ಚಪಾತಿ ಹಿಟ್ಟಿಗೆ ಒಂದೆರಡು ಚಮಚ ಈ ಪುಡಿ ಬೆರೆಸಿದರೆ ರಕ್ತನಾಳ ಬ್ಲಾಕ್ ಮಾಡುವ ಕೊಲೆಸ್ಟ್ರಾಲ್ ಕರಗುವುದು

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಅನೇಕ ಆರೋಗ್ಯ ಸಮಸ್ಯೆಗಳು ಕೂಡಾ ಕಾಡುತ್ತವೆ. ಚಪಾತಿ ಹಿಟ್ಟನ್ನು ಹೀಗೆ ಕಲಸಿ ಚಪಾತಿ ಮಾಡಿ ಸೇವಿಸಿದರೆ ಕೊಲೆಸ್ಟ್ರಾಲ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವುದು. 

Written by - Ranjitha R K | Last Updated : Jul 31, 2024, 02:39 PM IST
  • ಕೊಲೆಸ್ಟ್ರಾಲ್ ಮೇಣದಂತಹ ವಸ್ತುವಾಗಿದ್ದು,ಇದು ನಮ್ಮ ದೇಹದಲ್ಲಿ ಕಂಡುಬರುತ್ತದೆ.
  • ದೇಹದಲ್ಲಿ ಅದರ ಪ್ರಮಾಣವು ಹೆಚ್ಚಾದಾಗ ಇದು ಸಮಸ್ಯೆಗಳಿಗೂ ಕಾರಣವಾಗುತ್ತದೆ.
  • ದೇಹದಲ್ಲಿನ ಜೀವಕೋಶಗಳ ರಚನೆಯಲ್ಲಿ ಕೊಲೆಸ್ಟ್ರಾಲ್ ಪ್ರಮುಖ ಪಾತ್ರ ವಹಿಸುತ್ತದೆ
ಚಪಾತಿ ಹಿಟ್ಟಿಗೆ ಒಂದೆರಡು ಚಮಚ ಈ ಪುಡಿ ಬೆರೆಸಿದರೆ ರಕ್ತನಾಳ ಬ್ಲಾಕ್ ಮಾಡುವ ಕೊಲೆಸ್ಟ್ರಾಲ್ ಕರಗುವುದು title=

ಬೆಂಗಳೂರು : ಕೊಲೆಸ್ಟ್ರಾಲ್ ಮೇಣದಂತಹ ವಸ್ತುವಾಗಿದ್ದು,ಇದು ನಮ್ಮ ದೇಹದಲ್ಲಿ ಕಂಡುಬರುತ್ತದೆ.ದೇಹದಲ್ಲಿ ಅದರ ಪ್ರಮಾಣವು ಹೆಚ್ಚಾದಾಗ ಇದು ಸಮಸ್ಯೆಗಳಿಗೂ ಕಾರಣವಾಗುತ್ತದೆ.ದೇಹದಲ್ಲಿನ ಜೀವಕೋಶಗಳ ರಚನೆಯಲ್ಲಿ ಕೊಲೆಸ್ಟ್ರಾಲ್ ಪ್ರಮುಖ ಪಾತ್ರ ವಹಿಸುತ್ತದೆ.ಆದರೆ ಅತಿಯಾದ ಕೊಲೆಸ್ಟ್ರಾಲ್ ಶೇಖರಣೆ ಇಡೀ ದೇಹಕ್ಕೆ ಮಾರಕವಾಗಬಹುದು.ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬೇಕಾದರೆ ನಾವು ಅನುಸರಿಸುವ ಆಹಾರಕ್ರಮದತ್ತ ಹೆಚ್ಚು ಗಮನ ಹರಿಸಬೇಕು. ಇದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು.

ಗೋಧಿ ಮತ್ತು ಕಡಲೆ ಹಿಟ್ಟು ಬಳಸುವ ಮೂಲಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು.ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಗೋಧಿ ಮತ್ತು ಕಡಲೆ ಹಿಟ್ಟು ಬಳಸಿ ಚಪಾತಿ ತಯಾರಿಸಿ ತಿನ್ನಬಹುದು. ಈ ಮಿಶ್ರಣದಿಂದ ತಯಾರಿಸಿದ ಚಪಾತಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕಡಿಮೆ ಮಾಡುತ್ತದೆ. 

ಇದನ್ನೂ ಓದಿ : ಈ ಪುಡಿ ಬೆರೆಸಿ ಚಪಾತಿ ಹಿಟ್ಟು ಕಲಸಿದರೆ ಮಧುಮೇಹಿಗಳಿಗೆ ಅದೇ ದಿವ್ಯೌಷಧ !ಬ್ಲಡ್ ಶುಗರ್ ಕಂಟ್ರೋಲ್ ಆಗುವುದು ಖಂಡಿತಾ

ಕೊಲೆಸ್ಟ್ರಾಲ್‌ನಲ್ಲಿ ಕಡಲೆ ಹಿಟ್ಟಿನ ಪ್ರಯೋಜನಗಳು:ಗೋಧಿ ಮತ್ತು ಕಡಲೆ ಹಿಟ್ಟಿನ ಚಪಾತಿ ಸೇವಿಸುವ ಮೂಲಕ ಕೊಲೆಸ್ಟ್ರಾಲ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು.ಕಡಲೆ ಹಿಟ್ಟು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ,ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ.

ಗೋಧಿ ಮತ್ತು ಕಡಲೆ ಹಿಟ್ಟು  ಬಳಸಿ ಚಪಾತಿ ತಯಾರಿಸುವುದು ಹೇಗೆ ?: 
ಗೋಧಿ ಮತ್ತು ಬಳಸಿ ಚಪಾತಿ ತಯಾರಿಸುವುದು ತುಂಬಾ ಸುಲಭ.ಮೊದಲು 1 ಬೌಲ್ ಗೋಧಿ ಹಿಟ್ಟನ್ನು ತೆಗೆದುಕೊಳ್ಳಿ. ಅದರಲ್ಲಿ 1 ಕಪ್ ಕಡಲೆ ಹಿಟ್ಟನ್ನು ಬೆರೆಸಿ.  ಇವೆರಡನ್ನೂ ಚೆನ್ನಾಗಿ ಕಲಸಿ ಹಿಟ್ಟು ನಾದಿಕೊಳ್ಳಿ. ಈಗ ಸಾಮಾನ್ಯ ಚಪಾತಿಯಂತೆ ಲಟ್ಟಿಸಿ ಬೇಯಿಸಿ ತಿನ್ನಬಹುದು.ಅಗತ್ಯ ಎನಿಸಿದರೆ ಇದಕ್ಕೆ ಉಪ್ಪು, ಹಸಿಮೆಣಸಿನಕಾಯಿ,ಕೊತ್ತಂಬರಿ ಸೊಪ್ಪು ಕೂಡಾ ಹಾಕಬಹುದು.

ಇದನ್ನೂ ಓದಿ : ಬಿಸಿ ನೀರಿಗೆ ತುಪ್ಪ ಬೆರೆಸಿ ಖಾಲಿ ಹೊಟ್ಟೆಗೆ ಕುಡಿದರೆ ಈ ಕಾಯಿಲೆ ಒಂದೇ ವಾರದಲ್ಲಿ ಗುಣವಾಗುವುದು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News