ಗ್ರಾಹಕರಲ್ಲಿ ಹೆಚ್ಚಿದ ಶಕ್ತಿ: ಇದೀಗ ಅಸಲಿ ಮತ್ತು ನಕಲಿ ಉತ್ಪನ್ನಗಳ ಪತ್ತೆ ಮತ್ತಷ್ಟು ಸುಲಭವಾಗಿದೆ

ಇನ್ಮುಂದೆ ನೀವು ಮಾರುಕಟ್ಟೆಗೆ ಭೇಟಿ ನೀಡಿದಾಗ ಮಾರುಕಟ್ಟೆಯಲ್ಲಿ ಯಾವುದೇ ಉತ್ಪನ್ನವನ್ನು ಖರೀದಿಸುವಾಗ, ಅದು ಅಸಲಿ ಆಗಿದೆಯೋ ಅಥವಾ ನಕಲಿ ಆಗಿದೆಯೋ ಎಂಬುದನ್ನು ನೀವು ತಕ್ಷಣ ಪರಿಶೀಲಿಸಬಹುದು.

Last Updated : Jul 27, 2020, 07:03 PM IST
ಗ್ರಾಹಕರಲ್ಲಿ ಹೆಚ್ಚಿದ ಶಕ್ತಿ: ಇದೀಗ ಅಸಲಿ ಮತ್ತು ನಕಲಿ ಉತ್ಪನ್ನಗಳ ಪತ್ತೆ ಮತ್ತಷ್ಟು ಸುಲಭವಾಗಿದೆ title=

ನವದೆಹಲಿ: ಶಾಪಿಂಗ್ ಪ್ರೀಯ ಗ್ರಾಹಕರಿಗೆ ಒಳ್ಳೆಯ ಸುದ್ದಿಯೊಂದು ಪ್ರಕಟವಾಗಿದೆ. ಮಾರುಕಟ್ಟೆಯಲ್ಲಿ ಮಾರಾಟವಾಗುವ ಉತ್ಪನ್ನಗಳನ್ನು ಮತ್ತು ಆಭರಣಗಳು ಅವು ಅಸಲಿಯಾಗಿವೆಯೋ ಅಥವಾ ನಕಲಿ ಆಗಿವೆಯೋ ಎಂಬುದನ್ನು ಗುರಿತಿಸುವ ಪ್ರಕ್ರಿಯೆಯನ್ನು ಸರ್ಕಾರ ಸುಲಭಗೊಳಿಸಿದೆ. ಇನ್ಮುಂದೆ ನೀವು ಈ ಕೆಲಸವನ್ನು ನೀವು ಮೊಬೈಲ್ ಬಳಸಿಯೂ ಕೂಡ ಮಾಡಬಹುದು.

ಕೇಂದ್ರ ಸಚಿವರು ಗ್ರಾಹಕ ಹಕ್ಕು ಕಾಯ್ದೆ 2019 ರ ಅಡಿಯಲ್ಲಿ  ಗ್ರಾಹಕರಿಗೆ ಈ ಅಧಿಕಾರ  ನೀಡಿದ್ದಾರೆ. ಈಗ ನೀವು ಮಾರುಕಟ್ಟೆಯಲ್ಲಿ ಯಾವುದೇ ಉತ್ಪನ್ನವನ್ನು ಖರೀದಿಸಿದಾಗ, ಅದು ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ತಕ್ಷಣ ಪರಿಶೀಲಿಸಬಹುದು. ಆಭರಣ ಶಾಪಿಂಗ್ ಸಮಯದಲ್ಲಿ ಸಹ, ಅಸಲಿ ಅಥವಾ ನಕಲಿ ಗುರುತಿಸುವಿಕೆಯನ್ನು ಕೇವಲ ಒಂದು ನಿಮಿಷದಲ್ಲಿ ಮಾಡಬಹುದು. ಕೇವಲ ಒಂದು ಮೊಬೈಲ್ ಆ್ಯಪ್ ಬಳಸಿ ನೀವು ಈ ತನಿಖೆ ಕೈಗೊಳ್ಳಬಹುದು.

ಆಪ್ ಬಿಡುಗಡೆಗೊಳಿಸಿದ ಬ್ಯೂರೋ ಆಫ್ ಇಂಡಿಯಾ ಸ್ಟ್ಯಾಂಡರ್ಡ್ಸ್
ಇದಕ್ಕಾಗಿ ಗ್ರಾಹಕ ಸಚಿವಾಲಯವು BIS ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ, ಅಂದರೆ ಬ್ಯೂರೋ ಆಫ್ ಇಂಡಿಯಾ ಸ್ಟ್ಯಾಂಡರ್ಡ್ಸ್ ಲಾಂಚ್ ಮಾಡಿರುವ ಮೊಬೈಲ್ ಅಪ್ಲಿಕೇಶನ್‌ನಲ್ಲಿ, ನೀವು ಯಾವುದೇ ಉತ್ಪನ್ನದ ಅಥವಾ ಆಭರಣಗಳ ಅಸಲಿಯತ್ತು ಮತ್ತು ನಕಲಿಯತ್ತು  ತುಂಬಾ ಸುಲಭವಾಗಿ ಪರಿಶೀಲಿಸಬಹುದು. ಉತ್ಪನ್ನದ ಮೇಲೆ ನೀಡಲಾಗಿರುವ ಐಎಸ್‌ಐ ಮಾರ್ಕ್ ಪರವಾನಗಿ ಸಂಖ್ಯೆಯನ್ನು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಇರಿಸುವ ಮೂಲಕ ನೀವು ಈ ಪರಿಶೀಲನೆ ಮಾಡಬಹುದು. ಪರವಾನಗಿ ಸಂಖ್ಯೆ ನಿಜವಾಗಿದೆಯೇ ಅಥವಾ ಇಲ್ಲವೇ ಎಂಬುದು ಇದರಿಂದ ಪತ್ತೆಯಾಗಲಿದೆ.  ಇದು ಉತ್ಪನ್ನವು ಅಸಲಿ ಅಥವಾ ನಕಲಿ ಎಂಬ ಮಾಹಿತಿಯನ್ನು ನೀಡಲಿದೆ.

