ಮಧ್ಯಪ್ರದೇಶದಲ್ಲಿ ಹೆತ್ತ ತಾಯಿಯ ಮೇಲೆಯೇ ಅತ್ಯಾಚಾರ ಮಾಡಿದ ಮಗ!

ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಸೂರನಿ ಗ್ರಾಮದ ನಿವಾಸದಲ್ಲಿ 45 ವರ್ಷ ವಯಸ್ಸಿನ ಮಹಿಳೆಯೊಬ್ಬಳ ಮೇಲೆ 30 ವರ್ಷದ ಮಗನು ಅತ್ಯಾಚಾರ ಮಾಡಿದ ಆಘಾತಕಾರಿ ಘಟನೆ ನಡೆದಿದೆ.

Last Updated : Sep 4, 2018, 04:29 PM IST
ಮಧ್ಯಪ್ರದೇಶದಲ್ಲಿ ಹೆತ್ತ ತಾಯಿಯ ಮೇಲೆಯೇ ಅತ್ಯಾಚಾರ ಮಾಡಿದ ಮಗ! title=

ನವದೆಹಲಿ: ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಸೂರನಿ ಗ್ರಾಮದ ನಿವಾಸದಲ್ಲಿ 45 ವರ್ಷ ವಯಸ್ಸಿನ ಮಹಿಳೆಯೊಬ್ಬಳ ಮೇಲೆ 30 ವರ್ಷದ ಮಗನು ಅತ್ಯಾಚಾರ ಮಾಡಿದ ಆಘಾತಕಾರಿ ಘಟನೆ ನಡೆದಿದೆ.

ಈ ಘಟನೆಯು ಭಾನುವಾರ (ಸೆಪ್ಟೆಂಬರ್ 2) ರಾತ್ರಿ ಸಂಭವಿಸಿದೆ. ಮನೆಯಲ್ಲಿ  ತಂದೆ ಇಲ್ಲದ ಸಮಯದಲ್ಲಿ  ನಿದ್ದೆ ಮಾಡುತ್ತಿದ್ದಾಗ ತಾಯಿಯ ಮೇಲೆ ಮಗ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ,ತನ್ನ ಮೂವರು ಮಕ್ಕಳು ಮತ್ತು ತಂದೆ ತಾಯಿಗಳ ಜೊತೆ ವಾಸಿಸುತ್ತಿದ್ದನು ಎಂದು ಹೇಳಲಾಗಿದೆ.ಅತ್ಯಾಚಾರಕ್ಕೆ ಪ್ರಯತ್ನ ಪಟ್ಟಾಗ ಇದಕ್ಕೆ ವಿರೋಧ ವ್ಯಕ್ತಪಡಿಸಿದ ತಾಯಿಯ  ಕುತ್ತಿಗೆಗೆ ಕುಡಗೋಲು ತೋರಿಸಿ ಅತ್ಯಾಚಾರ ಗೈದಿದ್ದಾನೆ ಎಂದು ಸೆಂದ್ವಾ (ಗ್ರಾಮೀಣ) ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಆರೋಪಿಯು 2 ವರ್ಷಗಳ ಹಿಂದೆ ಅವನ ಪತ್ನಿ ತೊರೆದ ಕಾರಣ ಅಂದಿನಿಂದ ತಂದೆ ತಾಯಿಗಳೊಂದಿಗೆ ವಾಸಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಏಳು ವರ್ಷದ ಮಗ ಈ ಘಟನೆಯನ್ನು ವೀಕ್ಷಿಸಿದ್ದು ಆದರೆ ತಂದೆಗೆ ಹೆದರೀ ಸುಮ್ಮನಿದ್ದನು ಎಂದು ಹೇಳಲಾಗಿದೆ. 

ಆ ಮಹಿಳೆ ತನ್ನ ಮಗನ ಹಿಡಿತದಿಂದ ತಪ್ಪಿಸಿಕೊಂಡು ತನ್ನ ಮೂವರು ಮೊಮ್ಮಕ್ಕಳೊಂದಿಗೆ ಮಕ್ಕಳೊಂದಿಗೆ ಹತ್ತಿರದ ಕೃಷಿಭೂಮಿಗೆ ಓಡಿಹೋಗಿದ್ದಾಳೆ ಎಂದು ತಿಳಿದುಬಂದಿದೆ.ಈಗಾಗಲೇ  ಪೊಲೀಸರು ಆರೋಪಿಯ ಮೇಲೆ ಐಪಿಸಿ ಸೆಕ್ಷನ್ 376 (ಅತ್ಯಾಚಾರಕ್ಕೆ ಶಿಕ್ಷೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ 

Trending News