ಮೈಮರೆತು ಮಲಗಲು 7 ಸೂತ್ರಗಳು..! ಕ್ಷಣದಲ್ಲಿ ನಿದ್ರಾದೇವಿಯ ಒಲಿಸಿಕೊಳ್ಳಿ..!

ಕೆಲವರಿಗೆ ರಾತ್ರಿ ಬೆಡ್ ಮೇಲೆ ಮಲಗಿದ ಮೇಲೆ ಎಷ್ಟು ಹೊತ್ತಾದರೂ ನಿದ್ದೆ ಬರಲ್ಲ. ಎಷ್ಟೇ ದುಡ್ಡು, ಅಧಿಕಾರವಿರಲಿ. ಆರಾಮದಾಯಕ ಹಾಸಿಗೆ ಕೊಳ್ಳಬಹುದೇ ಹೊರತು ರಾತ್ರಿ ನಿದ್ರೆಯನ್ನಲ್ಲ. 

Written by - Ranjitha R K | Last Updated : Feb 11, 2021, 09:18 AM IST
  • ಕೆಲವರಿಗೆ ರಾತ್ರಿ ಎಷ್ಟು ಹೊತ್ತಾದರೂ ನಿದ್ರೆ ಬರಲ್ಲ
  • ಸುಖನಿದ್ರೆ ಬರದೇ ಹೋದರೆ ಸಕಲ ಸಂಪತ್ತು ವ್ಯರ್ಥ
  • ಮೈಮರೆತು ಮಲಗೋದು ಹೇಗೆ..?
ಮೈಮರೆತು ಮಲಗಲು 7 ಸೂತ್ರಗಳು..! ಕ್ಷಣದಲ್ಲಿ ನಿದ್ರಾದೇವಿಯ ಒಲಿಸಿಕೊಳ್ಳಿ..! title=
ಸುಖನಿದ್ರೆಗೆ ಸಪ್ತ ಸೂತ್ರಗಳು.! (file photo)

ಬೆಂಗಳೂರು : ಕೆಲವರಿಗೆ ರಾತ್ರಿ ಬೆಡ್ ಮೇಲೆ ಮಲಗಿದ ಮೇಲೆ ಎಷ್ಟು ಹೊತ್ತಾದರೂ ನಿದ್ದೆ ಬರಲ್ಲ. ಎಷ್ಟೇ ದುಡ್ಡು, ಅಧಿಕಾರವಿರಲಿ. ಆರಾಮದಾಯಕ ಹಾಸಿಗೆ ಕೊಳ್ಳಬಹುದೇ ಹೊರತು ರಾತ್ರಿ ನಿದ್ರೆಯನ್ನಲ್ಲ.   ಸುಖನಿದ್ರೆ ಬಾರದೇ ಹೋದರೆ ಎಂಥ ಸಂಪತ್ತಿದ್ದರೂ (Wealth) ಅದು ವ್ಯರ್ಥ. ಕೆಲವರು ಹಾಸಿಗೆಗೆ ಬಿದ್ದ ತಕ್ಷಣ ಗೊರಕೆ ಹೊಡೆಯಲು ಶುರುಮಾಡುತ್ತಾರೆ. ಹಾಸಿಗೆ ಮೇಲೆ ಬಿದ್ದ ಕೂಡಲೇ ಮೈಮರೆತು ನಿದ್ರೆ (Deep Sleep) ಮಾಡೋದು ಹೇಗೆ..? ಇಲ್ಲಿದೆ ಕೆಲವು ಸೂತ್ರ:

