Eye Care Tips: ಕಣ್ಣುಕುಳಿ ಸಮಸ್ಯೆಯಿಂದ ಮುಕ್ತಿಪಡೆಯಲು ಈ ಸಲಹೆಗಳನ್ನು ಅನುಸರಿಸಿ

Eye Wrinkle Solution: ಕಣ್ಣುಗಳು ನಮ್ಮ ಶರೀರದ ಅತ್ಯಾವಶ್ಯಕ ಅಂಗಗಳಾಗಿವೆ. ಆದರೆ ಹಲವು ಕಾರಣಗಳಿಂದ ನಮ್ಮ ಕಣ್ಣುಗಳು ಒಳಭಾಗಕ್ಕೆ ಜಾರಲು ಆರಂಭಿಸುತ್ತವೆ. ಇದರಿಂದ ಕಣ್ಣುಗಳ ಕೆಳಗೆ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಕೆಳಗೆ ಸೂಚಿಸಲಾಗಿರುವ ಕೆಲ ಸಲಹೆಗಳನ್ನು ಪ್ರಯತ್ನಿಸುವ ಮೂಲಕ ನೀವು ಈ ಸಮಸ್ಯೆಯನ್ನು ತೊಡೆದುಹಾಕಬಹುದು.  

Written by - Nitin Tabib | Last Updated : Jun 3, 2022, 03:05 PM IST
  • ಕಣ್ಣುಗಳು ನಮ್ಮ ದೇಹದ ಪಂಚ ಇಂದ್ರೀಯಗಳಲ್ಲಿ ಒಂದಾಗಿವೆ.
  • ನೀವೂ ಕೂಡ ಕಣ್ಣುಕುಳಿ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಉಪಾಯಗಳನ್ನು ಅನುಸರಿಸಿ
  • ಈ ಉಪಾಯಗಳಿಂದ ಕಣ್ಣುಕುಳಿ ಸಮಸ್ಯೆ ದೂರಾಗುತ್ತಾದೆ.
Eye Care Tips: ಕಣ್ಣುಕುಳಿ ಸಮಸ್ಯೆಯಿಂದ ಮುಕ್ತಿಪಡೆಯಲು ಈ ಸಲಹೆಗಳನ್ನು ಅನುಸರಿಸಿ title=
Eye Wrinkle Problem

Eye Wrinkle Solution: ನಮ್ಮ ಕಣ್ಣುಗಳು ನಮ್ಮ ಶರೀರದ ಪಂಚೆಂದ್ರೀಯಗಳಲ್ಲಿ ಒಂದಾಗಿವೆ. ಆದರೆ, ಹಲವು ಬಾರಿ ಕಣ್ಣುಗಳು ಒಳಹೋಗಿರುವಂತೆ ಕಾಣುವುದನ್ನು ನೀವು ಗಮನಿಸಬಹುದು. ಇದರಿಂದ ಮುಖದ ತ್ವಚೆ ಹಾಗೂ ಮುಖ ಚೈತನ್ಯವೇ ಕಳೆದುಕೊಂಡಂತೆ ಕಾಣಿಸಲಾರಂಭಿಸುತ್ತವೆ. ಶಾರೀರಿಕ ದೌರ್ಬಲ್ಯದ ಕಾರಣ ಈ ರೀತಿ ಸಂಭವಿಸುತ್ತದೆ. ಆದರೆ, ಇದಕ್ಕೆ ಇನ್ನೂ ಹಲವು ಕಾರಣಗಳು ಕೂಡ ಇರಬಹದು. ಉದಾಹರಣೆಗೆ ಸರಿಯಾಗಿ ನಿದ್ರೆಬಾರಗೆ ಇರುವುದು, ಊಟ ಸರಿಯಾಗಿ ಮಾಡದೆ ಇರುವುದು, ಪೌಷ್ಟಿಕಾಂಶಗಳ ಕೊರತೆ, ಡಿಹೈಡ್ರೇಟ್ ಅನುಭವ ಇತ್ಯಾದಿಗಳು ಇದರಲ್ಲಿ ಶಾಮೀಲಾಗಿವೆ. ಈ ಸಮಸ್ಯೆಗಳ ಕಾರಣ ಕಣ್ಣುಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ ಮತ್ತು ಕಣ್ಣುಗಳು ಒಳಭಾಗಕ್ಕೆ ಜಾರಲು ಆರಂಭಿಸುತ್ತವೆ. ಕಣ್ಣುಗಳ ಸುತ್ತ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಯಿಂದ ಮುಕ್ತಿಪಡೆಯಲು ನೀವು ಬಯಸುತ್ತಿದ್ದರೆ. ನಿಮಗಾಗಿ ಇಲ್ಲಿವೆ ಕೆಲ ಸಲಹೆಗಳು. 

