ಈ ಮೂರು ಕಾರಣಗಳಿಂದ ಮಳೆಗಾಲದಲ್ಲಿ ಸಲಾಡ್ ಸೇವಿಸಬಾರದು

   Salad side effects in rainy season : ತೂಕ ನಷ್ಟಕ್ಕಾಗಿ ಸಲಾಡ್ ಅನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಲಾಗುತ್ತದೆ. ಹೀಗಿರುವಾಗ ಮಳೆಗಾಲದಲ್ಲಿ ಹಸಿ ತರಕಾರಿಯಿಂದ ಮಾಡಿದ ಸಲಾಡ್ ತಿಂದರೆ  ಏನಾಗುತ್ತದೆ?  ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ .

Written by - Ranjitha R K | Last Updated : Jul 11, 2022, 02:12 PM IST
  • ಊಟದ ವೇಳೆ ಸಲಾಡ್ ತಿನ್ನುವುದು ಕೆಲವರಿಗೆ ಅಭ್ಯಾಸವಾಗಿರುತ್ತದೆ.
  • ಮಳೆಗಾಲದಲ್ಲಿ ಸಲಾಡ್ ತಿಂದರೆ ಅನಾರೋಗ್ಯ ಕಾಡಬಹುದು.
  • ಮಳೆಗಾಲದಲ್ಲಿ ಫುಡ್ ಪಾಯ್ಸನ್ ನಂತಹ ಸಮಸ್ಯೆಗಳು ಕಾಡುತ್ತದೆ.
ಈ ಮೂರು ಕಾರಣಗಳಿಂದ ಮಳೆಗಾಲದಲ್ಲಿ ಸಲಾಡ್ ಸೇವಿಸಬಾರದು  title=
Salad side effects in rainy season (file photo)

Salad side effects in rainy season : ಊಟದ ವೇಳೆ  ಸಲಾಡ್ ತಿನ್ನುವುದು ಕೆಲವರಿಗೆ ಅಭ್ಯಾಸವಾಗಿರುತ್ತದೆ.  ಹೀಗಿದ್ದಾಗ ಪ್ರತಿ ಋತುವಿನಲ್ಲಿ ಸಲಾಡ್ ತಿನ್ನಲು ಇಷ್ಟಪಡುತ್ತಾರೆ. ಆದರೆ ಮಳೆಗಾಲದಲ್ಲಿ ಸಲಾಡ್ ತಿಂದರೆ ಅನಾರೋಗ್ಯ ಕಾಡಬಹುದು. ನಮ್ಮ ಆಹಾರವನ್ನು ಋತುಮಾನಕ್ಕೆ ಅನುಗುಣವಾಗಿ ಪ್ಲಾನ್ ಮಾಡಬೇಕು. ಇಲ್ಲವಾದರೆ ದೇಹಕ್ಕೆ ಹಾನಿಕಾರಕವಾಗಿ ಪರಿಣಮಿಸಬಹುದು. ಮಳೆಗಾಲದಲ್ಲಿ ಫುಡ್ ಪಾಯ್ಸನ್ ನಂತಹ ಸಮಸ್ಯೆಗಳು ಅತಿಯಾಗಿ ಕಾಡುತ್ತದೆ. ಅದಕ್ಕಾಗಿಯೇ ನಾವು ಮಳೆಯಲ್ಲಿ ಸಲಾಡ್ ತಿನ್ನುವುದನ್ನು ತಪ್ಪಿಸಬೇಕು.

1. ಬ್ಯಾಕ್ಟೀರಿಯಾ ಭಯ : 
ಸಲಾಡ್ ಮಾಡುವಾಗ, ಅದರಲ್ಲಿ ಹಸಿ ತರಕಾರಿಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಉದಾಹರಣೆಗೆ ಕ್ಯಾರೆಟ್, ಮೂಲಂಗಿ, ಎಲೆಕೋಸು, ಕೋಸುಗಡ್ಡೆ, ಕ್ಯಾಪ್ಸಿಕಂ, ಟೊಮೆಟೊ ಮತ್ತು ಸೌತೆಕಾಯಿ. ಈ ಎಲ್ಲಾ ತರಕಾರಿಗಳು ಕೀಟಗಳನ್ನು ಒಳಗೊಂಡಿರುತ್ತವೆ. ಅವು ತಬರೀ ಕಣ್ಣಿಗೆ ಕಾಣಿಸುವುದಿಲ್ಲ.  ಈ ಬ್ಯಾಕ್ಟೀರಿಯಾಗಳು  ಅನೇಕ ಬಾರಿ ಹೊಟ್ಟೆ ಅಥವಾ ಕರುಳಿನಲ್ಲಿ ಅಂಟಿಕೊಳ್ಳುತ್ತವೆ ಮಾತ್ರವಲ್ಲ  ಮೆದುಳನ್ನು ತಲುಪುತ್ತವೆ. 

