Cow Dung demand : ಹಸುವಿನ ಸಗಣಿ ಮುಟ್ಟಲೂ ಕೆಲವರು ಹಿಂದೇಟು ಹಾಕುತ್ತಾರೆ.. ಆದರೆ ಈ ಸಗಣಿಗೆ ಗಲ್ಫ್ ರಾಷ್ಟ್ರಗಳಲ್ಲಿ ಬಹಳ ಬೇಡಿಕೆ ಇದೆ. ಗಲ್ಫ್ ರಾಷ್ಟ್ರಗಳು ಭಾರತದಿಂದ ಹಸುವಿನ ಸಗಣಿಯನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತವೆ. ಮಾಧ್ಯಮ ವರದಿಗಳ ಪ್ರಕಾರ, ಕುವೈತ್ ಇತ್ತೀಚೆಗೆ ಭಾರತದಿಂದ 192 ಮೆಟ್ರಿಕ್ ಟನ್ ಹಸುವಿನ ಸಗಣಿ ಆಮದು ಮಾಡಿಕೊಂಡಿದೆಯಂತೆ..
ಇತರ ಗಲ್ಫ್ ದೇಶಗಳನ್ನು ಒಳಗೊಂಡಂತೆ ಭವಿಷ್ಯದಲ್ಲಿ ಹಸುವಿನ ಸಗಣಿ ಬೇಡಿಕೆಯು ಮತ್ತಷ್ಟು ಹೆಚ್ಚಾಗುವುದರಿಂದ ಇದು ಭಾರತಕ್ಕೆ ಉತ್ತಮ ಆದಾಯದ ಮೂಲವಾಗಿದೆ. ದೇಶದ ರೈತರು ಮಾತ್ರವಲ್ಲದೆ ಭಾರತದ ಆರ್ಥಿಕತೆಗೂ ದೊಡ್ಡ ಪ್ರಮಾಣದ ಲಾಭವಾಗಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ:ಏಷ್ಯಾದ ಅತ್ಯಂತ ದುಬಾರಿ ರೈಲು ಇದು! ಪ್ರಯಾಣ ಮಾಡಬೇಕು ಅಂದ್ರೆ ಇಡೀ ಆಸ್ತಿಯನ್ನೇ ಮಾರಬೇಕು! ಅಬ್ಬಾ
ಇದರಿಂದ ಅವರಿಗೆ ಪ್ರಯೋಜನವೇನು ಅಂತ ಅನೇಕರು ಅಚ್ಚರಿ ಪಡುತಾರೆ.. ಕಚ್ಚಾ ತೈಲದ ಹಣವು ಹೆಚ್ಚಿನ ಗಲ್ಫ್ ರಾಷ್ಟ್ರಗಳಿಗೆ ಮುಖ್ಯ ಆದಾಯದ ಮೂಲವಾಗಿದೆ. ಹಾಗಾದರೆ ಅವರು ಏಕೆ ಹೆಚ್ಚು ಸಗಣಿ ಖರೀದಿಸುತ್ತಿದ್ದಾರೆ.. ಭಾರತದಿಂದ ಇಷ್ಟೊಂದು ಸಗಣಿ ಖರೀದಿಸಲು ಕಾರಣವೇನು? ಬನ್ನಿ ತಿಳಿಯೋಣ..
ಈ ಸಗಣಿಯನ್ನು ಆಮದು ಮಾಡಿ ಒಣಗಿಸಿ ಪುಡಿಮಾಡಿ ತಾಳೆ ಮರಗಳಿಗೆ ಗೊಬ್ಬರವಾಗಿ ಬಳಸುತ್ತಾರೆ.. ಅವರು ಕೃಷಿಯಲ್ಲಿ ಹಸುವಿನ ಸಗಣಿಯ ನಿರ್ದಿಷ್ಟ ಉಪಯೋಗಗಳ ಬಗ್ಗೆ ಸಂಶೋಧನೆಗಳನ್ನೂ ಸಹ ನಡೆಸಿದ್ದಾರೆ.. ಗಲ್ಫ್ ರಾಷ್ಟ್ರಗಳಲ್ಲಿ ತಾಳೆ ಎಣ್ಣೆಯ ಇಳುವರಿಯನ್ನು ಹೆಚ್ಚಿಸಲು ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ.
