ನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋ

Snake Nagamani Video :ವ್ಯಕ್ತಿಯೊಬ್ಬ ನಾಗರಹಾವಿನ ತಲೆಯನ್ನು ಸೀಳಿ ನಾಗಮಣಿ ಹೊರ ತೆಗೆಯುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ನಾಗಮಣಿ ಎನ್ನುವುದು ಅತ್ಯಂತ ವಿಶೇಷ ವಸ್ತು. 

Written by - Ranjitha R K | Last Updated : Aug 19, 2024, 12:38 PM IST
  • ನಾಗ,ನಾಗಮಣಿ ಎನ್ನುವ ವಿಶ್ಯಾಧಾರಿತ ಅನೇಕ ಚಿತ್ರಗಳು ಬಿಡುಗಡೆ
  • ಧಾರಾವಾಹಿಗಳಲ್ಲಿ ಕೂಡಾ ಇಂಥಹ ಕಂಟೆಂಟ್ ಗಳನ್ನು ನೋಡಿರುತ್ತೇವೆ.
  • ನಾಗಮಣಿ ಎನ್ನುವುದು ಅತ್ಯಂತ ವಿಶೇಷ ವಸ್ತು.
 ನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋ  title=

Snake Nagamani Video : ನಾಗ,ನಾಗಮಣಿ ಎನ್ನುವ ವಿಶ್ಯಾಧಾರಿತ ಅನೇಕ ಚಿತ್ರಗಳು ಬಿಡುಗಡೆಯಾಗಿವೆ.ಧಾರಾವಾಹಿಗಳಲ್ಲಿ ಕೂಡಾ ಇಂಥಹ ಕಂಟೆಂಟ್ ಗಳನ್ನು ನೋಡಿರುತ್ತೇವೆ.ನಾಗಮಣಿ ಎನ್ನುವುದು ಅತ್ಯಂತ ವಿಶೇಷ ವಸ್ತು.ಅದು ಎಲ್ಲರ ಕಣ್ಣಿಗೆ ಬೀಳುವುದಿಲ್ಲ ಎನ್ನುವ ಮಾತುಗಳನ್ನೇ ಸಾಮಾನ್ಯವಾಗಿ ನಾವು ಕೇಳಿರುತ್ತೇವೆ.ನಾಗಮಣಿ ಯಾರ ಕೈಯ್ಯಲ್ಲಿ ಇರುತ್ತದೆಯೋ ಆ ವ್ಯಕ್ತಿಗೆ ವಿಶೇಷ ಶಕ್ತಿ ಬರುತ್ತದೆ ಎಂದು ಹೇಳಲಾಗುತ್ತದೆ.ಈ ನಂಬಿಕೆಯ ಆಧಾರದ ಮೇಲೆಯೇ ಸಿನಿಮಾ, ಧಾರಾವಾಹಿ ಮಾತುಗಳು ಸುತ್ತುವರಿಯುತ್ತವೆ.ಈಗಲೂ ಈ ಕತೆಯನ್ನು ಆಧರಿಸಿ ಧಾರಾವಾಹಿಗಳು ಚಾಲ್ತಿಯಲ್ಲಿವೆ. 

ಆದರೆ ನಾಗ ಮತ್ತು ನಾಗಮಣಿಗೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್ ಆಗುತ್ತಿದೆ.ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನಾಗರ ಹಾವಿನ ಹೆಡೆಯ ಸಮೀಪ ಸೀಳಿ ಮಣಿಯೊಂದನ್ನು ಹೊರತೆಗೆಯುತ್ತಾನೆ.ಈ ಮಣಿ ಕಡು ನೀಲಿ ಬಣ್ಣವನ್ನು ಹೊಂದಿದೆ. 

