Smartphone Blast Reason: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್‌ಗಳು ಪ್ರತಿಯೊಬ್ಬರ ಬದುಕಿನ ಪ್ರಮುಖ ಅಂಶ ಎಂದರೂ ತಪ್ಪಾಗಲಾರದು. ಆದರೆ, ಆಗಾಗ್ಗೆ ಫೋನ್ ಸ್ಫೋಟದ ವರದಿಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಫೋನ್‌ಗಳು ಸ್ಫೋಟಗೊಳ್ಳಲು ಹಲವು ಕಾರಣಗಳಿವೆ (Phone Blast Reasons). ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದಾಗಿ ಇಂತಹ ಅವಘಡ ಸಂಭವಿಸಿದರೆ, ಇನ್ನೂ ಕೆಲವು ಸಂದರ್ಭದಲ್ಲಿ ನಮ್ಮ ತಪ್ಪುಗಳು ಕೂಡ ಇದಕ್ಕೆ ಕಾರಣವಾಗಿರುತ್ತದೆ.
ಈ ಲೇಖನದಲ್ಲಿ ಮೊಬೈಲ್ ಫೋನ್ (Mobile Phone) ಬಾಂಬ್‌ನಂತೆ ಸ್ಫೋಟಗೊಳ್ಳಲು ಕಾರಣವಾಗುವ ತಪ್ಪುಗಳು ಯಾವುವು? ನಾವು ಯಾವ ರೀತಿಯ ತಪ್ಪುಗಳನ್ನು ತಪ್ಪಿಸುವುದರಿಂದ ಮೊಬೈಲ್ ಫೋನ್‌ಗಳು ಸ್ಫೋಟಗೊಳ್ಳುವುದನ್ನು ತಪ್ಪಿಸಬಹುದು ಎಂದು ತಿಳಿಯೋಣ...
ಇದನ್ನೂ ಓದಿ- EV Fire Safety Tips: ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಹೊತ್ತಿಕೊಳ್ಳಲು ಇವೇ ಪ್ರಮುಖ ಕಾರಣ!
ನಿಮ್ಮ ಈ ಮೂರು ತಪ್ಪುಗಳಿಂದ ಮೊಬೈಲ್ ಫೋನ್‌ಗಳು ಸ್ಫೋಟಗೊಳ್ಳಬಹುದು!
ಮೊದಲೇ ತಿಳಿಸಿದಂತೆ ಮೊಬೈಲ್ ಫೋನ್‌ಗಳು ಸ್ಫೋಟಗೊಳ್ಳಲು (Mobile Phone Blast) ಹಲವು ಕಾರಣಗಳಿದ್ದರೂ, ನಿತ್ಯ ಜೀವನದಲ್ಲಿ ನಾವು ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಇದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅಂತಹ ತಪ್ಪುಗಳೆಂದರೆ...
ತಪ್ಪಾದ ಚಾರ್ಜರ್ ಬಳಕೆ:
ಮೊಬೈಲ್ ಸ್ಫೋಟಕ್ಕೆ ಅತಿದೊಡ್ಡ ಕಾರಣ ಫೋನ್ ಬ್ಯಾಟರಿ ಹೆಚ್ಚು ಹೀಟ್ ಆಗುವುದು. ಸಾಮಾನ್ಯವಾಗಿ ತಪ್ಪಾದ ಚಾರ್ಜರ್ ಗಳ ಬಳಕೆಯಿಂದ ಇದು ಹೆಚ್ಚಾಗಿ ಸಂಭವಿಸುತ್ತದೆ. ಹಾಗಾಗಿ, ಫೋನ್ ಚಾರ್ಜ್ ಮಾಡುವಾಗ ಕಂಪನಿ ನೀಡಿರುವ ಆ ಫೋನ್ ಕಂಪನಿಯ ಚಾರ್ಜರ್ ಅನ್ನೇ ಬಳಸುವುದನ್ನು ಖಚಿತಪಡಿಸಿಕೊಳ್ಳಿ.
ಇದನ್ನೂ ಓದಿ- ಸ್ವಲ್ಪ ಬಳಸಿದ ಕೂಡಲೇ ನಿಮ್ಮ ಫೋನ್ ಬಿಸಿಯಾಗುತ್ತದೆಯೇ? ಹಾಗಿದ್ದರೆ ಈ ಟ್ರಿಕ್ ಟ್ರೈ ಮಾಡಿ
100% ಚಾರ್ಜ್ ಮಾಡುವುದು:
ನಮ್ಮಲ್ಲಿ ಕೆಲವರಿಗೆ ಫೋನ್ ಅನ್ನು 100% ಪೂರ್ತಿಯಾಗಿ ಚಾರ್ಜ್ ಮಾಡುವುದರಿಂದ ಹೆಚ್ಚು ಸಮಯ ಫೋನ್ ಬಳಸಬಹುದು ಎಂಬ ತಪ್ಪು ಕಲ್ಪನೆ ಇದೆ. ಆದರೆ, ಇದರಿಂದ ಬ್ಯಾಟರಿ ಬಲು ಬೇಗ ಹಾನಿಗೊಳಗಾಗುತ್ತದೆ. ಅಷ್ಟೇ ಅಲ್ಲ ಬಹುತೇಕ ಸಂದರ್ಭಗಳಲ್ಲಿ ಇದು ಫೋನ್ ಬ್ಲಾಸ್ಟ್ ಆಗಲೂ ಕಾರಣವಾಗಬಹುದು.
ಚಾರ್ಜ್ನಲ್ಲಿರುವಾಗಲೂ ಫೋನ್ ಬಳಕೆ:
ಕೆಲವರು ಫೋನ್ ಅನ್ನು ಚಾರ್ಜ್ ಮಾಡುವಾಗಲೂ ಫೋನಿಗೆ ವಿರಾಮ ನೀಡುವುದಿಲ್ಲ. ಈ ಸಮಯದಲ್ಲಿ ಕರೆ ಮಾಡುವುದು, ಗೇಮ್ ಆಡುವುದು, ವಿಡಿಯೋ ವೀಕ್ಷಿಸುವುದನ್ನು ಮುಂದುವರೆಸುತ್ತಾರೆ. ಇದರಿಂದ ಬ್ಯಾಟರಿ ಓವರ್ ಹೀಟ್ ಆಗಿ ಸ್ಫೋಟ ಸಂಭವಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.