ಬೆಂಗಳೂರು : ಪ್ರತಿಯೊಬ್ಬರೂ ಉದ್ದ, ಕಪ್ಪು, ದಪ್ಪ ಕೂದಲನ್ನು ಹೊಂದಬೇಕು ಎಂದು ಬಯಸುತ್ತಾರೆ. ಯಾಕೆಂದರೆ ಕೂದಲು ಹುಡುಗರಾಗಲಿ,ಹುಡುಗಿಯರಾಗಲಿ ಕೂದಲು ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸುಂದರ ನೀಳ ಕೂದಲು ಪಡೆಯುವ ಉದ್ದೇಶದಿಂದ ಕೆಲವರು ಬೇರೆಬೇರೆ ರೀತಿಯ ಎಣ್ಣೆಯನ್ನು ಬಳಸುತ್ತಾರೆ. ಇನ್ನು ಕೆಲವರು ವಿಧ ವಿಧವಾದ ಹೇರ್ ಮಾಸ್ಕ್ ಗಳ ಮೊರೆ ಹೋಗುತ್ತಾರೆ. ಮತ್ತೊಂದಿಷ್ಟು ಜನ ಹೇರ್ ಸ್ಪಾ, ಹೇರ್ ಕೇರ್ ಎಂದು ಸಲೂನ್, ಪಾರ್ಲರ್ ಗಳಿಗೆ ಹಣ ಸುರಿಯುತ್ತಾರೆ. ಇಷ್ಟೆಲ್ಲಾ ಮಾಡಿ ನೀವು ಬಯಸುವ ಪರಿಹಾರ ಸಿಗದೇ ಹೋದಾಗ ಮತ್ತೆ ಮನ ಕೊರಗುತ್ತದೆ. ಆದರೆ ಕಪ್ಪು, ಉದ್ದ,ದೃಢ ಕೂದಲಿಗೆ ಸುಲಭ ಪರಿಹಾರ ನಿಮ್ಮ ಮನೆಯ ಹಿತ್ತಲಲ್ಲೇ ಇದೆ ಎನ್ನುವುದು ಬಹುತೇಕ ಮಂದಿಗೆ ತಿಳಿದಿರುವುದಿಲ್ಲ. ಹೌದು, ನಾವಿಲ್ಲಿ ಕೂದಲಿನ ಎಲ್ಲಾ ಸಮಸ್ಯೆಗಳು ವಾರದಲ್ಲಿಯೇ ಪರಿಹಾರವಾಗುವಂಥಹ ಸುಲಭ ಉಪಾಯ ಹೇಳಲಿದ್ದೇವೆ.
ಈ ಪರಿಹಾರವೆಂದರೆ ಪೇರಳೆ ಎಲೆಗಳು. ಪೇರಳೆ ಎಲೆಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳಿವೆ. ಇದು ಅನೇಕ ರೀತಿಯ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಇದು ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿ. ಕೂದಲಿಗೆ ಪೇರಳೆ ಎಲೆಗಳನ್ನು ಹಲವು ರೀತಿಯಲ್ಲಿ ಬಳಸಬಹುದು. ಪೇರಳೆ ಎಲೆಗಳನ್ನು ಕೂದಲಿಗೆ ಹೇಗೆ ಬಳಸುವುದು ಮತ್ತು ಅದರಿಂದ ಏನೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ನೋಡೋಣ .
ಇದನ್ನೂ ಓದಿ : Breast Cancer: ಈ 5 ಅಂಶಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು!
ಪೇರಳೆ ಎಲೆಗಳು ಕೂದಲಿಗೆ ಪ್ರಯೋಜನಕಾರಿ :
1.ತೆಂಗಿನೆಣ್ಣೆಯೊಂದಿಗೆ ಪೇರಳೆ ಎಲೆಗಳು :
-ಕೆಲವು ಪೇರಳೆ ಎಲೆಗಳನ್ನು ತೊಳೆದು ಬ್ಲೆಂಡರ್ನಲ್ಲಿ ಹಾಕಿ ದಪ್ಪ ಪೇಸ್ಟ್ ತಯಾರಿಸಿ.
-ಈಗ ಚಿಕ್ಕ ಈರುಳ್ಳಿ ತೆಗೆದುಕೊಂಡು ಪ್ಯೂರಿ ಅಥವಾ ಪೇಸ್ಟ್ ಮಾಡಿಕೊಳ್ಳಿ.
- ಈರುಳ್ಳಿ ಪೇಸ್ಟ್ ಅನ್ನು ಹಿಂಡಿ ಅದರ ರಸವನ್ನು ತೆಗೆದುಕೊಳ್ಳಿ.
- ಈಗ ಈರುಳ್ಳಿ ರಸದಲ್ಲಿ ಪೇರಳೆ ಎಲೆಗಳ ಪೇಸ್ಟ್ ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ.
- ಈ ಮಿಶ್ರಣವನ್ನು ನೆತ್ತಿ ಮತ್ತು ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ.
