ರಾಜಸ್ಥಾನದ ನೂತನ ಸಿಎಂ ಆಗಿ ಅಶೋಕ್ ಗೆಹ್ಲೋಟ್ ಆಯ್ಕೆ, ಪೈಲಟ್'ಗೆ ಡಿಸಿಎಂ ಪಟ್ಟ!

ಹಿರಿಯ ಕಾಂಗ್ರೆಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್‌ಲೋಟ್‌ ಅವರು ರಾಜಸ್ಥಾನದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ.

Last Updated : Dec 14, 2018, 04:24 PM IST
ರಾಜಸ್ಥಾನದ ನೂತನ ಸಿಎಂ ಆಗಿ ಅಶೋಕ್ ಗೆಹ್ಲೋಟ್ ಆಯ್ಕೆ, ಪೈಲಟ್'ಗೆ ಡಿಸಿಎಂ ಪಟ್ಟ! title=

ನವದೆಹಲಿ: ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಪಕ್ಷದ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಅನ್ನು ಆಯ್ಕೆ ಮಾಡಲಾಗಿದ್ದು, ಸಚಿನ್ ಪೈಲಟ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಸಚಿನ್ ಡಿಸಿಎಂ ಹುದ್ದೆಯ ಜೊತೆಯ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿರಲಿದ್ದಾರೆ.

ರಾಜಸ್ಥಾನ ಸಿಎಂ ಹುದ್ದೆಗೆ ಗೆಹ್‌ಲೋಟ್‌ ಮತ್ತು ಪಿಸಿಸಿ ಅಧ್ಯಕ್ಷ ಸಚಿನ್‌ ಪೈಲಟ್‌ ನಡುವೆ ತೀವ್ರ ಪೈಪೋಟಿ ಇತ್ತು. ರಾಹುಲ್‌ ಒಲವು ಯುವ ನಾಯಕ ಸಚಿನ್‌ ಪೈಲಟ್‌ ಕಡೆಗೇ ಇತ್ತು. ಆದರೆ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅನುಭವದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳುವಂತೆ ರಾಹುಲ್ ಗಾಂಧಿಗೆ ಸೂಚಿಸಿದ್ದರು ಎನ್ನಲಾಗಿದೆ. 

ಇಂದು ದಿನಪೂರ್ತಿ ಪಕ್ಷದ ನಾಯಕರು, ಶಾಸಕರು, ಕಾರ್ಯಕರ್ತರೊಂದಿಗೆ ಬಿರುಸಿನ ಸಮಾಲೋಚನೆ ನಡೆಸಿದ ರಾಹುಲ್‌ ಗಾಂಧಿ ಪಕ್ಷದ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಅವರನ್ನು ರಾಜಸ್ಥಾನದ ಮುಖ್ಯಮಂತ್ರಿಯಾಗಿ ಹಾಗೂ ಯುವ ನಾಯಕ ಸಚಿನ್ ಪೈಲಟ್ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. 

1974 ರಲ್ಲಿ ರಾಜಕೀಯಕ್ಕೆ ಬಂದ ಗೆಹ್ಲೋಟ್:
ಮೂಲತಃ ಜೋಧಪುರದವರಾದ ಗೆಹ್ಲೋಟ್ ಮೇ 3, 1951 ರಂದು ಜನಿಸಿದರು, ಗೆಹ್ಲೋಟ್ 1974 ರಲ್ಲಿ ಎನ್ಎಸ್ಯುಐ ಅಧ್ಯಕ್ಷರಾಗಿ ಅವರ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 1979 ರವರೆಗೂ ಈ ಹುದ್ದೆಯಲ್ಲಿದ್ದರು. 1998 ರಿಂದ 2003 ರವರೆಗೂ ಮತ್ತು 2008 ರಿಂದ 2013 ರವರೆಗೆ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದರು. 

 

 

Trending News