SBI ಜೊತೆ ಕೈ ಜೋಡಿಸಿ, ಹಣ ಗಳಿಸಿ! 8 ರಾಜ್ಯಗಳಲ್ಲಿ ಬ್ಯಾಂಕ್ ನೀಡಿದೆ ಸುವರ್ಣಾವಕಾಶ

ಬಿಸಿನೆಸ್ ಕರೆಸ್ಪಾಂಡೆಂಟ್ಗಳನ್ನು ನೇಮಿಸಲು ಆರ್ಬಿಐ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ. ಅಂಚೆ ಕಛೇರಿ ಅಥವಾ ಬ್ಯಾಂಕಿನ ನಿವೃತ್ತ ಉದ್ಯೋಗಿಗಳು ಈ ಕೆಲಸವನ್ನು ಮಾಡಬಹುದು.

Last Updated : Jul 10, 2018, 04:18 PM IST
SBI ಜೊತೆ ಕೈ ಜೋಡಿಸಿ, ಹಣ ಗಳಿಸಿ! 8 ರಾಜ್ಯಗಳಲ್ಲಿ ಬ್ಯಾಂಕ್ ನೀಡಿದೆ ಸುವರ್ಣಾವಕಾಶ title=

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ)ದಲ್ಲಿ ಸುಲಭವಾಗಿ ಹಣ ಗಳಿಸುವ ಅವಕಾಶ. ದೇಶದ 8 ರಾಜ್ಯಗಳಲ್ಲಿ ಬ್ಯಾಂಕ್ ಈ ಕೊಡುಗೆಯನ್ನು ನೀಡಿದ್ದು, ಯುವಕರು ಬ್ಯಾಂಕ್ ಪರವಾಗಿ ಕೆಲಸ ಮಾಡುವ ಮೂಲಕ ಸುಲಭವಾಗಿ ಹಣ ಸಂಪಾದಿಸಬಹುದು. ದೇಶದ 8 ರಾಜ್ಯಗಳಲ್ಲಿ ಬ್ಯಾಂಕ್ ಪ್ರತಿನಿಧಿಗಳ(ಬಿಸಿನೆಸ್ ಕರೆಸ್ಪಾಂಡೆಂಟ್) ನೇಮಕಾತಿಗೆ ಎಸ್ಬಿಐ ಪ್ರಕಟಣೆ ಹೊರಡಿಸಿದ್ದು, ಆಯ್ಕೆಯಾದವರಿಗೆ ನಿಶ್ಚಿತ ವೇತನದೊಂದಿಗೆ ಇನ್ಸೆಂಟಿವ್ಸ್ ಸಹ ನೀಡಲಿದೆ. ಆಸಕ್ತರು ಬಿಸಿನೆಸ್ ಕರೆಸ್ಪಾಂಡೆಂಟ್ ನೇಮಕಾತಿಗೆ ಆನ್ಲೈನ್'ನಲ್ಲಿ ಅಥವಾ ಹತ್ತಿರದ ಎಸ್ಬಿಐ ಬ್ಯಾಂಕ್ ಶಾಖೆಗೆ ತೆರಳಿ ಅರ್ಜಿ ಸಲ್ಲಿಸಬಹುದು

ಯಾವ ರಾಜ್ಯಗಳಲ್ಲಿ ಎಷ್ಟು ಹುದ್ದೆ?
ಎಸ್ಬಿಐ ದೇಶದ 8 ರಾಜ್ಯಗಳಲ್ಲಿ ಬ್ಯಾಂಕ್ ಬಿಸಿನೆಸ್ ಕರೆಸ್ಪಾಂಡೆಂಟ್ಸ್ ನೇಮಕಾತಿಗೆ ಪ್ರಕಟಣೆ ಹೊರಡಿಸಿದ್ದು, ಇವುಗಳಲ್ಲಿ ಉತ್ತರ ಪ್ರದೇಶ, ಬಿಹಾರ, ದೆಹಲಿ, ಮಹಾರಾಷ್ಟ್ರ, ಛತ್ತೀಸ್ಗಢ, ಅಸ್ಸಾಂ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ ರಾಜ್ಯಗಳಿವೆ. ಅದರಲ್ಲಿ ಉತ್ತರ ಪ್ರದೇಶದ 43 ಕ್ಷೇತ್ರಗಳಲ್ಲಿ ಬಿಸಿನೆಸ್ ಕರೆಸ್ಪಾಂಡೆಂಟ್ ಅಗತ್ಯವಿದೆ. ಬಿಹಾರದಲ್ಲಿ 18, ಮಹಾರಾಷ್ಟ್ರದಲ್ಲಿ 261, ದೆಹಲಿಯಲ್ಲಿ 120, ಛತ್ತೀಸ್ಗಢದಲ್ಲಿ 24, ಅಸ್ಸಾಂನಲ್ಲಿ 64, ಅರುಣಾಚಲ ಪ್ರದೇಶದ 15 ಮತ್ತು ಆಂಧ್ರಪ್ರದೇಶದಲ್ಲಿ 16 ಬಿಸಿನೆಸ್ ಕರೆಸ್ಪಾಂಡೆಂಟ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 

