ರಾತ್ರಿ ʼನಿಮ್ಮ ಸಂಗಾತಿʼಯನ್ನು ಅಪ್ಪಿಕೊಂಡು ಮಲಗಿ..! ಈ ಆರೋಗ್ಯ ಲಾಭಗಳು ನಿಮ್ಮದಾಗುತ್ತವೆ.. 

Health tips in Kannada : ಅಪ್ಪಿಕೊಂಡು ಮಲಗಿದರೆ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ, ಇದರಿಂದ ಆರೋಗ್ಯವಾಗಿರಬಹುದು ಎನ್ನುತ್ತಾರೆ ತಜ್ಞರು. ಅಷ್ಟೇ ಅಲ್ಲ, ಸಂಗಾತಿಯನ್ನು ಅಪ್ಪಿಕೊಂಡು ಮಲಗುವುದರಿಂದ ರಾತ್ರಿಯಿಡೀ ಆರಾಮದಾಯಕ ನಿದ್ದೆ ಬರುತ್ತದೆ.. ಮನಸ್ಸು ನಿರಾಳವಾಗುತ್ತದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Jul 13, 2024, 08:18 PM IST
    • ಆರಾಮದಾಯಕ ನಿದ್ದೆಗೆ ಅಪ್ಪುಗೆ ಮದ್ದು
    • ಸಂಗಾತಿಯನ್ನು ಅಪ್ಪಿಕೊಂಡು ಮಲಗಿ
    • ನೆಮ್ಮದಿಯ ನಿದ್ದೆಗೆ ಅಪ್ಪು ಔಷಧಿ
ರಾತ್ರಿ ʼನಿಮ್ಮ ಸಂಗಾತಿʼಯನ್ನು ಅಪ್ಪಿಕೊಂಡು ಮಲಗಿ..! ಈ ಆರೋಗ್ಯ ಲಾಭಗಳು ನಿಮ್ಮದಾಗುತ್ತವೆ..  title=

Hug health benefits : ʼಒತ್ತಡʼ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ರಾತ್ರಿಯಲ್ಲಿ ನಾವು ಮಲಗುವ ವಿಧಾನವನ್ನು ಬದಲಾಯಿಸುವ ಮೂಲಕ ಇದರಿಂದ ಹೊರಬರಲು ಸಾಧ್ಯವಾಗುತ್ತದೆ. ರಾತ್ರಿ ವೇಳೆ ಈ ಕೆಳಗೆ ನೀಡಿರುವ ವಿಧಾನದಲ್ಲಿ ಮಲಗಿ, ಒತ್ತರ ನಿವಾರಣೆಯಾಗಿ ಉತ್ತಮ ನಿದ್ದೆ ಬರುತ್ತದೆ.. 

ದಿನನಿತ್ಯ ಕಚೇರಿ ಕೆಲಸ ಮಾಡಿ ಒತ್ತಡವನ್ನು ಹೊತ್ತು ಮನೆಗೆ ಬರುತವ ಜನರಿಗೆ ನೆಮ್ಮದಿಯ ನಿದ್ದೆ ಮಾಡುವುದೇ ಒಂದು ಹರಸಾಹಸ. ವಿಶೇಷವಾಗಿ ಪುರುಷರು ಯಾವಾಗಲೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಅನೇಕ ಕೆಲಸಗಳಿಂದ ದಣಿದಿರುತ್ತಾರೆ. ಆದರೆ ರಾತ್ರಿಯಲ್ಲಿ ನಾವು ಮಲಗುವ ವಿಧಾನವನ್ನು ಬದಲಾಯಿಸುವ ಮೂಲಕ ಶೀಘ್ರವೇ ನೆಮ್ಮದಿಯಿಂದ ನಿದ್ದೆ ಮಾಡಬಹುದು..

ಇದನ್ನೂ ಓದಿ: ಶ್ವಾಸಕೋಶದ ಕ್ಯಾನ್ಸರ್‌ ನ ಆರಂಭಿಕ ಲಕ್ಷಣಗಳು ಹೀಗೆ ಇರುತ್ತವೆ..! ನಿರ್ಲಕ್ಷಿಸಬೇಡಿ..!

ನಿಮ್ಮ ಸಂಗಾತಿಯನ್ನು ಅಪ್ಪಿಕೊಂಡು ಮಲಗುವುದರಿಂದ ಅನೇಕ ಪ್ರಯೋಜನಗಳಿವೆ. ಗಂಡ-ಹೆಂಡತಿ ಅಪ್ಪಿಕೊಂಡು ಮಲಗಿದರೆ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ, ಇದರಿಂದ ಆರೋಗ್ಯವಾಗಿರಬಹುದು ಎನ್ನುತ್ತಾರೆ ತಜ್ಞರು. ಅಷ್ಟೇ ಅಲ್ಲ, ಸಂಗಾತಿಯನ್ನು ಅಪ್ಪಿಕೊಂಡು ಮಲಗುವುದರಿಂದ ರಾತ್ರಿಯಿಡೀ ಆರಾಮದಾಯಕ ನಿದ್ದೆ ಬರುತ್ತದೆ.. ಮನಸ್ಸು ನಿರಾಳವಾಗುತ್ತದೆ.

ಅಪ್ಪಿಕೊಂಡು ಮಲಗುವುದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಬೆಳಿಗ್ಗೆ ನೀವು ತುಂಬಾ ಫ್ರೆಶ್ ಆಗುತ್ತೀರಿ.. ಹೃದಯದ ಆರೋಗ್ಯವೂ ಸುಧಾರಿಸುತ್ತದೆ. ಅಪ್ಪುಗೆಯು ಹೃದಯ ಬಡಿತದ ವೇಗ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಒತ್ತಡ ಅಥವಾ ಆತಂಕದಲ್ಲಿರುವವರನ್ನು ಹಗ್ ಮಾಡುವುದು ಅವರಿಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News