ಇದನ್ನೂ ಓದಿ : Viral Video: ಹಾವಿನ ಮೊಟ್ಟೆ ಮರಿಯಾಗುವುದನ್ನು ನೋಡಿದ್ದೀರಾ? ಮೈ ರೋಮ ಎದ್ದು ನಿಲ್ಲುವ ವಿಡಿಯೋ ವೈರಲ್‌

ನೆಲದ ಮೇಲೆ ಸರಸರನೆ ಹರಿದಾಡುವ ನಾಗರಹಾವನ್ನು ಈ ವಿಡಿಯೋದಲ್ಲಿ ಕಾಣಬಹುದು.ಆ ಹಾವನ್ನು ಹಿಡಿಯುವ ಉದ್ದೇಶದಿಂದಲೇ ವ್ಯಕ್ತಯಾಯೊಬ್ಬ ಹಾವಿನ ಹಿಂದೆಯೇ ಓಡಿಕೊಂದು ಬರುವುದನ್ನು ಕೂಡಾ ನೋಡಬಹುದು. ಆ ವ್ಯಕ್ತಿಗೆ ಅಂದುಕೊಂಡಷ್ಟು ಸುಲಭವಾಗಿ ನಾಗರಹಾವು ಕೈಗೆ ಸಿಗುವುದಿಲ್ಲ.ಅಲ್ಲದೆ ಆ ವ್ಯಕ್ತಿಯನ್ನು ಕಡಿಯುವುದಕ್ಕೆ ಕೂಡಾ ನಾಗರಹಾವು ಮುಂದಾಗುತ್ತದೆ. 

ಆದರೆ ಮಣಿಗಾಗಿಯೇ ಹಾವಿನ ಹಿಂದೆ ಬಿದ್ದಿರುವಂತೆ ಕಾಣುವ ಆ ವ್ಯಕ್ತಿ ಸುಮ್ಮನೆ ಬಿಡಬೇಕಲ್ಲ. ಹಾಗೋ ಹೀಗೋ ಮಾಡಿ ಹಾವನ್ನು ತನ್ನ ಮುಷ್ಟಿಯಲಿ ಬಂಧಿಸಿಯೇ ಬಿಡುತ್ತಾನೆ. ನಂತರ ಆ ಹಾವನ್ನು ಕಾಲಲ್ಲಿ ಒತ್ತಿ ಹಿಡಿದು,ಮಣಿ ತೆಗೆಯಲು ಯತ್ನಿಸುತ್ತಾನೆ. ತನ್ನ ಬಳಿಯಿದ್ದ ಚಾಕು ತೆಗೆದುಕೊಂಡು ಆ ಹಾವಿನ ಹೆಡೆಯ ಬಳಿ ಸೀಳು ಹಾಕಿ ತಲೆಯ ಭಾಗದಲ್ಲಿದ್ದ ಮಣಿಯನ್ನು ತೆಗದು ಬಿಡುತ್ತಾನೆ.

ನಾಗಮಣಿ ಹೊರ ತೆಗೆಯುವ ವಿಡಿಯೋ ಇಲ್ಲಿದೆ : 

ಇದನ್ನೂ ಓದಿ : ಬೆಳ್ಳುಳ್ಳಿ ಖರೀದಿ ಮಾಡುವಾಗ ಇರಲಿ ಎಚ್ಚರ ! ಮಾರುಕಟ್ಟೆಯಲ್ಲಿ ಹಾರಿದಾಡುತ್ತಿದೆ ಸಿಮೆಂಟ್ ಬೆಳ್ಳುಳ್ಳಿ ! ಇಲ್ಲಿದೆ ನೋಡಿ ವಿಡಿಯೋ

ಈ ವಿಡಿಯೋವನ್ನು New Best Stories ಎನ್ನುವ ಯುಟ್ಯೂಬ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.ಇದು ಹಳೆಯ ವಿಡಿಯೋ ಆಗಿದ್ದರೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.ಆದರೆ ಈ ವ್ಯಕ್ತಿ ಹೊರ ತೆಗೆದ ಮಣಿ ನಿಜವಾಗಿಯೂ ನಾಗಮಣಿಯೋ ಅಥವಾ ಅಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News