ಮುಖ್ಯ ಕೃಷಿ ಉತ್ಪನ್ನವಾದ ತಾಳೆ ಮರಗಳಿಗೆ ಭಾರತೀಯ ಸಗಣಿ ಅವಲಂಬಿಸಿದ್ದಾರೆ. ಖರ್ಜೂರದ ಬೆಳೆಗಳ ಬೆಳವಣಿಗೆಗೆ ಹಸುವಿನ ಸಗಣಿ ಅತ್ಯಂತ ಪ್ರಯೋಜನಕಾರಿ ಪೋಷಕಾಂಶಗಳಲ್ಲಿ ಒಂದಾಗಿದೆ ಎಂದು ಅವರು ಕಂಡುಕೊಂಡಿದ್ದಾರೆ. ತಾಳೆಗೆ ಸಗಣಿ ಹಾಕಿದಾಗ ಅದರ ಹಣ್ಣುಗಳು ಗಾತ್ರದಲ್ಲಿ ಹೆಚ್ಚಾಗುತ್ತದೆ ಮತ್ತು ಉತ್ಪಾದನೆಯು ಸಾಮಾನ್ಯಕ್ಕಿಂತ ಇಳುವರಿಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳುತ್ತಾರೆ. ಹೀಗಾಗಿ ಕುವೈತ್ ಸೇರಿದಂತೆ ಇತರೆ ಅರಬ್ ರಾಷ್ಟ್ರಗಳಲ್ಲಿ ಸಗಣಿ ಬೇಡಿಕೆ ಹೆಚ್ಚಾಗಿದೆ.
ಇದನ್ನೂ ಓದಿ:ಪತ್ನಿಯ ದೇಹವನ್ನು ತುಂಡು ತುಂಡು ಮಾಡಿ ಕುಕ್ಕರ್ನಲ್ಲಿ ಬೇಯಿಸಿ ಅಡುಗೆ ಮಾಡಿದ ಪತಿ..! ಮುಂದಾಗಿದ್ದು ರೋಚಕ..
ಭಾರತದಲ್ಲಿ ಪ್ರತಿದಿನ ಸುಮಾರು 300 ಮಿಲಿಯನ್ ಜಾನುವಾರುಗಳಿಂದ 30 ಮಿಲಿಯನ್ ಟನ್ ಸಗಣಿ ಉತ್ಪಾದನೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ, ಹಸುವಿನ ಸಗಣಿಯನ್ನು ಪ್ರಾಥಮಿಕವಾಗಿ ಒಣಗಿಸಲು ಮತ್ತು ಇಂಧನವನ್ನು ತಯಾರಿಸಲು ಬಳಸಲಾಗುತ್ತದೆ. ಆದಾಗ್ಯೂ, ಚೀನಾ ಮತ್ತು ಯುಕೆ ದೇಶಗಳಲ್ಲಿ, ಸಗಣಿಯಿಂದ ವಿದ್ಯುತ್ ಉತ್ಪಾದಿಸಲು ಮತ್ತು ಜೈವಿಕ ಅನಿಲವನ್ನು ಉತ್ಪಾದಿಸಲು ಬಳಸಲಾಗುತ್ತದೆ. ಇದನ್ನು ಕೃಷಿಯಲ್ಲಿ ಗೊಬ್ಬರ ಮತ್ತು ಸಾವಯವ ಗೊಬ್ಬರವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.
ಸದ್ಯ ಒಂದು ಕೆಜಿ ಹಸುವಿನ ಸಗಣಿ ಬೆಲೆ 30ರಿಂದ 50 ರೂ. ಕೊಲ್ಲಿ ರಾಷ್ಟ್ರಗಳಿಂದ ಬೇಡಿಕೆ ಹೆಚ್ಚುತ್ತಿರುವ ಕಾರಣ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. 30 ಮಿಲಿಯನ್ ಟನ್ ಗೋಮಯವನ್ನು ಮಾರುಕಟ್ಟೆಗೆ ತಂದರೆ ಆರ್ಥಿಕ ವಲಯದಲ್ಲಿ ಹೊಸ ಪುನರುಜ್ಜೀವನವಾಗಲಿದೆ ಎಂದು ಅಂದಾಜಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.