High Chloestral Side Effects : ಕೊಲೆಸ್ಟ್ರಾಲ್ ಎಂಬ ಜಿಡ್ಡಿನ ಅಂಶ ನಮ್ಮ ರಕ್ತದಲ್ಲಿ ಇರುತ್ತದೆ. ಆರೋಗ್ಯಕರ ಕೋಶಗಳನ್ನು ನಿರ್ಮಿಸಲು ನಮ್ಮ ದೇಹಕ್ಕೆ ಕೊಲೆಸ್ಟ್ರಾಲ್ ಅಗತ್ಯವಿದ್ದರೂ, ಅದರ ಪ್ರಮಾಣ ಹೆಚ್ಚಾದರೆ ಹೃದ್ರೋಗದ ಅಪಾಯ ಕೂಡಾ ಅಧಿಕವಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಅನ್ನು ಸಾಮಾನ್ಯವಾಗಿ ಸೈಲೆಂಟ್ ಕಿಲ್ಲರ್ ಎಂದೇ ಕರೆಯಲಾಗುತ್ತದೆ. ಯಾಕೆಂದರೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಅಂಥಹ ವಿಶೇಷ ಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ಜೀವಕ್ಕೆ ಮಾತ್ರ ಮಾರಕವಾಗಿ ಬಿಡುತ್ತದೆ.
ಇದು ಕಿವಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ? :
ಶ್ರವಣ ನಷ್ಟವು ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಅಧಿಕವಾಗಿರುವ ಸೂಚಕವಾಗಿದೆ. ನಿಮಗೆ ಯಾವುದೇ ರೀತಿಯ ಶ್ರವಣ ಸಮಸ್ಯೆಗಳಿದ್ದರೆ ಅದರತ್ತ ಗಮನ ಹರಿಸುವುದು ಬಹಳ ಮುಖ್ಯ ಎನ್ನುವುದನ್ನು ನೆನಪಿಡಿ. ಅಧಿಕ ಕೊಲೆಸ್ಟ್ರಾಲ್ ನಿಂದ ಉಂಟಾಗುವ ಶ್ರವಣ ನಷ್ಟವು ಕ್ರಮೇಣ ಹೆಚ್ಚುತ್ತಲೇ ಹೋಗುತ್ತದೆ. ಇದು ಎರಡೂ ಕಿವಿಗಳ ಮೇಲೆ ಸಮಾನವಾಗಿ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : ಪೈಲ್ಸ್ ಸೇರಿದಂತೆ 5 ಕಾಯಿಲೆಗಳಿಗೆ ಸಂಜೀವನಿಗೆ ಸಮಾನ ಈ ಹಣ್ಣು, ಇಂದೇ ಸೇವನೆ ಆರಂಭಿಸಿ!
ಅಧಿಕ ಕೊಲೆಸ್ಟ್ರಾಲ್ ನಿಂದ ಕಿವಿಗಳ ಮೇಲೇ ಉಂಟಾಗುವ ಪರಿಣಾಮದ ಕಾರಣ ಮೆಲ್ಲ ದನಿಯನ್ನು ಕೇಳಲು ಅಥವಾ ಗದ್ದಲದ ಪರಿಸರದಲ್ಲಿ ಸಂಭಾಷಣೆಯನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಒಂದು ವೇಳೆ ಇದಕ್ಕೆ ಚಿಕಿತ್ಸೆ ನೀಡದೆ ಬಿಟ್ಟರೆ, ಅದು ಕಾಲಾನಂತರದಲ್ಲಿ ಉಲ್ಬಣಗೊಳ್ಳಬಹುದು.