ಮೈಮರೆತು ನಿದ್ರಿಸಲು ಮಿಲಿಟರಿ ಸೂತ್ರವಿದು :
1. ಟೆನ್ಶನ್ (Tension) ಮರೆತುಬಿಡಿ. ಮುಖವನ್ನು ರಿಲ್ಯಾಕ್ಸ್ (Relax) ಮಾಡಿ
2. ಬಾಹುಗಳನ್ನು ರಿಲ್ಯಾಕ್ಸ್ ಮಾಡಿ. ಎರಡೂ ಬಾಹುಗಳನ್ನು ರಿಲ್ಯಾಕ್ಸ್ ಮಾಡಿ, ಹಾಸಿಗೆಯ (Bed) ಎರಡೂ ಬದಿಗಳಿಗೆ ಚಾಚಿ.
3. ಮನಸ್ಸನ್ನೂ ರಿಲ್ಯಾಕ್ಸ್ ಮಾಡಿ. ಹತ್ತು ಸೆಕೆಂಡ್ ಯಾವುದೇ ಯೋಚನೆಗೆ ಹೊರಳಬೇಡಿ. ಹೀಗೆ ಸ್ವಲ್ಪ ಹೊತ್ತು ಮಾಡಿ..

ಇದನ್ನೂ ಓದಿ : Chips, Burger, Pizza ಪ್ರಿಯರಿಗೊಂದು ಮಹತ್ವದ ಸುದ್ದಿ, FSSAI ಹೊಸ ನಿಯಮ ನಿಮಗೂ ತಿಳಿದಿರಲಿ

ಈ ಸಪ್ತ ತಂತ್ರ ಬಳಸಿ ನಿಮಿಷದಲ್ಲಿ ನಿದ್ರಾದೇವಿಯನ್ನು ಒಲಿಸಿಕೊಳ್ಳಿ.!
1. ಮಲಗುವ ಮೊದಲು ಲೈಟ್ ಆಫ್ (Light off) ಮಾಡಿ. ಬೆಡ್ ರೂಮ್ (Bed Room) ಡಾರ್ಕ್ ಆಗಿರಲಿ. ಬೆಡ್ ನೀಟ್ ಮತ್ತು ಕ್ಲೀನ್ ಇರಲಿ
2. ಮಧ್ಯಾಹ್ನ ಮಲಗುವ ಅಭ್ಯಾಸವನ್ನು ಕಡಿಮೆ ಮಾಡಿ. ಮಲಗದೇ ಹೋದರೆ ಇನ್ನೂ ಒಳ್ಳೆಯದು.
3. ಬೆಳಗ್ಗೆ ಅಥವಾ ಸಂಜೆ ವ್ಯಾಯಾಮ (Exercise), ಯೋಗ (Yoga) ಮಾಡುವ ಅಭ್ಯಾಸ ಇಟ್ಟುಕೊಳ್ಳಿ. ಸುಖ ನಿದ್ರೆಗೆ ಸಹಕಾರಿ
4. ಮಲಗುವ ಕನಿಷ್ಠ ಅರ್ಧಗಂಟೆಗೆ ಮುನ್ನ ಮೊಬೈಲ್ (mobile), ಲ್ಯಾಪ್ಟಾYಪ್ (Laptop), ಟೀವಿ ಎಲ್ಲಾ ಬಂದ್ ಮಾಡಿ. ರಿಲ್ಯಾಕ್ಸ್ ಮಾಡಿಕೊಳ್ಳಿ.
5. ಬೆಡ್ ಟೈಮಿಗೆ ನಾಲ್ಕು ಗಂಟೆ ಮೊದಲು ಚಹಾ/ಕಾಫಿ ನಿಷಿದ್ಧ.
6. ಯಾವುದೇ ಟೆನ್ಶನ್ ಇಟ್ಟು ಕೊಳ್ಳದೆ 5 ಅಥವಾ 10 ನಿಮಿಷ ಮೆಡಿಟೇಶನ್ ಮಾಡಿ. ತಲ್ಲಣ ಕಡಿಮೆಯಾಗುತ್ತದೆ. 
7. ಮಲಗುವ ಹೊತ್ತಲ್ಲಿ ಯಾವುದೇ ಯೋಚನೆ ಮಾಡಬೇಡಿ. ಎಂಥಾ ಟೆನ್ಶನ್ ಇದ್ದರೂ ಮರೆತು ಬಿಡಿ.

ಇದನ್ನೂ ಓದಿ : Morning Mistakes : ಬೆಳಗ್ಗೆ ಎದ್ದು ಯಾವತ್ತಿಗೂ ಈ ಹತ್ತು ತಪ್ಪುಗಳನ್ನು ಮಾಡಬೇಡಿ.!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News