ಆರೋಗ್ಯದಿಂದ ಇರಬೇಕಾದರೆ ಈ ಸಮಯದೊಳಗೆ ಮುಗಿದಿರಲಿ ಭೋಜನ

ಊಟದ ಸಮಯಕ್ಕೆ ಸರಿಯಾಗಿ ಭೋಜನ ಮಾಡುವುದಕ್ಕೆ ಬದಲು, ಹಾಳು ಮೂಳು ತಿಂಡಿಗಳನ್ನು ತಿನ್ನುವುದು, ಸಮಯವಲ್ಲದ ಸಮಯದಲ್ಲಿ ಊಟ ಮಾಡುವುದರಿಂದ ದೇಹ ತೂಕ ವಿಪರೀತವಾಗಿ ಹೆಚ್ಚಲು ಆರಂಭಿಸುತ್ತದೆ.

Written by - Ranjitha R K | Last Updated : May 21, 2021, 04:08 PM IST
  • ಎಷ್ಟೇ ಬ್ಯುಸಿಯಾಗಿದ್ದರೂ ಆರೋಗ್ಯದ ಕಡೆ ಗಮನ ಇರಲೇಬೇಕು
  • ಉತ್ತಮ ಆರೋಗ್ಯ ಇರಬೇಕಾದರೆ ಸಮಯಕ್ಕೆ ಸರಿಯಾಗಿ ಸೇವಿಸಿ ಆಹಾರ
  • ಊಟದ ಹೊತ್ತು ಮೀರಿದರೆ ಎದುರಾಗಲಿದೆ ಸಮಸ್ಯೆ
ಆರೋಗ್ಯದಿಂದ ಇರಬೇಕಾದರೆ ಈ ಸಮಯದೊಳಗೆ ಮುಗಿದಿರಲಿ ಭೋಜನ title=
ಎಷ್ಟೇ ಬ್ಯುಸಿಯಾಗಿದ್ದರೂ ಆರೋಗ್ಯದ ಕಡೆ ಗಮನ ಇರಲೇಬೇಕು (file photo)

ಬೆಂಗಳೂರು : ಇಂದಿನ ಬಿಡುವಿಲ್ಲದ ಜೀವನದಲ್ಲಿ, ನಮ್ಮ ಆರೋಗ್ಯದ (Health) ಬಗ್ಗೆ ಗಮನ ಹರಿಸಲು ಸಮಯವೇ ಸಿಗುವುದಿಲ್ಲ. ಕೆಲವೊಮ್ಮೆ ಕೆಲಸದಲ್ಲಿ ಎಷ್ಟು ಮಗ್ನರಾಗಿ ಬಿಡುತ್ತೇವೆ ಎಂದರೆ ಊಟದ ಸಮಯ (Lunch time) ಮೀರಿ ಹೋಗುವುದೇ ತಿಳಿಯುವುದಿಲ್ಲ. ಇನ್ನು ಕೆಲವೊಮ್ಮೆ ಹೊಟ್ಟೆ ಹಸಿವಿನ ಸಮಯದಲ್ಲಿ ಕೈಗೆ ಸಿಕ್ಕಿದ್ದನ್ನು ತಿಂದು ಹಸಿವು ತಣಿಸಲು ಯತ್ನಿಸುತ್ತೇವೆ. ಆದರೆ ಹೀಗೆ ಮಾಡುವುರಿಂದ ಹಸಿವು ನೀಗುತ್ತದೆ ನಿಜ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿರುತ್ತದೆ. ಹೀಗೆ ಊಟದ ಸಮಯಕ್ಕೆ ಸರಿಯಾಗಿ ಭೋಜನ ಮಾಡುವುದಕ್ಕೆ ಬದಲು, ಹಾಳು ಮೂಳು ತಿಂಡಿಗಳನ್ನು ತಿನ್ನುವುದು, ಸಮಯವಲ್ಲದ ಸಮಯದಲ್ಲಿ ಊಟ ಮಾಡುವುದರಿಂದ ದೇಹ ತೂಕ ವಿಪರೀತವಾಗಿ ಹೆಚ್ಚಲು ಆರಂಭಿಸುತ್ತದೆ. ಹೀಗೆ ಹೆಚ್ಚಾದ ದೇಹ ತೂಕವನ್ನು ಇಳಿಸುವುದು (Weight loss) ಬಹಳ ಕಷ್ಟವಾಗುತ್ತದೆ. 