ಯಾವಾಗ ಶ್ರವಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ :
ಅಪಧಮನಿಗಳಲ್ಲಿ ಪ್ಲೇಕ್ ಅನ್ನು ನಿರ್ಮಿಸುವ ಮೂಲಕ ಹೆಚ್ಚಿನ ಕೊಬ್ಬು ಶ್ರವಣದ ಮೇಲೆ ಪರಿಣಾಮ ಬೀರಬಹುದು. ಪರಿಣಾಮವಾಗಿ, ನಿಮ್ಮ ಕಿವಿಗಳು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಾಗಿರುವ ರಕ್ತದ ಹರಿವು ಅಪಧಮನಿಗಳಲ್ಲಿ ನಿರ್ಬಂಧಿಸಲ್ಪಡುತ್ತದೆ. ಸೂಕ್ಷ್ಮವಾದ ಒಳಗಿನ ಕಿವಿಯ ಅಂಗಾಂಶಕ್ಕೆ ರಕ್ತ ಪೂರೈಕೆಯು ಅಡಚಣೆಯಾದಾಗ ಶ್ರವಣ ನಷ್ಟ ಸಂಭವಿಸುತ್ತದೆ.
ಇದನ್ನೂ ಓದಿ : Health Benefits of Almonds: ಬಾದಾಮಿ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು
ಅಧಿಕ ಕೊಲೆಸ್ಟ್ರಾಲ್ ರೋಗಲಕ್ಷಣಗಳನ್ನು ತಡೆಯುವುದು ಹೇಗೆ? :
- ನೀವು ನಿಮ್ಮ ಶ್ರವಣ ಶಕ್ತಿಯನ್ನು ಕಳೆದುಕೊಳ್ಳಲು ಪ್ರಾರಂಭಿಸಿದರೆ, ಚಿಕಿತ್ಸೆಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಅಧಿಕ ಕೊಲೆಸ್ಟ್ರಾಲ್ ನಿಮ್ಮ ಶ್ರವಣದ ಮೇಲೆ ಪರಿಣಾಮ ಬೀರುತ್ತಿದ್ದರೆ, ಜೀವನಶೈಲಿಯ ಬದಲಾವಣೆಗಳು, ಔಷಧಿಗಳು ಮತ್ತು ಜೀವನಶೈಲಿಯ ಹೊಂದಾಣಿಕೆಗಳ ಬಗ್ಗೆ ವೈದ್ಯರ ಸಲಹೆಯನ್ನು ನೀವು ಅನುಸರಿಸಬೇಕು.
- ನಿಮ್ಮ ಹಾನಿಕಾರಕ ಕೊಲೆಸ್ಟ್ರಾಲ್ ಮಟ್ಟಗಳು ಹೆಚ್ಚಾಗುತ್ತವೆಯೇ ಅಥವಾ ಕಡಿಮೆಯಾಗುತ್ತವೆಯೇ ಎಂಬುದರ ಮೇಲೆ ನಿಮ್ಮ ಆಹಾರವು ಗಮನಾರ್ಹ ಪರಿಣಾಮ ಬೀರುತ್ತದೆ. ನಿಮ್ಮ ಕೊಲೆಸ್ಟ್ರಾಲ್ ನಿಯಂತ್ರಿಸಬೇಕಾದರೆ ನೀವು ತ್ಯಜಿಸಬೇಕಾದ ಹಲವಾರು ಆಹಾರಗಳಿವೆ.
ಇದನ್ನೂ ಓದಿ : ದುಬಾರಿ ಪ್ರಾಡಕ್ಟ್ ಬಳಸಿದರೂ ಕೂದಲು ಉದುರುತ್ತದೆಯೇ? ಹಾಗಿದ್ದರೆ ಈ ವಿಧಾನ ಟ್ರೈ ಮಾಡಿ
- ಆರೋಗ್ಯಕರ ಕೊಬ್ಬನ್ನು ಮಿತವಾಗಿ ಮತ್ತು ಪ್ರಾಣಿಗಳ ಕೊಬ್ಬನ್ನು ಕನಿಷ್ಠವಾಗಿ ಸೇವಿಸಿ. ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ.
- ನೀವು ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ.
( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