ಬೆಂಗಳೂರು : Best Tea For Diabetes Patients : ಹೆಚ್ಚಿನ ಜನರ ದಿನ ಆರಂಭವಾಗುವುದೇ ಬೆಳಿಗಿನ ಚಹಾದಿಂದ. ಬೆಳಗಿನ ಚಹಾ ಇಲ್ಲದೆ ಹೋದರೆ ದಿನ ಮುಂದೆ ಸಾಗುವುದೇ ಇಲ್ಲ. ಆದರೆ ಮಧುಮೇಹ ರೋಗಿಗಳಿಗೆ ಚಹಾ ಸೇವನೆಯಿಂದ ದೂರವಿರುವಂತೆ ಸಲಹೆ ನೀಡಲಾಗುತ್ತದೆ. ಚಹಾ ಸೇವನೆಯು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ. ಏಕೆಂದರೆ ಚಹಾದಲ್ಲಿ ಸಕ್ಕರೆ ಇರುತ್ತದೆ. ಮಧುಮೇಹಿಗಳು ಸಕ್ಕರೆಯನ್ನು ಕಟ್ಟುನಿಟ್ಟಾಗಿ ಸೇವಿಸಬಾರದು. ಆದರೆ ಈ ಬಗ್ಗೆ ಚಿಂತಿಸಬೇಕಾಗಿಲ್ಲ. ಮಧುಮೇಹ ರೋಗಿಗಳು ಸಹ ಚಹಾವನ್ನು ಕುಡಿಯಬಹುದು. ಆದರೆ ಮಧುಮೇಹಿಗಳು ಯಾವ ಚಹಾವನ್ನು ಸೇವಿಸಬಹುದು ಎನ್ನುವುದು ಮುಖ್ಯ.
ಮಧುಮೇಹಿಗಳು ಈ ಚಹಾವನ್ನು ಕುಡಿಯಬಹುದು :
ಮಧುಮೇಹಿಗಳು ಈ ರೀತಿ ಚಹಾವನ್ನು ತಯಾರಿ ಸೇವಿಸಬಹುದು. ಇದಕ್ಕೆ ಬೇಕಾಗುವ ಸಾಮಗ್ರಿಗಳೆಂದರೆ ಮೆಂತ್ಯ ಒಂದು ಚಮಚ, ಸೊಂಫು ಒಂದು ಸಣ್ಣ ಚಮಚ, ಓಮ ಕಾಳು, ಜೇನುತುಪ್ಪ, ಒಂದು ಲೋಟ ನೀರು
ಇದನ್ನೂ ಓದಿ : Hair Care Tips: ಕೂದಲಿನ ಹೊಳಪು ಹೆಚ್ಚಿಸುವ ಸೌತೆಕಾಯಿ, ಈ ರೀತಿ ಬಳಸಿ
ಚಹಾ ಮಾಡುವುದು ಹೇಗೆ ? :
ಜೇನು ತುಪ್ಪ ಹೊರತು ಪಡಿಸಿ ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಬೆಳಗ್ಗೆ ಎದ್ದ ತಕ್ಷಣ ಇವೆಲ್ಲವನ್ನೂ ಕುದಿಸಿ ಹರ್ಬಲ್ ಟೀ ತಯಾರಿಸಿಕೊಳ್ಳಿ. ನಂತರ ಅದನ್ನು ಫಿಲ್ಟರ್ ಮಾಡಿ ರುಚಿಗೆ ತಕ್ಕಷ್ಟು ನಿಂಬೆರಸ ಅಥವಾ ಜೇನುತುಪ್ಪ ಸೇರಿಸಿ ಬಿಸಿಬಿಸಿಯಾಗಿ ಸೇವಿಸಿ.
ಮಧುಮೇಹ ನಿಯಂತ್ರಣದಲ್ಲಿ ಈ ಚಹಾ ಹೇಗೆ ಪ್ರಯೋಜನಕಾರಿ? :
ಮೆಂತ್ಯ ಬೀಜಗಳ ಸೇವನೆಯು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಲು ಮತ್ತು ಇನ್ಸುಲಿನ್ ಉಳಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಸೊಂಫು ಮತ್ತು ಓಮ ಕಾಳು ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ಹಾರ್ಮೋನ್ ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಜೇನುತುಪ್ಪವು ನೈಸರ್ಗಿಕ ಸಕ್ಕರೆಯಾಗಿದ್ದು ಅದು ಸಕ್ಕರೆಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ. ಆದರೆ ಇದನ್ನು ಕೂಡಾ ಹೆಚ್ಚು ಸೇವಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರ ಜೊತೆಗೆ, ಈ ಹರ್ಬಲ್ ಟೀ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ಈ ಚಹಾವನ್ನು ಯಾರು ಬೇಕಾದರೂ ಸೇವಿಸಬಹುದು.
ಇದನ್ನೂ ಓದಿ: Raw Turmeric Benefits: ಈ ರೋಗಗಳಿಗೆ ಹಸಿ ಅರಿಶಿನ ರಾಮಬಾಣ, ಹೀಗೆ ಬಳಸಿರಿ
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