ʼಬಡವರ ಬಾದಾಮಿʼ ಶೆಂಗಾದಿಂದ ಬೇಗ ತೂಕ ಕಡಿಮೆಯಾಗುತ್ತದೆ..! ಹೇಗೆ ಗೊತ್ತಾ..? ತಪ್ಪದೇ ತಿಳಿಯಿರಿ

Peanuts for weight loss : ತೂಕ ಇಳಿಸಿಕೊಳ್ಳಲು (ಕಡಲೇಕಾಯಿ) ಶೇಂಗಾ ಹೇಗೆ ತಿನ್ನಬೇಕು..? ದೇಹದ ತೂಕವನ್ನು ಕಡಿಮೆ ಮಾಡಲು ಇದು ಹೇಗೆ ಸಹಾಯ ಮಾಡುತ್ತದೆ..? ಅಂತ ಸಧ್ಯ ನಿಮ್ಮಲ್ಲಿ ಹಲವಾರು ಪ್ರಶ್ನೆಗಳಿರಬಹುದು ಅಲ್ಲದೆ. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕೆಳಗೆ ನೀಡಲಾಗಿದೆ ಗಮನಿಸಿ..

Written by - Krishna N K | Last Updated : Jul 28, 2023, 09:43 PM IST
  • ಇಂದಿನ ಯುವ ಪಿಳೀಗೆ ತೂಕ ಕಡಿಮೆಗೊಳಿಸಿಕೊಳ್ಳು ಹರಸಾಹಸ ಪಡುತ್ತಿದೆ.
  • ನಮ್ಮ ಸುತ್ತಮುತ್ತ ಸಿಗುರ ತರಕಾರಿ, ಹಣ್ಣು ಹಂಪಲಗಳಿಂದ ತೂಕ ನಷ್ಟ ಹೊಂದಬಹದು.
  • ʼಬಡವರ ಬಾದಾಮಿʼ ಶೆಂಗಾದಿಂದ ಬೇಗ ತೂಕ ಕಡಿಮೆಯಾಗುತ್ತದೆ.
ʼಬಡವರ ಬಾದಾಮಿʼ ಶೆಂಗಾದಿಂದ ಬೇಗ ತೂಕ ಕಡಿಮೆಯಾಗುತ್ತದೆ..! ಹೇಗೆ ಗೊತ್ತಾ..? ತಪ್ಪದೇ ತಿಳಿಯಿರಿ title=

Peanuts health benefits : ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಜನರು ಕಡಲೆಕಾಯಿಯನ್ನು ತಿನ್ನಬೇಡಿ ಎಂದು ಹೇಳಲಾಗುತ್ತದೆ. ಆದರೆ ವರ್ಷದ 12 ತಿಂಗಳಲ್ಲೂ ಲಭ್ಯವಿರುವ 'ಬಡವರ ಬಾದಾಮಿ' ಎಂದು ಕರೆಯಲ್ಪಡುವ ಕಡಲೆಕಾಯಿಯು (ಶೆಂಗಾ) ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಆದರೆ.. ಇದನ್ನು ಹೇಗೆ ತಿನ್ನಬೇಕೆಂದು ನೀವು ತಿಳಿದುಕೊಂಡಾಗ ಮಾತ್ರ ಅದು ಸಾಧ್ಯ.

ಹೌದು.. ಪ್ರೋಟೀನ್, ಕೊಬ್ಬು, ವಿಟಮಿನ್, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುವ ಕಡಲೆಕಾಯಿಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಫೈಬರ್ ಮತ್ತು ಪ್ರೊಟೀನ್ ಸಮೃದ್ಧವಾಗಿರುವ ಶೆಂಗಾ ಆರೋಗ್ಯದ ನಿಧಿಗಿಂತ ಕಡಿಮೆಯಿಲ್ಲ. ಇದು ಹಸಿವನ್ನು ಕಡಿಮೆ ಮಾಡಿ ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ನೀವೂ ನಿಮ್ಮ ಕಿವಿಗಳನ್ನು ಸ್ವಚ್ಛಗೊಳಿಸಲು ಕಾಟನ್ ಬಡ್ಸ್ ಬಳಸುತ್ತೀರಾ? ಈ ವರದಿಯನ್ನೊಮ್ಮೆ ಓದಿ!

ಕಡಲೆಕಾಯಿ ಮ್ಯಾಂಗನೀಸ್, ಕ್ಯಾಲ್ಸಿಯಂ ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಪೋಷಕಾಂಶಗಳ ಉಗ್ರಾಣವಾಗಿದೆ. ಇದನ್ನು ಬಳಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲಾಗುತ್ತದೆ. ಒಣ ಹಣ್ಣುಗಳು ದೇಹಕ್ಕೆ ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಡ್ರೈ ಫ್ರೂಟ್ಸ್ ತುಂಬಾ ದುಬಾರಿಯಾಗಿದೆ ಆದ್ದರಿಂದ ಅವು ಸಾಮಾನ್ಯ ಜನರಿಗೆ ತಲುಪುವುದಿಲ್ಲ.