ಇತ್ತೀಚಿನ ಅಧ್ಯಯನದ ಪ್ರಕಾರ, ಯಾರು ಮಧ್ಯಾಹ್ನ 3 ಗಂಟೆಗೆ ಊಟ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದಾರೋ, ಅವರ ದೇಹ ತೂಕ ಇಳಿಯುವ  (Weight loss) ಪ್ರಕ್ರಿಯೆ ಕೂಡಾ ನಿಧಾನವಾಗಿರುತ್ತದೆ. ಮಧ್ಯಾಹ್ನ 3 ಗಂಟೆಯ ಭೋಜನ ಮಾಡುವವರು ಅತಿ ಕಡಿಮೆ ಪ್ರಮಾಣದಲ್ಲಿ ದೇಹ ತೂಕ ಕಳೆದುಕೊಂಡಿರುವುದು ಅಧ್ಯಯನದಲ್ಲಿ ಕಂಡು ಬಂದಿದೆ. ಇನ್ನು ಯಾವ್ಯಾವುದೋ ಸಮಯದಲ್ಲಿ ಭೋಜನ ಮಾಡುವುದರಿಂದ ದೇಹವು ಇನ್ಸುಲಿನ್‌ಗೆ (Insulin) ಕಡಿಮೆ ಸಂವೇದನಾಶೀಲವಾಗಿರುತ್ತದೆ. ತೂಕ ಇಳಿಸುವುದರಲ್ಲಿ ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

ಇದನ್ನೂ ಓದಿ : ಇಮ್ಯುನಿಟಿಗಾಗಿ ನಿತ್ಯ ಕಿತ್ತಳೆ ತಿನ್ನುವ ಮೊದಲು ಈ ವಿಚಾರಗಳು ತಿಳಿದಿರಲಿ

ಇದಲ್ಲದೆ, ತೂಕ ಇಳಿಸಲು (Weight loss) ಬಯಸುವವರು, ದಿನನಿತ್ಯ ದೇಹಕ್ಕೆ ಅಗತ್ಯವಿರುವ ಕ್ಯಾಲೋರಿಯನ್ನು ಈ ರೀತಿ ಪಡೆಯಬೇಕು.  ದೈನಂದಿನ ಕ್ಯಾಲೊರಿ ಸೇವನೆಯ 50 ಪ್ರತಿಶತವನ್ನು ಮಧ್ಯಾಹ್ನ ಊಟದಲ್ಲಿ (Lunch) , 15 ಪ್ರತಿಶತದಷ್ಟು ಉಪಾಹಾರದಲ್ಲಿ (Breakfast) , 15 ಪ್ರತಿಶತದಷ್ಟು ಸಂಜೆಯ ತಿಂಡಿಯಲ್ಲಿ, ಮತ್ತು 20 ಪ್ರತಿಶತದಷ್ಟು ರಾತ್ರಿ ಊಟದಲ್ಲಿ ಸೇವಿಸುವುದು ಬಹಳ ಮುಖ್ಯವಾಗಿರುತ್ತದೆ. 

ಇದನ್ನೂ ಓದಿ : Garlic-Pistachios Benefits : ಕೊರೋನಾ ಟೈಂನಲ್ಲಿ ಪುರುಷರು ಈ ಎರಡನ್ನ ತಪ್ಪದೇ ಸೇವಿಸಿ : ಇಲ್ಲಿದೆ ಪ್ರಯೋಜನಗಳು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News