Empty Stomach : ಖಾಲಿ ಹೊಟ್ಟೆಯಲ್ಲಿ ಅಪ್ಪಿತಪ್ಪಿಯುವು ಸೇವಿಸಬೇಡಿ ಈ ಮಸಾಲೆ ಪದಾರ್ಥಗಳನ್ನು!

Last Updated : Jun 5, 2021, 05:16 PM IST
  • ಜನರು ಮಸಾಲೆ ಪಧಾರ್ಥಗಳ ಬಳಕೆಗೆ ಹೆಚ್ಚಿನ ಒತ್ತು ನೀಡಿದ್ದಾರೆ
  • ಖಾಲಿ ಹೊಟ್ಟೆಯಲ್ಲಿ ಕೆಲವು ಮಸಾಲೆ ಪದಾರ್ಥಗಳನ್ನು ಬಳಸುತ್ತಾರೆ,
  • ಖಾಲಿ ಹೊಟ್ಟೆಯಲ್ಲಿ ರೆಡ್ ಕ್ಯಾಪ್ಸಿಕಂ ಅನ್ನು ಸೇವಿಸಬಾರದು
Empty Stomach : ಖಾಲಿ ಹೊಟ್ಟೆಯಲ್ಲಿ ಅಪ್ಪಿತಪ್ಪಿಯುವು ಸೇವಿಸಬೇಡಿ ಈ ಮಸಾಲೆ ಪದಾರ್ಥಗಳನ್ನು! title=

ಈ ಕೋವಿಡ್ ಸಮಯದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಜನರು ಮಸಾಲೆ ಪಧಾರ್ಥಗಳ ಬಳಕೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಮಸಾಲೆ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯಕ್ಕೆ ತುಂಬಾ ಉಪಯುಕ್ತ. ಯಾವುದೇ ವಸ್ತುವನ್ನು ಅತಿಯಾಗಿ ಬಳಸುವುದರಿಂದ ಆರೋಗ್ಯವೂ ಸಹ ಉತ್ತಮವಾಗಿರುತ್ತದೆ. ಕಳೆದ ಒಂದು ವರ್ಷದಲ್ಲಿ ಜನರು ತೂಕ ಕಡಿಮೆ ಮಾಡಲು ಖಾರವಾದ ಸಾಂಬಾರು ಪದಾರ್ಥಗಳನ್ನು ಸಹ ಬಳಸುತ್ತಿದ್ದಾರೆ. ತೂಕ ಇಳಿಕೆಗೆ ಕೆಲವರು ಖಾಲಿ ಹೊಟ್ಟೆಯಲ್ಲಿ ಕೆಲವು ಮಸಾಲೆ ಪದಾರ್ಥಗಳನ್ನು ಬಳಸುತ್ತಾರೆ, ಇದು ಅನೇಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೀಗೆ ಮಾಡುವುದರಿಂದ ಆರಂಭದಲ್ಲಿ ಪ್ರಯೋಜನ ಪಡೆಯಬಹುದು, ಆದರೆ ಅವುಗಳ ನಿರಂತರ ಸೇವನೆಯು ನಿಮ್ಮ ಜೀರ್ಣಕ್ರಿಯೆಯನ್ನು ಸಂಪೂರ್ಣವಾಗಿ ಹದಗೆಡಿಸುತ್ತದೆ.  ಖಾಲಿ ಹೊಟ್ಟೆಯಲ್ಲಿ ಈ 5 ಮಸಾಲೆ ಪದಾರ್ಥಗಳನ್ನ ತಿನ್ನುವುದು ತುಂಬಾ ಅಪಾಯಕಾರಿ.

ದಾಲ್ ಚಿನ್ನಿ : ಔಷಧೀಯ ಗುಣಗಳಿಂದ ಕೂಡಿರುವ ದಾಲ್ ಚಿನ್ನಿ(Cinnamon) ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಹಲವಾರು ರೋಗಗಳನ್ನು ಗುಣಪಡಿಸುವ ಗುಣಹೊಂದಿದೆ. ಆದರೆ ಹೆಚ್ಚು ಸೇವನೆ ಮಾಡಿದರೆ ನಿಮಗೆ ಹಾನಿಯಾಗಬಹುದು. ದಾಲ್ ಚಿನ್ನಿ ಯಕೃತ್ತಿಗೆ ಹಾನಿಯುಂಟು ಮಾಡಬಹುದು, ಇದನ್ನು ಬಳಸುವುದರಿಂದ ಬಾಯಿಹುಣ್ಣು, ಬಿಳಿ ಕಲೆಗಳು ಮತ್ತು ಬಾಯಿಯ ಒಳಭಾಗದಲ್ಲಿ ತುರಿಕೆ ಉಂಟಾಗಬಹುದು. ಆದ್ದರಿಂದ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಬಳಸಬೇಡಿ.

