕಿರುವುದರ ಹಿಂದಿನ ಅಸಲಿ ಕಥೆ ಏನು ಎಂಬುದು ತನಿಖೆ ನಂತರವಷ್ಟೇ ತಿಳಿಯಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News