NEET UG Answer Key: ನೀಟ್ ಯುಜಿ -2024 ಕೀ ಉತ್ತರಗಳನ್ನು ಇಂದು ಅಂದರೆ ಮೇ 30 ರಂದು ಬಿಡುಗಡೆ ಆಗಿವೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಪ್ರಕಟಣೆಯಲ್ಲಿ ತಿಳಿಸಿದೆ. ಕೀ ಉತ್ತರಗಳನ್ನು ಪರಿಶೀಲಿಸಲು ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಕೀ ಉತ್ತರಗಳನ್ನು ಪಡೆಯಬಹುದಾಗಿದೆ.
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ, NEET PG 2023 ಪರೀಕ್ಷೆ ಯನ್ನು ಮುಂದೂಡಬೇಕು ಎನ್ನುವ ಬೇಡಿಕೆ ಮುಂದುವರೆದಿದೆ. ಆದರೆ ಪರೀಕ್ಷೆಯನ್ನು ಮುಂದೂಡುವುಡು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಸ್ನಾತಕೋತ್ತರ (NEET PG) 2022 ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (NBE) ಬುಧವಾರದಂದು (ಜೂನ್ 1) ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ NEET PG 2022 ಫಲಿತಾಂಶವನ್ನು natboard.edu.in ನಲ್ಲಿ ಪರಿಶೀಲಿಸಬಹುದು.
"ಈಗಾಗಲೇ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ-ಸ್ನಾತಕೋತ್ತರ ಪರೀಕ್ಷೆಯು ನಾಲ್ಕು ತಿಂಗಳ ಕಾಲ ವಿಳಂಬವಾಗಿದೆ. ಕಳೆದ ವರ್ಷ ಕೋವಿಡ್ನಿಂದಾಗಿ ಪರೀಕ್ಷೆ ನಡೆಸಲು ಅಸಾಧ್ಯವಾಗಿತ್ತು. ಇದೀಗ ಮತ್ತೆ ಮುಂದೂಡಿದರೆ ಜನವರಿ 2016ರಲ್ಲಿ ನಿಗದಿ ಪಡಿಸಿದ ಕಾನೂನಿನ ಮೇಲೆ ಪರಿಣಾಮ ಬೀರುತ್ತದೆ" ಎಂದು ಪೀಠ ಹೇಳಿದೆ.
ಇನ್ನು ವರದಿಗಳ ಪ್ರಕಾರ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ 2022ರ ಆಕಾಂಕ್ಷಿಗಳಿಗೆ ಪ್ರವೇಶ ಕಾರ್ಡ್ಗಳು ಅಧಿಕೃತ ವೆಬ್ಸೈಟ್ನಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿವೆ. ವೆಬ್ಸೈಟ್ nbe.edu.in.ನಲ್ಲಿ ಸಿಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.