ನವದೆಹಲಿ: ಮಂಗಳವಾರದಂದು ರಾಜಸ್ಥಾನದ ಜೈಸಲ್ಮೇರ್ನಲ್ಲಿ ಇಬ್ಬರು ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಈ ವಿಚಾರವಾಗಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಮೃತಪಟ್ಟಿರುವ ಸೈನಿಕರಲ್ಲಿ ಯೋಗೇಂದ್ರ ಸಿಂಗ್ (40)ಎನ್ನುವವನು 20 ಗಾರ್ಡ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದನೆಂದು ತಿಳಿದುಬಂದಿದೆ.
ಮೂಲತಃ ಈತನನ್ನು ಹರ್ಯಾಣ ಮೂಲದ ದಾದ್ರಿಯವನು ಎನ್ನಲಾಗಿದೆ. ಯೋಗೇಂದ್ರ ಸಿಂಗ್ ಜೈಸಲ್ಮೇರ್ ನ ಆರ್ಮಿ ಕಂಟೋನ್ಮೆಂಟ್ ನಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಇನ್ನೊಂದೆಡೆಗೆ ಬಾರ್ಡರ್ ಸೆಕ್ಯುರಿಟಿ ಫೋರ್ಸ್ 56 ಬೆಟಾಲಿಯನ್ ನಲ್ಲಿ ಸೈನಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ಡಿ.ಕೆ.ತಮಾ ಸೇವೆಯಲ್ಲಿದ ಆಯುಧವನ್ನು ಬಳಸಿಕೊಂದು ಸಾವನ್ನಪ್ಪಿದ್ದಾನೆ. ವೈಯಕ್ತಿಕ ಕಾರಣಗಳಿಂದಾಗಿ ಈ ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.