ಇಂತಹ ಸನ್ನಿವೇಶದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಅಗ್ಗದ ಶೇಂಗಾ ಹಲವು ಒಣ ಹಣ್ಣುಗಳ ಕೆಲಸವನ್ನು ಏಕಾಂಗಿಯಾಗಿ ಮಾಡಬಲ್ಲದು. ನೆಲಗಡಲೆಯ ಈ ಗುಣಗಳಿಂದಲೇ ಇದನ್ನು ಬಡವರ ಬಾದಾಮಿ ಎಂದು ಕರೆಯುತ್ತಾರೆ. ಅಲ್ಲದೆ, ಕಡಲೆಕಾಯಿಯನ್ನು ಸೇವಿಸುವುದರಿಂದ ಹಲವಾರು ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ. 

ಇದನ್ನೂ ಓದಿ: ನಿಮಗೆ ಊಟದ ನಂತರ ಮಲಗುವ ಅಭ್ಯಾಸ ಇದೆಯೇ..? ಇದರ ಹಾನಿಯ ಬಗ್ಗೆ ತಿಳಿಯಿರಿ

ನೀವು ಹೆಚ್ಚುತ್ತಿರುವ ಸ್ಥೂಲಕಾಯತೆಯಿಂದ ಬಳಲುತ್ತಿದ್ದರೆ ಮತ್ತು ಮತ್ತೆ ಹಸಿವಾಗುತ್ತದ್ದರೆ, ಕಡಲೆಕಾಯಿಯು ನಿಮಗೆ ಉಪಯುಕ್ತವಾಗಿದೆ. ಇದನ್ನು ತಿನ್ನುವುದರಿಂದ ಹಸಿವು ಕಡಿಮೆಯಾಗುತ್ತದೆ, ಅಲ್ಲದೆ ದೇಹದ ಕೊಬ್ಬು ಕ್ರಮೇಣ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಮಧುಮೇಹದ ಆರಂಭಿಕ ಲಕ್ಷಣಗಳನ್ನು ನೀವು ಗಮನಿಸಿದರೆ, ತಕ್ಷಣವೇ ಕಡಲೆಕಾಯಿಯನ್ನು ಸೇವಿಸಲು ಪ್ರಾರಂಭಿಸಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಕೆಲಸ ಮಾಡುತ್ತದೆ.

ಕಡಲೆಕಾಯಿಯಲ್ಲಿರುವ ಪಾಲಿಫಿನಾಲಿಕ್ ಆಂಟಿಆಕ್ಸಿಡೆಂಟ್‌ಗಳ ಗುಣಲಕ್ಷಣಗಳು ಕ್ಯಾನ್ಸರ್ ವಿರುದ್ಧ ಕೆಲಸ ಮಾಡುತ್ತವೆ, ಆದ್ದರಿಂದ ಕಡಲೆಕಾಯಿಯನ್ನು ಸೇವಿಸುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಕಡಲೆಕಾಯಿಯಲ್ಲಿರುವ ಕೊಬ್ಬಿನಾಮ್ಲಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಹೊರಹಾಕಿ ನಿಮ್ಮನ್ನು ಆರೋಗ್ಯವಾಗಿಡುತ್ತದೆ. ಕಡಲೆಕಾಯಿಯನ್ನು ಸೇವಿಸುವುದರಿಂದ ಚಯಾಪಚಯ ಕ್ರಿಯೆಯು ಸುಗಮವಾಗುವುದು ಮತ್ತು ಇದರಿಂದ ಹೊಟ್ಟೆಯ ಸಮಸ್ಯೆಗಳು ಕಡಿಮೆಯಾಗುವುದು.

ಇದನ್ನೂ ಓದಿ: ಮೂತ್ರಪಿಂಡದ ಹರಳುಗಳ ಸಮಸ್ಯೆ ಇರುವವರಿಗೆ ವರದಾನ ಈ ಜ್ಯೂಸ್ ಗಳು!

ತಿನ್ನುವ ವಿಧಾನ : ಕಡಲೆಕಾಯಿಯನ್ನು ತಿನ್ನುವುದರಿಂದ ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ನೀರಿನಲ್ಲಿ ನೆನೆಸಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿರಿ. ಇಲ್ಲವೆ, ಕಡಲೆಕಾಳಿನಿಂದ ವಿವಿಧ ಖಾದ್ಯಗಳನ್ನು ಮಾಡಿ ಸೇವಿಸಬಹುದು. ಹುರಿದು ತಿನ್ನಬಹುದು. ಶೇಂಗಾವನ್ನು ಆರರಿಂದ ಎಂಟು ಗಂಟೆಗಳ ಕಾಲ ನೆನೆಸಿಟ್ಟು ತಿನ್ನುವುದು ಉತ್ತಮ.

(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ತೆಗೆದುಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News