Actress Jannat Zubair: ಬಾಲಿವುಡ್ ಎನ್ನುವುದು ಯಾರಿಗೂ ನಿಷ್ಠೆಯಾಗಿರಲ್ಲ ಕಣ್ರೀ… ಅದರಲ್ಲೂ ಸೋಷಿಯಲ್ ಮೀಡಿಯಾ ಜಮಾನದಲ್ಲಿ ಯಾವತ್ತು ಯಾರಾಗ್ತಾರೆ ಯಜಮಾನ ಅಂತಾ ಹೇಳೋಕೆ ಆಗಲ್ಲ. ನಿನ್ನೆ ಮೊನ್ನೆ ಬಂದವರೆಲ್ಲಾ ಬಾಲಿವುಡ್ ಬಾದಷಾಗಳನ್ನ, ಬಾಕ್ಸ್ ಅಫೀಸ್ ಸುಲ್ತಾನರನ್ನ ನಿವಾಳಿಸಿ ಬಿಸಾಕಿಬಿಡ್ತಾರೆ. ತಾನೇ ಪರ್ಮನೆಂಟ್ ಸುಂದರಿ ಅಂತಾ ಜಾಸ್ತಿ ಪೇಮೆಂಟಿಗೆ ಗಿಲೀಟು ಮಾಡುವವರನ್ನ ಹೊಸ ಹುಡುಗಿಯರು ಡಿಚ್ಚಿ ಹೊಡೆದು ಗಿಚ್ಚಿ ಗಿಲಿ ಗಿಲಿ ಅಂತಾ ಕಿಲ ಕಿಲ ನಗ್ತಾರೆ.
ಈಗ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರನ್ನೇ ತೆಗೆದುಕೊಳ್ಳಿ. ದಶಕಗಳಿಂದ ಬಾಲಿವುಡ್ ಅನ್ನು ಬೆರಳ ತುದಿಯಲ್ಲಿ ಕುಣಿಸಿರುವ ಶಾರುಖ್ ಖಾನ್ ಅವರಿಗೆ ಅವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಅವರಿಗೆ 46 ಮಿಲಿಯನ್ ಫಾಲ್ಲೋರ್ಸ್. ಆದರೆ ಈಗಷ್ಟೇ 23ಕ್ಕೆ ಅಡಿ ಇಟ್ಟಿರುವ ಅನನ್ಯ, ಸುಹಾನಾ, ರಾಶಾ ಅವರಂಥ ನಟಿಯರ ಮುಂದೆ ಶಾರುಖ್ ಖಾನ್ ಏನೇನೂ ಇಲ್ಲ. ಇನ್ನು ಜನ್ನತ್ ಜುಬೇರ್ ಕತೆಯನ್ನಂತೂ ಕೇಳಲೇಬೇಡಿ…
ಇದನ್ನೂ ಓದಿ- ಸಚಿನ್ ತೆಂಡೂಲ್ಕರ್ ಪುತ್ರಿಗೆ ಈತನೇ ಬೆಸ್ಟ್ ಫ್ರೆಂಡ್: ಸಾರಾ 'ಅವನೇ ನನ್ನ ಪಾಲಿಗೆ ಎಲ್ಲಾ'… ಎಂದಿದ್ದು ಯಾರಿಗೆ ಗೊತ್ತಾ...?
ಜನ್ನತ್ ಜುಬೇರ್, ಹೇಳಿಕೊಳ್ಳೋಕೆ ಕಿರುತೆರೆ ನಟಿ, ಆದ್ರೆ ಜನ್ನತ್ ಕಣ್ಣೋಟಕ್ಕೆ ಚಿತ್ ಆಗದ ಪಡ್ಡೆ ಹುಡುಗರಿಲ್ಲ. ಪಡ್ಡೆ ಹುಡುಗರು ಮಾತ್ರವಲ್ಲ, ಅಂಕಲ್ ಗಳು ಕೂಡ ಟ್ವಿಂಕಲ್ ಟ್ವಿಂಕಲ್ ಅಂತಾ ಜನ್ನತ್ ಇನ್ಸಾಗ್ರಾಮ್ ಖಾತೆ ಕಡೆ ಕಣ್ಣಾಡಿಸ್ತಿದಾರೆ. ಜನ್ನತ್ ಸ್ಮೈಲ್ ಗೆ ಫೇಲ್ ಆಗಿ ಲೈಟಾಗಿ ಲೈಕ್ ಹೊತ್ತುತ್ತಿದ್ದಾರೆ. ಹಾಗಾಗಿ ಜನ್ನತ್ ಜುಬೇರ್ ಇನ್ಸ್ಟಾಗ್ರಾಮ್ ಫಾಲ್ಲೋರ್ಸ್ ಸಂಖ್ಯೆ ಈಗ 49.7 ಮಿಲಿಯನ್.
ಜನ್ನತ್ ಜನ್ಮತಾಳಿದ್ದು ಮಾಯಾನಗರಿ ಮುಂಬೈನಲ್ಲಿ. ಬಾಲ ಕಲಾವಿದೆಯಾಗಿ ಟಿವಿ ಉದ್ಯಮಕ್ಕೆ ಬಂದ ಜನ್ನತ್ 2008ರಲ್ಲಿ ಜಾಕ್ ಪಾಟ್ ಹೊಡೆದರು. ಎನ್‌ಡಿಟಿವಿಯ ‘ಚಾಂದ್ ಕೆ ಪಾರ್ ಚಲೋ’ ಕಾರ್ಯಕ್ರಮದಲ್ಲಿ ಕಮಾಲ್ ಮಾಡಿದರು. ನಂತರ ಮುಟ್ಟಿದ್ದೆಲ್ಲಾ ಚಿನ್ನ. ಧಾರಾವಾಹಿಗಳ ನಂತರ ರಿಯಾಲಿಟಿ ಷೋ, ಸಿನಿಮಾದಲ್ಲೂ ಬ್ಯುಸಿಯಾದರು. ಒಂದು ಎಪಿಸೋಡಿಗೆ 2 ಲಕ್ಷ ಚಾರ್ಜ್ ಮಾಡುವ ಜನ್ನತ್ 21ನೇ ವಯಸ್ಸಿಗೆ ಮುಂಬೈನಲ್ಲಿ ಸ್ವಂತ ಮನೆಯನ್ನು ಕೊಂಡಿದ್ದಾರೆ.
ಇದನ್ನೂ ಓದಿ- ಬಿಗ್ ಬಾಸ್ ಶೋ ನಡೆಸಿಕೊಡಲು ಸಲ್ಮಾನ್ ಖಾನ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ...!
ಜನ್ನತ್ ಜಗತ್ ಕಿಲಾಡಿ ಕೂಡ. ಟಿವಿ, ಸಿನಿಮಾಗಳ ಜೊತೆಗೆ ಉದ್ಯಮವನ್ನೂ ಶುರುಮಾಡಿದ್ದಾರೆ. ಮೂಲಗಳ ಪ್ರಕಾರ ಜನ್ನತ್ ಜುಬೇರ್ ಈಗಾಗಲೇ ಕುಬೇರನ ಮಗಳಾಗಿದ್ದಾಳೆ. ಆಕೆಯ ಒಟ್ಟು ಆಸ್ತಿ 250 ಕೋಟಿ ದಾಟುತ್ತೆ ಅಂತಾ ಬಾಲಿವುಡ್ ಮಂದಿ ಮಂಡೆ ಬಿಸಿ ಮಾಡ್ಕೊತಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.