ʻಬೆಳಿಗ್ಗೆ ಎದ್ದಾಗ ಮುಖಕ್ಕೆ ಉಗುಳು ಹಚ್ಚಿಕೊಳ್ಳುತ್ತೇನೆʼ : ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ಸೌತ್‌ನ ಈ ಸ್ಟಾರ್‌ ನಟಿ!

tamannaah bhatia beauty secrete: ಚಿತ್ರರಂಗದಲ್ಲಿ ಹೆಚ್ಚು ಕಾಲ ಉಳಿಯಬೇಕಾದರೆ ನಾಯಕಿಯರಿಗೆ ನಟನೆಯ ಜತೆಗೆ ಸೌಂದರ್ಯವೂ ಬೇಕು.

Written by - Chetana Devarmani | Last Updated : Jan 10, 2025, 03:54 PM IST
  • ನಾಯಕಿಯರಿಗೆ ನಟನೆಯ ಜತೆಗೆ ಸೌಂದರ್ಯವೂ ಬೇಕು
  • ಇದಕ್ಕಾಗಿ ಅನೇಕ ಸೌಂದರ್ಯ ಸಲಹೆಗಳನ್ನು ಪಾಲಿಸುವರು
  • ಈ ಕ್ರೇಜಿ ಹೀರೋಯಿನ್ ತನ್ನ ಸೌಂದರ್ಯಕ್ಕಾಗಿ ಉಗುಳು ಬಳಸುತ್ತಾರಂತೆ
ʻಬೆಳಿಗ್ಗೆ ಎದ್ದಾಗ ಮುಖಕ್ಕೆ ಉಗುಳು ಹಚ್ಚಿಕೊಳ್ಳುತ್ತೇನೆʼ : ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ಸೌತ್‌ನ ಈ ಸ್ಟಾರ್‌ ನಟಿ!  title=

tamannaah bhatia beauty secrete: ನಟಿಯರು ಯಾವಾಗಲೂ ತಮ್ಮ ಸೌಂದರ್ಯಕ್ಕಾಗಿ ಶ್ರಮಿಸುತ್ತಾರೆ. ನಯವಾದ ತ್ವಚೆಗಾಗಿ ಹಲವು ಸಲಹೆಗಳನ್ನು ಅನುಸರಿಸುತ್ತಾರೆ. ಕೆಲವೊಮ್ಮೆ ಅವುಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಕೆಲವು ನಟಿಯರು ತಮ್ಮದೇ ಆದ ಸೌಂದರ್ಯವರ್ಧಕ ಉತ್ಪನ್ನಗಳನ್ನು ಹೊಂದಿದ್ದಾರೆ. ಇನ್ನು ಕೆಲವರು ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕ ಉತ್ಪನ್ನಗಳನ್ನೇ ಅವಲಂಬಿಸಿದ್ದಾರೆ. ಆದರೆ ಅನೇಕ ಅಭಿಮಾನಿಗಳು ಸ್ಕಿನ್ ಕೇರ್ ಸಲಹೆಗಳಿಂದ ಹಿಡಿದು ಉತ್ಪನ್ನಗಳವರೆಗೆ ಎಲ್ಲದಕ್ಕೂ ನಾಯಕಿಯರನ್ನು ಅನುಸರಿಸುತ್ತಾರೆ. ಇತ್ತೀಚೆಗಷ್ಟೇ ತನ್ನ ಸೌಂದರ್ಯ ಮತ್ತು ನಟನೆಯಿಂದ ಫೇಮಸ್ ಆಗಿರುವ ಟಾಲಿವುಡ್ ನಾಯಕಿಯೊಬ್ಬರು ಸಂದರ್ಶನವೊಂದರಲ್ಲಿ ತಮ್ಮ ಸೌಂದರ್ಯದ ಗುಟ್ಟನ್ನು ಹಂಚಿಕೊಂಡಿದ್ದಾರೆ. 

