2008ರ ಐಪಿಎಲ್‌ ಮೊದಲ ಸೀಸನ್‌ʼನಲ್ಲಿ ವಿರಾಟ್ ಕೊಹ್ಲಿಗೆ RCB ಕೊಟ್ಟ ಸಂಭಾವನೆ ಎಷ್ಟು ಗೊತ್ತಾ?

Remuneration to Virat Kohli: ವಿರಾಟ್ ಕೊಹ್ಲಿ RCB ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಇನ್ನು ಐಪಿಎಲ್ ಆರಂಭವಾದಾಗ ನಡೆದ ಹರಾಜಿನಲ್ಲಿ ಮೊದಲ ಬಾರಿಗೆ ವಿರಾಟ್ ಕೊಹ್ಲಿಯನ್ನು ಯಾವ ತಂಡವೂ ಸೇರಿಸಿಕೊಳ್ಳಲಿಲ್ಲ. ಏಕೆಂದರೆ ಅವರು ಭಾರತೀಯ ಅಂಡರ್-19 ತಂಡದ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು.

Written by - Bhavishya Shetty | Last Updated : Aug 19, 2024, 04:44 PM IST
    • ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇದುವರೆಗೆ ಐಪಿಎಲ್ ಹರಾಜಿನಲ್ಲಿ ಭಾಗಿಯಾಗಿಲ್ಲ
    • 2008 ರಿಂದ ಇಲ್ಲಿಯವರೆಗೆ RCB ಪರವೇ ಆಡುತ್ತಿದ್ದಾರೆ
    • ಇನ್ನು 2022 ವಿರಾಟ್ ಕೊಹ್ಲಿ RCB ನಾಯಕತ್ವಕ್ಕೆ ರಾಜೀನಾಮೆ ನೀಡಿದರು.
2008ರ ಐಪಿಎಲ್‌ ಮೊದಲ ಸೀಸನ್‌ʼನಲ್ಲಿ ವಿರಾಟ್ ಕೊಹ್ಲಿಗೆ RCB ಕೊಟ್ಟ ಸಂಭಾವನೆ ಎಷ್ಟು ಗೊತ್ತಾ? title=
File Photo

Remuneration to Virat Kohli: ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇದುವರೆಗೆ ಐಪಿಎಲ್ ಹರಾಜಿನಲ್ಲಿ ಭಾಗಿಯಾಗಿಲ್ಲ. 2008 ರಿಂದ ಇಲ್ಲಿಯವರೆಗೆ RCB ಪರವೇ ಆಡುತ್ತಿದ್ದಾರೆ. ಆರ್‌ ಸಿ ಬಿ ತಂಡದ ನಾಯಕತ್ವದಿಂದ ಕೆಳಗಿಳಿದ ಬಳಿಕವೂ ತಾನು ಆರ್‌ ಸಿ ಬಿ ಪರ ಮಾತ್ರ ಆಡುವ ಇಚ್ಛೆ ವ್ಯಕ್ತಪಡಿಸಿದ್ದು, ಅದನ್ನು ಮೀರಿ ಬೇರೆ ಯಾವುದೇ ತಂಡದಲ್ಲಿ ಆಡುವ ಇರಾದೆ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅತ್ಯಂತ ನತದೃಷ್ಟ ಕ್ರಿಕೆಟಿಗ ಇವರೇ...! 4 ರನ್‌ ನೀಡಿ 6 ವಿಕೆಟ್ ಪಡೆದು ಮಿಂಚಿದ್ದ ಸ್ಟಾರ್ ಬೌಲರ್‌

ಇನ್ನು 2022 ವಿರಾಟ್ ಕೊಹ್ಲಿ RCB ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಇನ್ನು ಐಪಿಎಲ್ ಆರಂಭವಾದಾಗ ನಡೆದ ಹರಾಜಿನಲ್ಲಿ ಮೊದಲ ಬಾರಿಗೆ ವಿರಾಟ್ ಕೊಹ್ಲಿಯನ್ನು ಯಾವ ತಂಡವೂ ಸೇರಿಸಿಕೊಳ್ಳಲಿಲ್ಲ. ಏಕೆಂದರೆ ಅವರು ಭಾರತೀಯ ಅಂಡರ್-19 ತಂಡದ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಅದಾದ ನಂತರ ಐಪಿಎಲ್ ತಂಡಗಳು ಭಾರತೀಯ ಅಂಡರ್-19 ತಂಡದಿಂದ ತಲಾ ಒಬ್ಬ ಆಟಗಾರನನ್ನು ಡ್ರಾಫ್ಟ್ ಮಾಡಬೇಕಾಗಿರುವುದರಿಂದ, ಆರ್‌ʼಸಿಬಿ ವಿರಾಟ್ ಕೊಹ್ಲಿಯನ್ನು 12 ಲಕ್ಷ ರೂಪಾಯಿಗಳಿಗೆ (30 ಸಾವಿರ ಯುಎಸ್ ಡಾಲರ್) ತೆಗೆದುಕೊಂಡಿತು. ಇನ್ನು ಆ ಬಳಿಕ ಭರ್ಜರಿ ಪ್ರದರ್ಶನ ತೋರುತ್ತಿದ್ದ ವಿರಾಟ್ ಕೊಹ್ಲಿ, ಕಿರಿಯ ವಯಸ್ಸಿನಲ್ಲೇ ಸ್ಟಾರ್ ಸ್ಥಾನಮಾನ ಪಡೆಯತೊಡಗಿದರು. ಈ ಕಾರಣದಿಂದ ಅವರಿಗೆ 2011 ರಿಂದ 2013 ರವರೆಗೆ ಅವರು 8.28 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ನೀಡಲಾಗುತ್ತಿತ್ತು.

ಇದನ್ನೂ ಓದಿ: ಅನುಷ್ಕಾ ಯಾವಾಗಲೂ ʼಅದನ್ನುʼ ಮಾಡೋದು ನನಗೆ ಇಷ್ಟವಾಗಲ್ಲ: ನಟ ಅಮೀರ್‌ ಖಾನ್‌ ಮುಂದೆ ಪತ್ನಿಯ ಸೀಕ್ರೆಟ್‌ ಬಿಚ್ಚಿಟ್ಟ ವಿರಾಟ್‌ ಕೊಹ್ಲಿ

ಆ ಬಳಿಕ 2014ರಿಂದ 2017ರವರೆಗೆ 12.5 ಕೋಟಿ ರೂ. ಸಂಭಾವನೆ ನೀಡಿದರೆ, 2013 ರಲ್ಲಿ ನಾಯಕರಾಗಿ ಅಧಿಕಾರ ವಹಿಸಿಕೊಂಡರು. ಇನ್ನು 2018 ರಿಂದ 2021 ರವರೆಗೆ 17 ಕೋಟಿ ರೂಪಾಯಿ  ಸಂಭಾವನೆ ನೀಡಲಾಗಿತ್ತು. ಆದರೆ ಆ ಬಳಿಕ ಫ್ರಾಂಚೈಸಿ ಪರ್ಸ್ʼನಲ್ಲಿ ಇತರ ಆಟಗಾರರ ಖರೀದಿಗೂ ಸಂಭಾವನೆ ಸಾಲುತ್ತಿಲ್ಲ ಎಂಬ ಕಾರಣ ಅರಿತ ಕೊಹ್ಲಿ ಸ್ವತಃ 15 ಕೋಟಿ ಸಂಭಾವನೆ ನೀಡುವಂತೆ ಹೇಳಿದರು. ಆ ಕಾರಣದಿಂದ ಇದೀಗ 15 ಕೋಟಿ ರೂ.ಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News