ಇದನ್ನೂ ಓದಿ : Garlic Benefits: ಈ ಸಮಸ್ಯೆಗಳಿಗೆ ಸುಲಭ ಪರಿಹಾರ ಬೆಳ್ಳುಳ್ಳಿ

2. ಸಲಾಡ್ ಹೊಟ್ಟೆಯ ಸೋಂಕನ್ನು ಉಂಟುಮಾಡಬಹುದು :
ಸಲಾಡ್ ತಿನ್ನುವುದರಿಂದ ಕೆಲವೊಮ್ಮೆ ಹೊಟ್ಟೆಯ ಸೋಂಕು ಉಂಟಾಗುತ್ತದೆ. ಹಸಿ ತರಕಾರಿಗಳು ಕರುಳಿನ ಮತ್ತು ಹೊಟ್ಟೆಯ ಸೋಂಕನ್ನು ಉಂಟುಮಾಡಬಹುದು. ಇದು ದೇಹದ ಊತ, ವಾಂತಿ ಮತ್ತು ಜ್ವರಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಈ ಸಮಸ್ಯೆಯು ತುಂಬಾ ಗಂಭೀರವಾಗಬಹುದು. 

3. ಸಲಾಡ್ ಅತಿಸಾರಕ್ಕೆ ಕಾರಣವಾಗಬಹುದು : 
ಅತಿಸಾರವು ಹೊಟ್ಟೆಯ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಹಸಿ ತರಕಾರಿಗಳು ಹೊಟ್ಟೆಯ ಚಯಾಪಚಯವನ್ನು ತೊಂದರೆಗೊಳಿಸಬಹುದು ಮತ್ತು ಅನೇಕ ಇತರ ಸಮಸ್ಯೆಗಳನ್ನು ಉಂಟುಮಾಡಬಹುದು. ಅದರಲ್ಲಿ ಒಂದು ಅತಿಸಾರ. ಈ ಎಲ್ಲಾ ಕಾರಣಗಳಿಂದ ವಾಂತಿ ಮತ್ತು ನಿರ್ಜಲೀಕರಣವೂ ಸಂಭವಿಸಬಹುದು.

ಇದನ್ನೂ ಓದಿ : ನುಗ್ಗೆ ಸೊಪ್ಪಿನ ಸೇವನೆಯಿಂದ ಬಗೆಹರಿಯುತ್ತದೆ ಈ ಎಲ್ಲಾ ಸಮಸ್ಯೆಗಳು

ಮಳೆಗಾಲದಲ್ಲಿ ಸಲಾಡ್ ತಿನ್ನಲು ಉತ್ತಮ ಸಮಯ ಮತ್ತು ಸರಿಯಾದ ಮಾರ್ಗ ಯಾವುದು ? : 
ಮಳೆಗಾಲದಲ್ಲಿ ಸಲಾಡ್ ತಿನ್ನುವುದು ಹಾನಿಕಾರಕ. ಆದರೆ ನೀವು ಅದನ್ನು ತಯಾರಿಸುವ ಮತ್ತು ತಿನ್ನುವ ವಿಧಾನದಲ್ಲಿ ಬದಲಾವಣೆಗಳನ್ನು ಮಾಡಿಕೊಂಡರೆ ಅಷ್ಟೊಂದು ತೊಂದರೆ ನೀಡಲಿಕ್ಕಿಲ್ಲ. ಮಳೆಗಾಲದಲ್ಲಿ ಸಲಾಡ್‌ನಲ್ಲಿ ಕೋಸುಗಡ್ಡೆ, ಎಲೆಕೋಸು ಮತ್ತು ಸೌತೆಕಾಯಿಯಂತಹ ಹಸಿ ತರಕಾರಿಗಳನ್ನು ಸೇರಿಸುವುದನ್ನು ತಪ್ಪಿಸಬೇಕು. ತರಕಾರಿಗಳನ್ನು ಬೇಯಿಸಿದ ನಂತರ ಸಲಾಡ್ ಮಾಡಿ ಸೇವಿಸಬಹುದು.  ಇನ್ನು ಸಲಾಡ್ ತಿನ್ನಲು ಸರಿಯಾದ ಸಮಯದ ಯಾವುದು ಎಂದರೆ, ಖಾಲಿ ಹೊಟ್ಟೆಯಲ್ಲಿ ಯಾವತ್ತೂ ಸಲಾಡ್ ತಿನ್ನಬಾರದು. ಇದನ್ನು ಬೇರೆ ಆಹಾರದೊಂದಿಗೆ ಸೇವಿಸಿ.

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News