ಇದನ್ನೂ ಓದಿ : Mango Hair Pack: ಕೂದಲ ಆರೈಕೆಗೆ ಬಳಸಿ ಮಾವಿನ ಹೇರ್ ಪ್ಯಾಕ್

ಕರಿ ಮೆಣಸು:  ಕಾಳುಮೆಣಸನ್ನು(Black Pepper) ಖಾಲಿ ಹೊಟ್ಟೆಯಲ್ಲಿ ಹೆಚ್ಚು ಸೇವಿಸಿದರೆ ಕೆಲವು ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ಕಂಡುಕೊಂಡಿವೆ. ಖಾಲಿ ಹೊಟ್ಟೆಯಲ್ಲಿ ಇದರ ಹೆಚ್ಚುವರಿ ಸೇವನೆಯಿಂದ ಕರುಳಿನ ಜೈವಿಕ ಬದಲಾವಣೆಯಾಗುತ್ತದೆ, ಇದು ದೇಹದ ಮೇಲೆ ಔಷಧಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಕಾಳುಮೆಣಸು ಕೆಲವು ಔಷಧಗಳೊಂದಿಗೆ ಕಾರ್ಯನಿರ್ವಹಿಸುತ್ತದೆ, ಇದು ಅಲರ್ಜಿಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ : Cheapest Corona Vaccine: ಭಾರತದ ಅತ್ಯಂತ ಅಗ್ಗದ ವ್ಯಾಕ್ಸಿನ್ Corbevax ಶೀಘ್ರದಲ್ಲಿಯೇ ಬಿಡುಗಡೆ!

ರೆಡ್ ಕ್ಯಾಪ್ಸಿಕಂ : ಖಾಲಿ ಹೊಟ್ಟೆಯಲ್ಲಿ ರೆಡ್ ಕ್ಯಾಪ್ಸಿಕಂ(Red Capsicum) ಅನ್ನು ಸೇವಿಸಬಾರದು. ಇದು ಹೊಟ್ಟೆಯ ಸಮಸ್ಯೆ, ಹೊಟ್ಟೆಯ ಕಿರಿಕಿರಿ ಉಂಟು ಮಾಡುತ್ತದೆ. ಉತ್ತಮ ರುಚಿಗಾಗಿ, ರೆಡ್ ಕ್ಯಾಪ್ಸಿಕಂ ಜೊತೆ ನಿಂಬೆಯನ್ನು ಹಿಂಡಿ ಸೇವಿಸಿದರೆ ಉತ್ತಮ.

ಇದನ್ನೂ ಓದಿ : Banana Peels Benefits- ಪಿಂಪಲ್ಸ್, ಡಾರ್ಕ್ ಸರ್ಕಲ್ ನಿವಾರಣೆಗೆ ರಾಮಬಾಣ ಬಾಳೆಹಣ್ಣಿನ ಸಿಪ್ಪೆ

ಮೆಂತ್ಯ : ಉಸಿರಾಟದ ತೊಂದರೆ ಇರುವವರು ಖಾಲಿ ಹೊಟ್ಟೆಯಲ್ಲಿ ಮೆಂತ್ಯ(Fenugreek) ತಿನ್ನಬಾರದು. ಹೆಚ್ಚಿನ ಸೇವನೆಯು ಅಸ್ತಮಾಕ್ಕೆ ಕಾರಣವಾಗಬಹುದು. ಇದರ ಜೊತೆಗೆ ಕೆಳಹೊಟ್ಟೆಯಲ್ಲಿಯೂ ನೋವು ಅನುಭವಿಸಬಹುದು.

ಇದನ್ನೂ ಓದಿ : ಏನಿದು New Covid-19? ವಿಯೆಟ್ನಾಂನಲ್ಲಿ ಪತ್ತೆಯಾಗಿರುವ ವೈರಸ್ ಬಗ್ಗೆ ನಿಮಗೆಷ್ಟು ಗೊತ್ತು?

ಅಜವಾನ : ಅಜವಾನ ತೂಕ ಇಳಿಕೆಗೆ ತುಂಬಾ ಸಹಾಯಕವಾಗಿದೆ. ಇದು ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಿಟ್ ಉತ್ಪಾದನೆ ಮಾಡುತ್ತದೆ. ಆದ್ದರಿಂದ ಅತಿಯಾಗಿ ಸೇವನೆ ಮಾಡುವುದು ಒಳ್ಳೆಯದಲ್ಲಾ. ಬೇಸಿಗೆ ಕಾಲದಲ್ಲಿ ಖಾಲಿ ಹೊಟ್ಟೆ( Empty Stomach)ಯಲ್ಲಿ ಸೇವಿಸುವ ಮೂಲಕ ನೀವು ಹೃದಯ ಉರಿ ಸಮಸ್ಯೆಗೆ ಒಳಗಾಗಬಹುದು.

ಇದನ್ನೂ ಓದಿ : Cucumber : ಸೌತೆಕಾಯಿ ತಿಂದ ಬಳಿಕ ನೀರು ಕುಡಿಯಬಾರದು : ಯಾಕೆ ಇಲ್ಲಿ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News