ಯಾರು ಬ್ಯಾಂಕಿಂಗ್ ಪ್ರತಿನಿಧಿಯಾಗಬಹುದು?
ಬಿಸಿನೆಸ್ ಕರೆಸ್ಪಾಂಡೆಂಟ್ಗಳನ್ನು ನೇಮಿಸಲು ಆರ್ಬಿಐ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ. ಅಂಚೆ ಕಛೇರಿ ಅಥವಾ ಬ್ಯಾಂಕಿನ ನಿವೃತ್ತ ಉದ್ಯೋಗಿಗಳು ಈ ಕೆಲಸವನ್ನು ಮಾಡಬಹುದು. ಮಾಜಿ ಸೈನಿಕರು ಮತ್ತು ನಿವೃತ್ತ ಸರ್ಕಾರಿ ನೌಕರರು ಬ್ಯಾಂಕ್ ಪ್ರತಿನಿಧಿಗಲಾಗಬಹುದು. 18 ವರ್ಷ ತುಂಬಿದ ಯಾವುದೇ ವ್ಯಕ್ತಿ ಎಸ್ಬಿಐ ಬ್ಯಾಂಕ್ ಪ್ರತಿನಿಧಿಯಾಗಬಹುದು. ನಿವೃತ್ತ ಶಿಕ್ಷಕರು, ಸೈನ್ಯದ ನಿವೃತ್ತ ಸಿಬ್ಬಂದಿ, ಕಿರಾಣಿ ಅಥವಾ ಔಷಧಿ ಅಂಗಡಿಗಳ ಮಾಲೀಕರು, ಸರ್ಕಾರಿ ಸಣ್ಣ ಉಳಿತಾಯ ಯೋಜನೆಗಳು ಅಥವಾ ವಿಮಾ ಕಂಪೆನಿಗಳ ಏಜೆಂಟ್, ಪೆಟ್ರೋಲ್ ಪಂಪ್ ಮಾಲೀಕರು ಕೂಡಾ ಬ್ಯಾಂಕ್ ಪ್ರತಿನಿಧಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಬ್ಯಾಂಕಿಂಗ್ ಪ್ರತಿನಿಧಿ ನೇಮಕಾತಿ ಬಗ್ಗೆ ಸಂಪೂರ್ಣ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬ್ಯಾಂಕ್ ಪ್ರತಿನಿಧಿಯಾಗಲು ಅಗತ್ಯ ದಾಖಲೆಗಳೇನು?
> ಐಡಿ ಪುರಾವೆ (ಯಾವುದೇ ಸರ್ಕಾರ ಮಾನ್ಯತೆ)
> ವಸತಿ ಪುರಾವೆ (ವಿದ್ಯುತ್ ಬಿಲ್, ದೂರವಾಣಿ ಬಿಲ್)
> 10 ನೇ ತರಗತಿ ಅಂಕ ಪಟ್ಟಿ
> ನಡತೆ ಪ್ರಮಾಣಪತ್ರ (ಪೋಲಿಸ್ನಿಂದ ಪರಿಶೀಲಿಸಲಾಗಿದೆ)
> ಬ್ಯಾಂಕ್ ಖಾತೆ ವಿವರಗಳು, ಪಾಸ್ಬುಕ್, ಕ್ಯಾನ್ಸಲ್ ಚೆಕ್
> ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರ

Trending News