ಕೇವಲ ₹10,000 ಹೂಡಿಕೆ ಮಾಡಿ ವ್ಯವಹಾರ ಆರಂಭಿಸಿ ಉತ್ತಮ ಆದಾಯ ಗಳಿಸಿ

ನೀವೂ ಸಹ ಏನಾದರು ಬುಸಿನೆಸ್ಸ್ ಮಾಡಲು ಬಯಸಿದರೆ  ಸರ್ಕಾರದ ಈ ಯೋಜನೆಗಳ ಲಾಭವನ್ನು ಪಡೆಯಬಹುದು. ಅದಕ್ಕಾಗಿ ನೀವು ಹೆಚ್ಚೇನು ಹೂಡಿಕೆ ಮಾಡಬೇಕಾಗಿಲ್ಲ.  ಇಂದು ಅಂತಹ ವ್ಯವಹಾರದ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಅದನ್ನು ಪ್ರಾರಂಭಿಸುವ ಮೂಲಕ ನೀವು ಉತ್ತಮ ಆದಾಯವನ್ನು ಗಳಿಸಬಹುದು.

Last Updated : May 8, 2020, 03:16 PM IST
ಕೇವಲ ₹10,000 ಹೂಡಿಕೆ ಮಾಡಿ ವ್ಯವಹಾರ ಆರಂಭಿಸಿ ಉತ್ತಮ ಆದಾಯ ಗಳಿಸಿ title=

ನವದೆಹಲಿ: ಜನರು ಉದ್ಯೋಗಾಕಾಂಕ್ಷಿಗಳಾಗಿರುವುದರ ಬದಲಿಗೆ ಉದ್ಯೋಗ ಸೃಷ್ಟಿಕರ್ತರಾಗಬೇಕೆಂಬುದು ಕೇಂದ್ರ ಸರ್ಕಾರದ ಕನಸು. ಇದಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಇದರಿಂದ ಜನರನ್ನು ನುರಿತರನ್ನಾಗಿ ಮಾಡಬಹುದು. ನೀವು ಸ್ವಂತ ವ್ಯಾಪಾರ-ವ್ಯವಹಾರವನ್ನು ಮಾಡಲು ಬಯಸಿದರೆ ಸರ್ಕಾರದ ಈ ಯೋಜನೆಗಳ ಲಾಭವನ್ನು ಪಡೆಯಬಹುದು. ಅದಕ್ಕಾಗಿ ನೀವು ಹೆಚ್ಚೇನು ಹೂಡಿಕೆ ಮಾಡಬೇಕಾಗಿಲ್ಲ.  ಇಂದು ಅಂತಹ ವ್ಯವಹಾರದ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಅದನ್ನು ಪ್ರಾರಂಭಿಸುವ ಮೂಲಕ ನೀವು ಉತ್ತಮ ಆದಾಯವನ್ನು ಗಳಿಸಬಹುದು. ಆದರೆ ಈ ವ್ಯವಹಾರ ಆರಂಭಿಸಲು ವಿಶೇಷವಾಗಿ ಹೆಚ್ಚೇನೂ ಹೂಡಿಕೆಯ ಅಗತ್ಯವಿರುವುದಿಲ್ಲ.

ಊಟಕ್ಕೆ ಉಪ್ಪಿನಕಾಯಿ ಇದ್ದರೆ ಅದರ ರುಚಿಯೇ ಬೇರೆ ಎಂದು ಹೇಳುವುದನ್ನು ಕೇಳಿರಬಹುದು. ಉಪ್ಪಿನಕಾಯಿ ಇಲ್ಲದಿದ್ದರೆ ಊಟ ಅಪೂರ್ಣವೆಂದು ತೋರುತ್ತದೆ. ಇದು ಆಹಾರದಲ್ಲಷ್ಟೇ ಅಲ್ಲ ನಿಮ್ಮ ಆರ್ಥಿಕ ಸ್ಥಿತಿಯನ್ನೂ ಉತ್ತಮಗೊಳಿಸಬಹುದು. ಉಪ್ಪಿನಕಾಯಿ ವ್ಯವಹಾರ ಎಲ್ಲಾ  ಋತುವಿನಲ್ಲೂ ಆದಾಯ ನೀಡುವ ವ್ಯವಹಾರವಾಗಿದೆ.

ಉಪ್ಪಿನಕಾಯಿ ತಯಾರಿಕೆ ವ್ಯವಹಾರವನ್ನು ಮನೆಯಿಂದ ಪ್ರಾರಂಭಿಸಬಹುದು. ವ್ಯವಹಾರವು ಬೆಳೆಯಲು ಪ್ರಾರಂಭಿಸಿದಾಗ ನೀವು ಈ ಸ್ಥಳವನ್ನು ಮತ್ತಷ್ಟು ತೆಗೆದುಕೊಳ್ಳುವ ಬಗ್ಗೆ ಯೋಚಿಸಬಹುದು ಮತ್ತು ಈ ವ್ಯವಹಾರವನ್ನು ಮುಂದೆ ಇನ್ನೂ ದೊಡ್ಡದಾಗಿ ಮಾಡಬಹುದು. ಇದಕ್ಕೆ ತುಂಬಾ ಬಂಡವಾಳದ ಅಗತ್ಯವಿಲ್ಲ. ಸಣ್ಣ ಬಂಡವಾಳವನ್ನು ಹೂಡಿಕೆ ಮಾಡಿ ವ್ಯವಹಾರವನ್ನು ಪ್ರಾರಂಭಿಸಬಹುದು.

