Astro Tips: ಸೋಮವಾರ ಯಾವ ಕೆಲಸ ಮಾಡಬೇಕು & ಮಾಡಬಾರದು ಗೊತ್ತಾ?

Significance of Monday: ಸೋಮವಾರ ಬಿಳಿ ಬಣ್ಣದ ಬಟ್ಟೆ ಧರಿಸುವುದು, ದನಗಳಿಗೆ ಆಹಾರ ನೀಡುವುದು ಶ್ರೇಷ್ಠ. ಈ ದಿನ ಶಿವನ ದಿನವಾಗಿರುವುದರಿಂದ ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸಿ ಶಿವಲಿಂಗಕ್ಕೆ ಪೂಜೆ ಮಾಡಬೇಕು. ಈ ದಿನ ಚಂದ್ರ ದೋಷ ನಿವಾರಣೆ ಪೂಜೆ ಮಾಡಬಹುದಾಗಿದೆ.

Written by - Puttaraj K Alur | Last Updated : Aug 18, 2024, 09:03 AM IST
  • ಹಿಂದೂ ಧರ್ಮದಲ್ಲಿ ವಾರದ ಪ್ರತಿದಿನವೂ ವಿಭಿನ್ನ ದೇವರನ್ನು ಪೂಜಿಸಲಾಗುತ್ತದೆ
  • ಸೋಮವಾರ ಚಂದ್ರ ದೋಷ ಇರುವವರು ಸಕ್ಕರೆ ಅಂಶದ ಪದಾರ್ಥ ಸೇವಿಸಬಾರದು
  • ಶನಿಗೆ ಸಂಬಂಧಿಸಿದಂತೆ ಕಪ್ಪು ಬಟ್ಟೆ ಧರಿಸುವುದು, ಎಳ್ಳು ಸೇವನೆ ಮಾಡುವುದು ನಿಷಿದ್ಧ
Astro Tips: ಸೋಮವಾರ ಯಾವ ಕೆಲಸ ಮಾಡಬೇಕು & ಮಾಡಬಾರದು ಗೊತ್ತಾ? title=
ಸೋಮವಾರ ಯಾವ ಕೆಲಸ ಮಾಡಬಾರದು?

Significance of Monday: ಹಿಂದೂ ಧರ್ಮದಲ್ಲಿ ವಾರದ ಪ್ರತಿಯೊಂದು ದಿನವೂ ಒಂದೊಂದು ವಿಭಿನ್ನ ದೇವರನ್ನು ಪೂಜಿಸಲಾಗುತ್ತದೆ. ಅದೇ ರೀತಿ ಸೋಮವಾರವನ್ನು ಶಿವನ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಯಾವ ಕೆಲಸ ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ತಿಳಿಯುವುದು ಬಹುಮುಖ್ಯ. 

ಸೋಮವಾರ ಯಾವ ಕೆಲಸ ಮಾಡಬಾರದು? 

ಸೋಮವಾರ ಶಿವನ ದಿನ.. ಚಂದ್ರ ಗ್ರಹ ಅಧಿದೇವತೆಯಾಗಿರುವ ದಿನವೂ ಹೌದು. ಈ ದಿನ ಚಂದ್ರ ದೋಷ ಇರುವವರು ಸಕ್ಕರೆ ಅಥವಾ ಸಕ್ಕರೆ ಅಂಶದ ಪದಾರ್ಥಗಳನ್ನು ಸೇವಿಸಬಾರದು. ಈ ದಿನ ನಿಮ್ಮ ತಾಯಿ ಅಥವಾ ಮನೆಯ ಹಿರಿಯರೊಂದಿಗೆ ವಾಗ್ವಾದಕ್ಕೆ ಇಳಿಯಬೇಡಿ. ಈ ದಿನ ತಾಮಸಿಕ ಆಹಾರದಿಂದ ದೂರವಿರುವುದು ಆದಷ್ಟು ಉತ್ತಮ.

ಇದನ್ನೂ ಓದಿShraddha: ಶ್ರಾದ್ಧ ಕಾರ್ಯ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!

ಅದೇ ರೀತಿ ಸೋಮವಾರದಂದು ಅನಿವಾರ್ಯದ ಹೊರತಾಗಿ ತಲೆ ಸ್ನಾನ ಮಾಡುವುದು ಒಳ್ಳೆಯದಲ್ಲ. ಮಹಿಳೆಯರನ್ನು ಅವಮಾನಿಸುವುದು ನಿಮಗೆ ಕೆಡುಕುಂಟು ಮಾಡಬಹುದು. ಈ ದಿನ ಶನಿಗೆ ಸಂಬಂಧಿಸಿದಂತೆ ಕಪ್ಪು ಬಟ್ಟೆ ಧರಿಸುವುದು, ಎಳ್ಳು ಸೇವನೆ ಮಾಡುವುದು ನಿಷಿದ್ಧವಾಗಿದೆ. ಈ ದಿನ ಪೂರ್ವ, ಉತ್ತರ ಮತ್ತು ಆಗ್ನೇಯ ದಿಕ್ಕಿಗೆ ಯಾವುದೇ ಕಾರಣಕ್ಕೂ ಪ್ರಯಾಣಿಸಬಾರದು.

ಸೋಮವಾರ ಯಾವ ಕೆಲಸ ಮಾಡಬಾರದು?

ಸೋಮವಾರ ಬಿಳಿ ಬಣ್ಣದ ಬಟ್ಟೆ ಧರಿಸುವುದು, ದನಗಳಿಗೆ ಆಹಾರ ನೀಡುವುದು ಶ್ರೇಷ್ಠವಾಗಿದೆ. ಈ ದಿನ ಶಿವನ ದಿನವಾಗಿರುವುದರಿಂದ ಶಿವಲಿಂಗಕ್ಕೆ ಬಿಲ್ವ ಪತ್ರೆಯನ್ನು ಅರ್ಪಿಸಿ ಶಿವಲಿಂಗಕ್ಕೆ ಪೂಜೆ ಮಾಡಬೇಕು. ಈ ದಿನ ಚಂದ್ರ ದೋಷ ನಿವಾರಣೆಯ ಪೂಜೆಗಳನ್ನು ಮಾಡಬಹುದಾಗಿದೆ.

ಇದನ್ನೂ ಓದಿ: Goddess Lakshmi: ಲಕ್ಷ್ಮೀದೇವಿ ನೆಲೆಸಬೇಕೆಂದರೆ ಮನೆ ಮುಂದೆ ಈ ಗಿಡಗಳನ್ನು ನೆಡಬೇಕು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News