ಬೆಂಗಳೂರು : ಪ್ರತಿ ವರ್ಷ ಡಿಸೆಂಬರ್ ಬಂದರೆ ಸಾಕು ಬೆಂಗಳೂರಿನಲ್ಲಿ ಅವರೆಕಾಯಿ ಘಮ ಜೋರಾಗಿರುತ್ತದೆ. 50ಕ್ಕೂ ಹೆಚ್ಚು ವೆರೈಟಿಗಳಿಂದ ತಯಾರಾಗೋ ಅವರೇ ಬೇಳೆಯ ಖಾದ್ಯಗಳನ್ನ ಸವಿಯಲು ಜನ ಕಾತುರದಿಂದ ಕಾಯುತ್ತಿರುತ್ತಾರೆ. ಬೆಂಗಳೂರಿನ ನ್ಯಾಷನಲ್ ಕಾಲೇಜು ಗ್ರೌಂಡ್ ನಲ್ಲಿ ನಡೆಯುವ ಅವರೇಕಾಯಿ ಮೇಳಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ.
ಬೆಂಗಳೂರಿನ ಪ್ರತಿಷ್ಠಿತ ಅವರೆಕಾಯಿ ಮೇಳಕ್ಕೆ ಚಾಲನೆ ಸಿಕ್ಕಿದೆ. ಪ್ರತಿ ವರ್ಷದಂತೆ ಈ ವರ್ಷವೂ ನ್ಯಾಷನಲ್ ಕಾಲೇಜು ಮೈದಾನದಲ್ಲಿ 25ನೇ ಆವೃತ್ತಿಯ ಅವರೆ ಬೇಳೆ ಮೇಳ ನಡಿಯುತ್ತಿದೆ. ಒಟ್ಟು ಹತ್ತು ದಿನಗಳ ಕಾಲ ಈ ಅವರೆಕಾಯಿ ಮೇಳ ನಡೆಯಲಿದೆ. ಮೇಳದಲ್ಲಿ ಅವರೆಕಾಯಿಯಿಂದ ಮಾಡಿರುವ ವಿವಿಧ ಬಗೆಯ ಖಾದ್ಯಗಳನ್ನು ಸವಿಯಬಹುದು.
ಇದನ್ನೂ ಓದಿ : ಬೆಳಗಾವಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಸಂತಾಪ
ಇಲ್ಲಿ ಅವರೆ ಬೇಳೆ ದೋಸೆ, ಅವರೆ ಪಾಯಸ, ಅವರೆ ಮಂಚೂರಿಯನ್, ವಡೆ, ಕೋಡುಬಳೆ, ಐಸ್ಕ್ರೀಂ, ಅವರೆಕಾಳು ರೊಟ್ಟಿ, ಹಲ್ವಾ ಹೀಗೆ ಬಗೆ ಬಗೆಯ ಖಾದ್ಯಗಳನ್ನು ಸವಿಯಬಹುದು.
ವಾಸವಿ ಕಾಂಡಿಮೆಂಟ್ಸ್ ವತಿಯಿಂದ ಮೇಳವನ್ನು ಆಯೋಜಿಸಲಾಗಿದ್ದು, ಸಿಲಿಕಾನ್ ಸಿಟಿ ಜನರಿಗೆ ಹೊಸ ವರ್ಷದ ಆರಂಭಕ್ಕೂ ಮುನ್ನವೇ ಅವರೆ ಬೇಳೆಯ ವಿವಿಧ ಬಗೆಯ ಆಹಾರ ಸವಿಯುವ ಅವಕಾಶ ಸಿಕ್ಕಿದೆ. ಡಿಸೆಂಬರ್ 27 ರಿಂದ ಈ ಮೇಳ ಆರಂಭವಾಗಿದ್ದು, ಇನ್ನು ಹತ್ತು ದಿನಗಳ ಕಾಲ ನಡೆಯಲಿದೆ. ಈ ವರ್ಷ ಸುಮಾರು 80 ಸ್ಟಾಲ್ಗಳಿವೆ. ಹಿರಿಯ ನಾಗರಿಕರಿಗೆ ವಿಶೇಷ ಕೌಂಟರ್ ಜೊತೆಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ.
ಒಟ್ಟಿನಲ್ಲಿ ಚುಮು ಚುಮು ಚಳಿಗೆ ಅವರೇ ಬೆಳೆ ಆಹಾರಗಳು ಭಾರೀ ರುಚಿ ಕೊಡುತ್ತಿದ್ದು, ವಿಕೇಂಡ್ ಮೋಡ್ ನಲ್ಲಿರೋ ಜನರಿಗೆ ಖುಷಿ ಸಿಗೋದಂತೂ ಸುಳ್ಳಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.