ಒಂದರ ಹಿಂದೆ ಒಂದು ಪ್ರಶಸ್ತಿ.. ಎಂಜಾಯ್‌ ಮಾಡೋಕೆ ಸ್ವಲ್ಪ ಗ್ಯಾಪ್‌ ಕೊಡಮ್ಮ..!

ಆರ್‌ಆರ್‌ಆರ್ ಚಿತ್ರತಂಡಕ್ಕೆ ಈಗ ಸುಗ್ಗಿ ಕಾಲ. ಸಾಲು ಸಾಲು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬರ್ತಿವೆ. ಇತ್ತೀಚಿಗೆ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿಗೆ ಪಾತ್ರವಾಗಿದ್ದ ರಾಜಮೌಳಿ ಚಿತ್ರತಂಡ ಇದೀಗ ಆಸ್ಕರ್‌ ಅಂಗಳದಲ್ಲಿದೆ. ಇನ್ನು ಇದೇ ವೇಳೆ ಈ ʼನಾಟು ನಾಟುʼ ಹಾಡಿನ ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಅವರು ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಕುರಿತು ಸಂತೋಷ ವ್ಯಕ್ತಪಡಿಸಿರುವ ನಿರ್ದೇಶಕ ರಾಜಮೌಳಿ, ಸುದೀರ್ಘ ಬರಹದ ಮೂಲಕ ಕೀರವಾಣಿಯವರನ್ನು ಹಾಡಿ ಹೊಗಳಿದ್ದಾರೆ.

Written by - Krishna N K | Last Updated : Jan 26, 2023, 03:14 PM IST
  • ಆರ್‌ಆರ್‌ಆರ್ ಚಿತ್ರತಂಡಕ್ಕೆ ಈಗ ಸುಗ್ಗಿ ಕಾಲ. ಸಾಲು ಸಾಲು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬರ್ತಿವೆ.
  • ಇತ್ತೀಚಿಗೆ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿಗೆ ಪಾತ್ರವಾಗಿದ್ದ ರಾಜಮೌಳಿ ಚಿತ್ರತಂಡ ಇದೀಗ ಆಸ್ಕರ್‌ ಅಂಗಳದಲ್ಲಿದೆ.
  • ಈಗ ʼನಾಟು ನಾಟುʼ ಹಾಡಿನ ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಅವರು ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.
ಒಂದರ ಹಿಂದೆ ಒಂದು ಪ್ರಶಸ್ತಿ.. ಎಂಜಾಯ್‌ ಮಾಡೋಕೆ ಸ್ವಲ್ಪ ಗ್ಯಾಪ್‌ ಕೊಡಮ್ಮ..! title=

MM Keravaani : ಆರ್‌ಆರ್‌ಆರ್ ಚಿತ್ರತಂಡಕ್ಕೆ ಈಗ ಸುಗ್ಗಿ ಕಾಲ. ಸಾಲು ಸಾಲು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬರ್ತಿವೆ. ಇತ್ತೀಚಿಗೆ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿಗೆ ಪಾತ್ರವಾಗಿದ್ದ ರಾಜಮೌಳಿ ಚಿತ್ರತಂಡ ಇದೀಗ ಆಸ್ಕರ್‌ ಅಂಗಳದಲ್ಲಿದೆ. ಇನ್ನು ಇದೇ ವೇಳೆ ಈ ʼನಾಟು ನಾಟುʼ ಹಾಡಿನ ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಅವರು ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಕುರಿತು ಸಂತೋಷ ವ್ಯಕ್ತಪಡಿಸಿರುವ ನಿರ್ದೇಶಕ ರಾಜಮೌಳಿ, ಸುದೀರ್ಘ ಬರಹದ ಮೂಲಕ ಕೀರವಾಣಿಯವರನ್ನು ಹಾಡಿ ಹೊಗಳಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಕುರಿತು ಪೋಸ್ಟ್‌ ಹಂಚಿಕೊಂಡಿರುವ ರಾಜಮೌಳಿ, ನಿಮ್ಮ ಅನೇಕ ಅಭಿಮಾನಿಗಳಲ್ಲಿ ನಾನೂ ಒಬ್ಬ. ನಿಮ್ಮ ಸಾಧನೆಯನ್ನು ಬಹಳ ತಡವಾಗಿ ಗುರುತಿಸಲಾಗಿದೆ. ನಿವೇ ಹೇಳುವಂತೆ ಈ ಪ್ರಪಂಚ ಒಬ್ಬರ ಪ್ರಯತ್ನಗಳಿಗೆ ಪ್ರತಿಫಲ ನೀಡುವ ವಿಭಿನ್ನ ಮಾರ್ಗವನ್ನು ಹೊಂದಿದೆ. ನಾನು ಮತ್ತೇ ಆ ಪ್ರಪಂಚದೊಂದಿಗೆ ಮಾತನಾಡಲು ಸಾಧ್ಯವಾದರೆ, ಒಂದನ್ನೇ ಪೂರ್ಣವಾಗಿ ಎಂಜಾಯ್‌ ಮಾಡೋವರೆಗೂ ಸ್ವಲ್ಪ ಗ್ಯಾಪ್‌ ಕೊಡಮ್ಮಾ.. ಅಂತ ಕೇಳ್ತೀನಿ.. ಅಂತ ಕಿರವಾಣಿಯವರಿಗೆ ಲಭಿಸುತ್ತಿರುವ ಸಾಲು ಸಾಲು ಗೌರವದ ಕುರಿತು ಸಂತೋಷ ವ್ಯಕ್ತಪಡಿಸಿದ್ದಾರೆ.

 
 
 
 

 
 
 
 
 
 
 
 
 
 
 

A post shared by SS Rajamouli (@ssrajamouli)

ನಿರ್ದೇಶಕ ರಾಜಮೌಳಿ ಮತ್ತು ಸಂಗೀತ ನಿರ್ದೇಶಕ, ಗಾಯಕ, ಎಂ.ಎಂ. ಕೀರವಾಣಿ ಇಬ್ಬರೂ ವಿಶ್ವ ಮಟ್ಟದಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಆರ್‌ಆರ್‌ಆರ್‌ ನ ನಾಟು ನಾಟು ಹಾಡು ಒಂದರ ನಂತರ ಒಂದರಂತೆ ಪ್ರತಿಷ್ಠಿತ ಪ್ರಶಸ್ತಿಗಳ ಮನ್ನಣೆಗೆ ಪಾತ್ರವಾಗುತ್ತಿದೆ. ಇದೀಗ ಆಸ್ಕರ್‌ಗೂ ಸಹ ಅಧಿಕೃತವಾಗಿ ನಾಮ ನಿರ್ದೇಶನಗೊಂಡಿದೆ. ಇದಕ್ಕೂ ಮೊದಲು, ನಾಟು ನಾಟು ಅತ್ಯುತ್ತಮ ಮೂಲ ಗೀತೆಯ ವಿಭಾಗದಲ್ಲಿ ಗೋಲ್ಡನ್ ಗ್ಲೋಬ್‌ಗಳನ್ನು ಪಡೆದುಕೊಂಡಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News