NEET PG : ಎನ್ ಇಇಟಿ ಪಿಜಿ ಪ್ರವೇಶ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಆರಂಭ

ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಶನ್, ಎನ್ ಇಇಟಿ ಪಿಜಿಗಾಗಿ  ನೋಂದಣಿ  ಪ್ರಕ್ರಿಯೆ ಶುರುಮಾಡಿದೆ. ಪ್ರವೇಶ ಪರೀಕ್ಷೆಗಾಗಿ ನೊಂದಣಿ ಪ್ರಕ್ರಿಯೆಯ ಲಿಂಕ್ ಈಗಾಗಲೇ ಆಕ್ಟಿವ್ ಆಗಿದೆ.  

Written by - Ranjitha R K | Last Updated : Feb 25, 2021, 03:57 PM IST
  • ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಶನ್ ಎನ್ ಇಇಟಿ ಪಿಜಿ ಗಾಗಿ ನೋಂದಣಿ ಪ್ರಕ್ರಿಯೆ ಶುರುಮಾಡಿದೆ.
  • ಪ್ರವೇಶ ಪರೀಕ್ಷೆಗಾಗಿ ನೊಂದಣಿ ಪ್ರಕ್ರಿಯೆಯ ಲಿಂಕ್ ಈಗಾಗಲೇ ಆಕ್ಟಿವ್ ಆಗಿದೆ.
  • ಪರೀಕ್ಷೆ ಬರೆಯಲು ಇಚ್ಛಿಸುವ ಎಂಬಿಬಿಎಸ್ ಪದವೀಧರರಿಗೆ ಇದು ಮಹತ್ವದ ಸುದ್ದಿ.
NEET PG : ಎನ್ ಇಇಟಿ ಪಿಜಿ ಪ್ರವೇಶ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಆರಂಭ  title=
ಎನ್ ಇಇಟಿ ಪಿಜಿ ಪ್ರವೇಶ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಆರಂಭ (file photo)

ನವದೆಹಲಿ : ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಶನ್, ಎನ್ ಇಇಟಿ ಪಿಜಿಗಾಗಿ (NEET PG) ನೋಂದಣಿ (Registration) ಪ್ರಕ್ರಿಯೆ ಶುರುಮಾಡಿದೆ. ಪ್ರವೇಶ ಪರೀಕ್ಷೆಗಾಗಿ ನೊಂದಣಿ ಪ್ರಕ್ರಿಯೆಯ ಲಿಂಕ್ ಈಗಾಗಲೇ ಆಕ್ಟಿವ್ ಆಗಿದೆ. ಪರೀಕ್ಷೆ ಬರೆಯಲು ಇಚ್ಛಿಸುವ ಎಂಬಿಬಿಎಸ್ (MBBS) ಪದವೀಧರರಿಗೆ ಇದು ಮಹತ್ವದ ಸುದ್ದಿ. ಅಫಿಶಿಯಲ್ ವೆಬ್ ಸೈಟ್  nbe.edu.in ಮೂಲಕ ಅಪ್ಲಿಕೇಶನ್ ಹಾಕಬಹುದಾಗಿದೆ. 

ಏಪ್ರಿಲ್ 18ರಂದು ಪರೀಕ್ಷೆ : 
ಈ ಸಲ  ಎನ್ ಇಇಟಿ (NEET) ಪಿಜಿ ಏಪ್ರಿಲ್ 18ರಂದು ನಡೆಯಲಿದೆ. ಕಂಪ್ಯೂಟರ್ ಆಧಾರಿತ ಟೆಸ್ಟ್ (CBT)ರೂಪದಲ್ಲಿ ಪರೀಕ್ಷೆ ನಡೆಯಲಿದೆ. ಕರೆಕ್ಷನ್ ವಿಂಡೋ ಮಾರ್ಚ್ 19 ರಿಂದ ಮಾರ್ಚ್ 21ರ ತನಕ ಓಪನ್ ಇರಲಿದೆ.  ಮೇ. 31ಕ್ಕೆ  ಫಲಿತಾಂಶ ಬರಲಿದೆ. 

ಇದನ್ನೂ ಓದಿ  : Mamta On E-Scooty: ಪಶ್ಚಿಮ ಬಂಗಾಳ ಸಿಎಂ ಸ್ಕೂಟಿಯಲ್ಲಿ ಓಡಾಡಿದಾಗ, VIDEO ನೋಡಿ

ಅರ್ಹತೆಗಳು:
ಈ ಪಿಜಿ ಪ್ರವೇಶ ಪರೀಕ್ಷೆಗಾಗಿ ಮಾನ್ಯತೆ ಇರುವ ಸಂಸ್ಥೆಗಳಿಂದ ಎಂಬಿಬಿಎಸ್ (MBBS) ಡಿಗ್ರಿ ಪಡೆದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.  ಇದರ ಜೊತೆಗೆ ಅವರಲ್ಲಿ ಎಂಸಿಐ (MCI) ಅಥವಾ ರಾಜ್ಯದ ಮೆಡಿಕಲ್ ಕೌನ್ಸಿಲ್ ನೀಡಿರುವ ನೋಂದಣಿ ಸರ್ಟಿಫಿಕೇಟ್ ಇರುವುದು ಕಡ್ಡಾಯವಾಗಿದೆ. ಇದರ ಜೊತೆಗೆ ಜೂನ್ 30 ಅಥವಾ ಅದಕ್ಕೂ ಮೊದಲು ಒಂದು ವರ್ಷ ಇಂಟರ್ನಶಿಪ್ (Internship) ಕಡ್ಡಾಯವಾಗಿ ಮುಗಿಸಿರಬೇಕಾಗುತ್ತದೆ. 

ಈ ಪರೀಕ್ಷೆಯ ಮೂಲಕ ಮಾಸ್ಟರ್ ಅಫ್ ಸರ್ಜರಿ, ಎಂಎಸ್, ಡಾಕ್ಟರ್ ಅಫ್ ಮೆಡಿಸಿನ್, ಎಂಡಿ (MD) ಮತ್ತು ಪಿಜಿ ಡಿಪ್ಲೋಮಾ (PG Diploma) ಪ್ರೊಗ್ರಾಮ್ ಗಳಿಗೆ  ಪ್ರವೇಶ ಪಡೆಯಬಹುದಾಗಿದೆ. 

ಮುಖ್ಯ ದಿನಾಂಕಗಳು (Important Dates) ಹೀಗಿವೆ.
online ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 15, ಮಾರ್ಚ್
ಕರೆಕ್ಷನ್ ವಿಂಡೋ ಓಪನ್ ಆಗುವ ದಿನಾಂಕ : 19 ರಿಂದ 21 ಮಾರ್ಚ್
ಪರೀಕ್ಷೆಯ ದಿನಾಂಕ : 18 ಏಪ್ರಿಲ್
ಫಲಿತಾಂಶ : 31 ಮೇ.
 
ಇದನ್ನೂ ಓದಿ  : UNHRC Meet : ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಬೆತ್ತಲೆ ಮಾಡಿದ ಭಾರತ.! ಟರ್ಕಿಗೂ ಕ್ಲಾಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News