ಆಪ್ ನಲ್ಲಿ ಸಿಗಲಿದೆ ಎಲ್ಲ ಮಾಹಿತಿ
ಪರವಾನಗಿ ಸಂಖ್ಯೆ ಸರಿಯಾಗಿದ್ದರೆ, ಉತ್ಪನ್ನಗಳ  ಬ್ರಾಂಡ್‌ನಿಂದ ಹಿಡಿದು ತಯಾರಿಕೆಯ ಕುರಿತಾದ ಎಲ್ಲಾ ಮಾಹಿತಿಗಳು ಈ ಅಪ್ಲಿಕೇಶನ್‌ನಲ್ಲಿ ಸಿಗಲಿದೆ. ಅಂತೆಯೇ, ಆಭರಣಗಳನ್ನು ಖರೀದಿಸುವಾಗ, ಮೊಬೈಲ್ ಅಪ್ಲಿಕೇಶನ್‌ನಲ್ಲಿರುವ ಹಾಲ್ಮಾರ್ಕ್ ಸಂಖ್ಯೆಯನ್ನು ಪರಿಶೀಲಿಸುವ ಮೂಲಕ ನೀವು ಸರಿಯಾದ ಆಭರಣಗಳನ್ನು ಖರೀದಿಸಬಹುದು.

ಪರವಾನಗಿ ಸಂಖ್ಯೆ ಅಥವಾ ಹಾಲ್ಮಾರ್ಕ್ ಸಂಖ್ಯೆ ಸರಿಯಾಗಿಲ್ಲದಿದ್ದರೆ, ನೀವು ತಕ್ಷಣ ಅದೇ ಮೊಬೈಲ್ ಅಪ್ಲಿಕೇಶನ್‌ನಲ್ಲಿ ದೂರು ಅಥವಾ ಕಂಪ್ಲೇಂಟ್ ಅನ್ನು ನೋಂದಾಯಿಸಬಹುದು. ದೂರು ದಾಖಲಿಸಿದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಈ ಕುರಿತು ಸಂದೇಶ ಮತ್ತು ದೂರು ಸಂಖ್ಯೆಯನ್ನು ಬರಲಿದೆ.

ಇದಕ್ಕಾಗಿ ಏನು ಮಾಡಬೇಕು?
ಇದಕ್ಕಾಗಿ ಮೊದಲು ನೀವು ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಪ್ಲಿಕೇಶನ್ ಅಡಿಯಲ್ಲಿ GS1 ಎಂದು ಬರೆದಿರುತ್ತದೆ ಎಂಬುದನ್ನು ಇಲ್ಲಿ ನೆನಪಿಡಿ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಆಪರೇಟಿಂಗ್ ಸಿಸ್ಟಂಗಳನ್ನು ಸಪೋರ್ಟ್ ಮಾಡುತ್ತದೆ. ಈ ಅಪ್ಲಿಕೇಶನ್ ಉತ್ಪನ್ನದ ಹಿಂದೆ ನೀಡಲಾದ ಬಾರ್‌ಕೋಡ್ ಅನ್ನು ಸ್ಕ್ಯಾನ್ ಮಾಡುತ್ತದೆ. ಅಪ್ಲಿಕೇಶನ್ ತೆರೆಯಿರಿ ಮತ್ತು ನೀವು ತಿಳಿದುಕೊಳ್ಳಲು ಬಯಸುವ ಉತ್ಪನ್ನದ ಕೋಡ್ ಅನ್ನು ಸ್ಕ್ಯಾನ್ ಮಾಡಿ.

ಬಾರ್‌ಕೋಡ್ ಅನ್ನು ಸ್ಕ್ಯಾನ್ ಮಾಡಲು ಸಾಧ್ಯವಾಗದಿದ್ದರೆ, ಬಾರ್‌ಕೋಡ್‌ನ ಪಕ್ಕದಲ್ಲಿ ಸಂಖ್ಯೆಯನ್ನು (ಜಿಟಿಐಎನ್) ನಮೂದಿಸಿ. ಆ ಉತ್ಪನ್ನದ ಬಗ್ಗೆ ಎಲ್ಲಾ ಮಾಹಿತಿಗಳು ನಿಮಗೆ ಸಿಗಲಿದೆ. ಈ ಮಾಹಿತಿ ತಯಾರಕ, ಬೆಲೆ, ದಿನಾಂಕ, ಎಫ್‌ಎಸ್‌ಎಸ್‌ಎಐ ಪರವಾನಗಿ ಮುಂತಾದ ಮಾಹಿತಿಯನ್ನು ಒಳಗೊಂಡಿರಲಿದೆ.

Trending News