ಈ ರೀತಿ ಕಣ್ಣುಗಳ ಆರೋಗ್ಯ ಹೆಚ್ಚಿಸಿ
ನೀರು -
ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನಂಶ ಇರುವುದು ತುಂಬಾ ಮುಖ್ಯ. ನೀರು ಹಲವು ರೋಗಗಳಿಂದ ರಕ್ಷಿಸಲು ನಮಗೆ ಸಹಾಯ ಮಾಡುತ್ತದೆ. ನೀರಿನ ಕೊರತೆಯಿಂದಾಗಿ ದೇಹದಲ್ಲಿ ಅನೇಕ ರೋಗಗಳು ಹೆಚ್ಚಾಗುತ್ತವೆ. ಇವುಗಳಲ್ಲಿ ಗುಳಿಬಿದ್ದ ಕಣ್ಣುಗಳ ಸಮಸ್ಯೆ ಕೂಡ ಒಂದು. ದೇಹದಲ್ಲಿ ನೀರಿನ ಕೊರತೆ ಎದುರಾದಗ ಕಣ್ಣುಗಳಲ್ಲಿ ಕುಳಿ ಬೀಳಲು ಆರಂಭಿಸುತ್ತವೆ. ಕಣ್ಣುಗಳಲ್ಲಿ ಊತ ಹಾಗೂ ಒಣಕಣ್ಣುಗಳು ಈ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ತುಂಬಾ ಮುಖ್ಯ.

ಹಸಿರು ತರಕಾರಿಯ ಸೇವನೆ - ಆಹಾರದಲ್ಲಿ ಹಸಿರು ತರಕಾರಿಯ ಸೇವನೆ ತುಂಬಾ ಮುಖ್ಯವಾಗಿವೆ. ಹಸಿರು ತರಕಾರಿಯಲ್ಲಿ ಹಲವು ರೀತಿಯ ಪೌಷ್ಟಿಕಾಂಶಗಳು ಇರುತ್ತವೆ. ಇವು ಶರೀರದ ಪೌಷ್ಟಿಕಾಂಶದ ಕೊರೆತೆಯನ್ನು ನೀಗಿಸುವುದರ ಜೊತೆಗೆ ದೇಹದ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತವೆ. ಹಸಿರು ತರಕಾರಿಗಳಲ್ಲಿ ಕಂಡುಬರುವ ಲ್ಯೂಟೀನ್ ಹಾಗೂ ಜಾಕ್ಸೈನ್ಥೀನ್ ಗಳು ಕಣ್ಣುಗಳ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿವೆ. ಇದರ ಜೊತೆಗೆ ಹಸಿರು ತರಕಾರಿಗಳಲ್ಲಿ ಕಂಡುಬರುವ ವಿಟಮಿನ್ ಗಳು ಮುಖಕ್ಕೆ ಹೊಸಪನ್ನು ನೀಡುವ ಕೆಲಸ ಮಾಡುತ್ತವೆ. 

ಇದನ್ನೂ ಓದಿ-ಮನೆಯಲ್ಲಿ ಲಕ್ಷ್ಮೀ ನೆಲೆಯಾಗಬೇಕಾದರೆ ಇಂದಿನಿಂದಲೇ ಈ ಕೆಲಸ ಆರಂಭಿಸಿ

ಗಜ್ಜರಿ ಸೇವನೆ - ಕಣ್ಣುಗಳ ಆರೋಗ್ಯಕ್ಕೆ ಹಲವು ಪೌಷ್ಟಿಕಾಂಶಗಳನ್ನು ಹೊಂದಿರುವ. ಗಜ್ಜರಿಯಲ್ಲಿ ಬೀಟಾ-ಕ್ಯಾರೋಟೀನ್ ಹಾಗೂ ವಿಟಮಿನ್ ಗಳು ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ. ಇವುಗಳಲ್ಲಿನ ವಿಟಮಿನ್ ಒಳಭಾಗಕ್ಕೆ ಜಾರಿರುವ ಕಣ್ಣುಗಳನ್ನು ಸರಿಪಡಿಸುತ್ತವೆ. ಇವುಗಳ ಸೇವನೆಯಿಂದ ಕಣ್ಣುಗಳ ಕಾಂತಿ ಕೂಡ ಹೆಚ್ಚಾಗುತ್ತದೆ. ಇದರ ಜೊತೆಗೆ ಇವುಗಳಲ್ಲಿ ಸಿಗುವ ಪೌಷ್ಟಿಕಾಂಶಗಳು ದೇಹಕ್ಕೂ ಕೂಡ ಲಾಭಕಾರಿಯಾಗಿವೆ. 

ಇದನ್ನೂ ಓದಿ-Budh Margi 2022: ಈ ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ತೊಂದರೆ ಹೆಚ್ಚಿಸಲಿದ್ದಾನೆ ಮಾರ್ಗಿ ಬುಧ

(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಒಳಗೊಂಡಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಗಳನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹ್ತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News