ಒಂದು ಲಕ್ಷ ರೂ.ವರೆಗಿನ ಎಸ್ಬಿಐನ ಉಳಿತಾಯ ಠೇವಣಿಗಳ ಬಡ್ಡಿದರ ಪರಿಷ್ಕರಿಸುವುದಾಗಿ ಹೇಳಿರುವ ಭಾರತದ ಅತಿ ದೊಡ್ಡ ಬ್ಯಾಂಕ್ ಎಸ್ಬಿಐ, ಶೇ.3.50 ಇದ್ದ ಬಡ್ಡಿದರವನ್ನು ಶೇ.3.25ಕ್ಕೆ ಇಳಿಕೆ ಮಾಡಿದೆ.
ಅದೆಷ್ಟೋ ಗ್ರಾಹಕರು ನಿಜವಾದ ಆಪ್ ಮತ್ತು ನಕಲಿ ಆಪ್ ಗಳ ನಡುವಿನ ವ್ಯತ್ಯಾಸ ತಿಳಿಯದೆ ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ವಂಚಕರು, ಅಮಾಯಕರ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಅಕೌಂಟ್ ನಂಬರ್ ಮತ್ತು ಪಿನ್ ಗಳ ಕಳ್ಳತನ ಮಾಡುತ್ತಿದ್ದಾರೆ.
ಕಾರ್ಡ್ ವಂಚನೆಯಿಂದ ಗ್ರಾಹಕರನ್ನು ರಕ್ಷಿಸುವ ಸಲುವಾಗಿ, ಚಿಪ್ ಆಧಾರಿತ ಮತ್ತು ಪಿನ್ ಸಶಕ್ತ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳನ್ನು ಮಾತ್ರ ಗ್ರಾಹಕರಿಗೆ ಒದಗಿಸುವಂತೆ ಬ್ಯಾಂಕ್ಗಳಿಗೆ ರಿಸರ್ವ್ ಬ್ಯಾಂಕ್ ಆದೇಶಿಸಿದೆ.
ಹೊಸ ಹಣಕಾಸು ವರ್ಷ ಪ್ರಾರಂಭವಾಗಲು ಇನ್ನು ಒಂದೇ ದಿನ ಉಳಿದಿದೆ. ಅನೇಕ ನಿಯಮಗಳು ಏಪ್ರಿಲ್ 1 ರಿಂದ ಬದಲಾಗಲಿವೆ. ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐನಲ್ಲೂ ಹೊಸ ನಿಯಮ ಜಾರಿಗೊಳಿಸಲಾಗುವುದು. ದೇಶದ ಸುಮಾರು 25 ದಶಲಕ್ಷ ಎಸ್ಬಿಐ ಗ್ರಾಹಕರು ನೇರವಾಗಿ ಇದರ ಪ್ರಯೋಜನ ಪಡೆಯುತ್ತಾರೆ.
ಬ್ಯಾಂಕಿನ ಖಾತೆಯಲ್ಲಿ ಕನಿಷ್ಠ ಮೊತ್ತ ಕಡಿಮೆಯಾದಾಗ ಪುನರಾವರ್ತಿತ ದಂಡದಿಂದ ನೀವು ತೊಂದರೆಗೊಳಗಾಗುತ್ತಿದ್ದರೆ ಈ ಸುದ್ದಿ ನಿಮಗೆ ಸಂತಸ ನೀಡಲಿದೆ. ಹೌದು, ಅಂತಹ ಗ್ರಾಹಕರಿಗೆ, ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ತೆರೆಯುವ ಸೌಲಭ್ಯವನ್ನು ದೇಶದ ದೊಡ್ಡ ಬ್ಯಾಂಕ್ ಎಸ್ಬಿಐ(SBI) ಒದಗಿಸುತ್ತಿದೆ.
ಎಸ್ಬಿಐ ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿದ್ದು, ಮಾರ್ಚ್ 31 ರವರೆಗೆ ಅವರು ಅಸೋಸಿಯೇಟ್ ಬ್ಯಾಂಕ್ ಮತ್ತು ಭಾರತೀಯ ಮಹಿಳಾ ಬ್ಯಾಂಕ್ಗಳ ಚೆಕ್ ಪುಸ್ತಕವನ್ನು ಬದಲಿಸಬೇಕೆಂದು ಮತ್ತೊಮ್ಮೆ ಗ್ರಾಹಕರನ್ನು ನೆನಪಿಸಿದೆ.
ವಾಸ್ತವವಾಗಿ, ಡಿಸೆಂಬರ್ 6 , 2017 ರ ನಂತರ, ಸ್ಟೇಟ್ ಬ್ಯಾಂಕ್ನ ಅಸೋಸಿಯೇಟೆಡ್ ಬ್ಯಾಂಕುಗಳು ಸೇರಿದಂತೆ 6 ಬ್ಯಾಂಕುಗಳ ಚೆಕ್ ಪುಸ್ತಕವನ್ನು ಅನೂರ್ಜಿತಗೊಳಿಸಲಾಗುವುದು. ಹಳೆಯ ಚೆಕ್ ಬಳಸಿ ಈ ಬ್ಯಾಂಕುಗಳ ಯಾವುದೇ ಖಾತೆದಾರನು ಜನವರಿ 1, 2018 ರಿಂದ ತಮ್ಮ ಖಾತೆಯಿಂದ ಹಣ ಹಿಂಪಡೆಯಲು ಸಾಧ್ಯವಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.