- ಮಸಾಜ್ ಮಾಡಿ ಅರ್ಧ ಗಂಟೆಯ ನಂತರ ಕೂದಲನ್ನು ತೊಳೆಯಿರಿ.
2. ಪೇರಳೆ ಎಲೆಗಳ ಹೇರ್ ಪ್ಯಾಕ್ ಅನ್ನು ಈ ರೀತಿ ಮಾಡಿ :
-15 ರಿಂದ 20 ಪೇರಳೆ ಎಲೆಗಳನ್ನು ತೊಳೆದು ಒಣಗಿಸಿ.
- ಇದನ್ನು ಮಿಕ್ಸಿಯಲ್ಲಿ ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ.
- ಈಗ ಈ ಪೇಸ್ಟ್ ಅನ್ನು ಪಾತ್ರೆಗೆ ಹಾಕಿ.
-ನಂತರ ಈ ಪೇಸ್ಟ್ ಅನ್ನು ನಿಮ್ಮ ಪೂರ್ತಿ ಕೂದಲಿಗೆ ಹಚ್ಚಿ.
- ಕೆಲವು ನಿಮಿಷಗಳ ಕಾಲ ಬೆರಳುಗಳಿಂದ ಮಸಾಜ್ ಮಾಡಿ.
- ಹೇರ್ ಬ್ಯಾಂಡ್ ಸಹಾಯದಿಂದ ನಿಮ್ಮ ಕೂದಲನ್ನು ಕಟ್ಟಿಕೊಳ್ಳಿ 30-40 ನಿಮಿಷಗಳ ಕಾಲ ಈ ಪೇಸ್ಟ್ ನಿಮ್ಮ ಕೂದಲಿನ ಮೇಲೆ ಹಾಗೆಯೇ ಇರಲಿ.
- ಅವು ಒಣಗಿದಾಗ, ಅವುಗಳನ್ನು ಸಾಧಾರಣ ನೀರಿನಿಂದ ತೊಳೆಯಿರಿ.
- ಕೂದಲನ್ನು ತೊಳೆಯಲು ಸೌಮ್ಯವಾದ ಶಾಂಪೂ ಬಳಸಿ.
ಈ ರೀತಿ ವಾರಕ್ಕೆರಡು ಬಾರಿ ಮಾಡಿ ನೋಡಿ ಪರಿಣಾಮ ತಿಳಿಯುತ್ತದೆ.
ಇದನ್ನೂ ಓದಿ : Diabetes control: ಈ 5 ಆಹಾರ ಸೇವಿಸಿದ್ರೆ ಮಧುಮೇಹ ಯಾವಾಗಲೂ ನಿಯಂತ್ರಣದಲ್ಲಿರುತ್ತದೆ
3. ಪೇರಳೆ ಎಲೆಗಳ ನೀರನ್ನು ಈ ರೀತಿ ಬಳಸಿ :
- ಇದಕ್ಕಾಗಿ ಕೆಲವು ಪೇರಳೆ ಎಲೆಗಳನ್ನು ತೊಳೆಯಿರಿ.
- ಈಗ ಅವುಗಳನ್ನು ಒಂದು ಲೀಟರ್ ನೀರಿನಲ್ಲಿ ಕುದಿಸಿ.
- 15 ರಿಂದ 20 ನಿಮಿಷಗಳ ಕಾಲ ಕುದಿಸಿದ ನಂತರ, ಅದನ್ನು ತಣ್ಣಗಾಗಿಸಿ.
- ಈ ನೀರು ತಣ್ಣಗಾದ ಬಳಿಕ ಅದನ್ನು ಫಿಲ್ಟರ್ ಮಾಡಿ ಮತ್ತು ಬಾಟಲಿಯಲ್ಲಿ ಸಂಗ್ರಹಿಸಿ.
- ಹೀಗೆ ಬಾಟಲಿಯಲ್ಲಿ ಹಾಕಿದ ನೀರನ್ನು ಕೂದಲಿನ ಬುಡಕ್ಕೆ ಮತ್ತು ಪೂರ್ತಿ ಕೂದಲಿಗೆ ಸ್ಪ್ರೇ ಮಾಡಿ.
-10 ನಿಮಿಷಗಳ ಕಾಲ ಮಸಾಜ್ ಮಾಡಿ.
- ಕೆಲವು ಗಂಟೆಗಳವರೆಗೆ ಈ ನೀರು ನಿಮ್ಮ ಕೂದಲಿನಲ್ಲಿ ಹಾಗೆಯೇ ಇರಲಿ. ಯಾವಾಗ ಈ ನೀರು ಪೂರ್ತಿಯಾಗಿ ಒಣಗುತ್ತದೆಯೋ ಆಗ ಕೂದಲನ್ನು ಚೆನ್ನಾಗಿ ತೊಳೆಯಿರಿ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಪರ್ಯಾಯವಾಗಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ. ಇದನ್ನೂ ಅಳವಡಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. zee kannada news ಇದನ್ನು ಅನುಮೋದಿಸುವುದಿಲ್ಲ .)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.