ಈ ನಟಿ ತನ್ನ ತ್ವಚೆಯನ್ನು ಸುಂದರವಾಗಿಸಲು ದುಬಾರಿ ಉತ್ಪನ್ನಗಳನ್ನು ಬಳಸುವ ಬದಲು, ತನ್ನ ಉಗುಳನ್ನು ಬಳಸುತ್ತಾರಂತೆ. ಬೆಳಿಗ್ಗೆ ಎದ್ದಾಗ ಮುಖದ ಮೇಲೆ ಉಗುಳನ್ನು ಹಚ್ಚಿಕೊಳ್ಳುತ್ತಾರಂತೆ. ಅವರು ಬೇರೆ ಯಾರೂ ಅಲ್ಲ, ಮಿಲ್ಕಿ ಬ್ಯೂಟಿ ಎಂದು ಕರೆಯಲ್ಪಡುವ ತಮನ್ನಾ ಭಾಟಿಯಾ.

ಇದನ್ನೂ ಓದಿ: ಬಿಗ್ ಬಾಸ್ ಗೆ ಕಾನೂನು ತೊಡಕು : ಶೋ ನಿಲ್ಲಿಸಲು ಆದೇಶ : ಫಿನಾಲೆಗೂ ಮುನ್ನವೇ ಕಾರ್ಯಕ್ರಮಕ್ಕೆ ಬೀಳುತ್ತಾ ತೆರೆ ?

ತಮನ್ನಾ ಭಾಟಿಯಾ ಸಂದರ್ಶನವೊಂದರಲ್ಲಿ ತನ್ನ ತ್ವಚೆಯ ಆರೈಕೆಯ ಬಗ್ಗೆ ಮಾತನಾಡಿದ್ದಾರೆ. ಬೆಳಿಗ್ಗೆ ಎದ್ದಾಗ ಮುಖದ ಮೇಲೆ ಉಗುಳನ್ನು ಹಚ್ಚುತ್ತೇನೆ ಎಂದು ಹೇಳಿದ್ದಾರೆ. ಮೊದಲಿಗೆ ಅದು ತುಂಬಾ ವಿಚಿತ್ರವೆನಿಸಬಹುದು. ಆದರೆ ನಂತರ ಅದರ ಪ್ರಯೋಜನಗಳನ್ನು ಅರಿತುಕೊಂಡ ಬಳಿಕ ಆಶ್ಚರ್ಯವಾಗುತ್ತೀರಿ. ಮುಖದ ಮೇಲೆ ಉಗುಳು ಹಚ್ಚುವುದರಿಂದ ಕಲೆಗಳು, ಮೊಡವೆಗಳು ಕಡಿಮೆಯಾಗುತ್ತವೆ ಎನ್ನುತ್ತಾರೆ ತಮನ್ನಾ. ಮೊಡವೆ ಬಂದಾಗಲೆಲ್ಲ ಕೆಲವು ದಿನಗಳವರೆಗೆ ತಮ್ಮ ಉಗುಳನ್ನು ಅದಕ್ಕೆ ಹಚ್ಚುತ್ತಾರಂತೆ. ತಮನ್ನಾ ಹಂಚಿಕೊಂಡ ಬ್ಯೂಟಿ ಟಿಪ್ಸ್ ಕೇಳಿ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ.

ತಮನ್ನಾ ಭಾಟಿಯಾ 10 ವರ್ಷಗಳ ಕಾಲ ಈ ಉದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಇವರ ಬಣ್ಣ ಮತ್ತು ಸೌಂದರ್ಯ ಜನರ ಮನಸ್ಸಿಗೆ ಹತ್ತಿರವಾಗಿದೆ. ತಮನ್ನಾಇದೀಗ ಹಂಚಿಕೊಂಡ ಈ ಬ್ಯೂಟಿ ಸೀಕ್ರೇಟ್‌ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.  

ಇದನ್ನೂ ಓದಿ: ಸಿನಿರಂಗದ ಅತ್ಯಂತ ದುಬಾರಿ ವಿಚ್ಛೇದನ.. ಪತ್ನಿಗೆ 380 ಕೋಟಿ ಜೀವನಾಂಶ ಕೊಟ್ಟ ಸ್ಟಾರ್ ಹೀರೋ !

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News