ಈ ವ್ಯವಹಾರವನ್ನು 10 ಸಾವಿರ ರೂಪಾಯಿಯಲ್ಲಿ ಪ್ರಾರಂಭಿಸಿ:
ನೀವು ಮನೆಯಲ್ಲಿ ಉಪ್ಪಿನಕಾಯಿ ತಯಾರಿಸುವ ವ್ಯವಹಾರವನ್ನೂ ಪ್ರಾರಂಭಿಸಬಹುದು. ವ್ಯವಹಾರದ ಆರಂಭಿಕ ಹೂಡಿಕೆ 10 ಸಾವಿರ ರೂಪಾಯಿಗಳಾಗಿರಬಹುದು. ಅದೇ ಸಮಯದಲ್ಲಿ ಮೊದಲ ತಿಂಗಳಿನಿಂದ ನಿಮ್ಮ ಗಳಿಕೆ 25 ರಿಂದ 30 ಸಾವಿರ ರೂಪಾಯಿಗಳಾಗಿರಬಹುದು. ಈ ಗಳಿಕೆಯು ನಿಮ್ಮ ಉತ್ಪನ್ನದ ಬೇಡಿಕೆ, ಪ್ಯಾಕಿಂಗ್ ಮತ್ತು ವಿಸ್ತೀರ್ಣವನ್ನು ಅವಲಂಬಿಸಿರುತ್ತದೆ. ಉಪ್ಪಿನಕಾಯಿಗಳನ್ನು ಆನ್‌ಲೈನ್, ಸಗಟು, ಚಿಲ್ಲರೆ ಮಾರುಕಟ್ಟೆಗಳು ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಮಾಡಬಹುದು.

900 ಚದರ ಅಡಿ ವಿಸ್ತೀರ್ಣ:
ಉಪ್ಪಿನಕಾಯಿ ತಯಾರಿಸುವ ವ್ಯವಹಾರಕ್ಕಾಗಿ 900 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವುದು ಅವಶ್ಯಕ. ಉಪ್ಪಿನಕಾಯಿ ತಯಾರಿಸಲು, ಉಪ್ಪಿನಕಾಯಿ ಒಣಗಿಸಲು, ಉಪ್ಪಿನಕಾಯಿ ಪ್ಯಾಕಿಂಗ್ ಮಾಡಲು ಮುಕ್ತ ಸ್ಥಳದ ಅಗತ್ಯವಿದೆ. ಉಪ್ಪಿನಕಾಯಿ ತಯಾರಿಸುವ ವಿಧಾನವು ತುಂಬಾ ಸ್ವಚ್ಛವಾಗಿದ್ದರೆ ಉಪ್ಪಿನಕಾಯಿಯನ್ನು ದೀರ್ಘಕಾಲದವರೆಗೆ ಉಪ್ಪಿನಕಾಯಿ ಹಾಳಾಗುವುದಿಲ್ಲ.

ಲಾಭದಾಯಕ ವ್ಯಾಪಾರ:
10 ಸಾವಿರ ರೂಪಾಯಿ ವೆಚ್ಚದಲ್ಲಿ ಉಪ್ಪಿನಕಾಯಿ ತಯಾರಿಸುವ ವ್ಯವಹಾರವನ್ನು ಪ್ರಾರಂಭಿಸುವುದರಿಂದ ಲಾಭದಾಯಕವಾಗಬಹುದು. ಮೊದಲ ಮಾರ್ಕೆಟಿಂಗ್‌ನಲ್ಲಿಯೇ ವೆಚ್ಚದ ಸಂಪೂರ್ಣ ಮೊತ್ತವನ್ನು ಮರುಪಡೆಯಲಾಗುತ್ತದೆ ಮತ್ತು ಅದರ ನಂತರ ಮಾತ್ರ ಲಾಭವನ್ನು ಗಳಿಸಲಾಗುತ್ತದೆ. ಈ ಸಣ್ಣ ವ್ಯವಹಾರವನ್ನು ಕಠಿಣ ಪರಿಶ್ರಮ ಮತ್ತು ಹೊಸತನದಿಂದ ದೊಡ್ಡ ವ್ಯವಹಾರವನ್ನಾಗಿ ಮಾಡಬಹುದು. ವ್ಯವಹಾರದ ಲಾಭವನ್ನು ಪ್ರತಿ ತಿಂಗಳು ಸ್ವೀಕರಿಸಲಾಗುತ್ತದೆ ಮತ್ತು ಲಾಭವೂ ದಿನೇ ದಿನೇ ಹೆಚ್ಚಾಗುತ್ತದೆ.

ಉಪ್ಪಿನಕಾಯಿ ತಯಾರಿಕೆ ಪರವಾನಗಿ ಪಡೆಯುವುದು ಹೇಗೆ?
ಉಪ್ಪಿನಕಾಯಿ ತಯಾರಿಸುವ ವ್ಯವಹಾರಕ್ಕೆ ಪರವಾನಗಿ ಅಗತ್ಯವಿದೆ. ವ್ಯವಹಾರವನ್ನು ಪ್ರಾರಂಭಿಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ (ಎಫ್‌ಎಸ್‌ಎಸ್‌ಎಐ) ಪರವಾನಗಿ ಪಡೆಯಬಹುದು. ಇದಕ್ಕಾಗಿ ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಪರವಾನಗಿ ಪಡೆಯಬಹುದು.

Trending News