TS Assembly election voting live : ತೆಲುಗು ಸಿನಿಮಾ ತಾರೆಯರೆಲ್ಲಾ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುವ ಮೂಲಕ ಜನರಿಗೆ ಮತದಾನದ ಮಹತ್ವನ್ನು ಸಾರುತ್ತಿದ್ದಾರೆ. ಅಲ್ಲದೆ ತಪ್ಪದೇ ಮತದಾನ ಮಾಡುವಂತೆ ಸೋಷಿಯಲ್ ಮೀಡಿಯಾ ಮೂಲಕ ವಿನಂತಿಸಿಕೊಳ್ಳುತ್ತಿದ್ದಾರೆ. ಈ ಕುರಿತ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿವೆ.
ಎರಡು ತಿಂಗಳ ಹಿಂದೆಯಷ್ಟೇ ಅಮೆರಿಕಾದಲ್ಲಿ ನಡೆದ ಸಮಾರಂಭದಲ್ಲಿ ಕೀರವಾಣಿ ಅವರಿಗೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಅವರು ಅಲ್ಲಿಂದ ಭಾರತಕ್ಕೆ ಬಂದ ಮೇಲೆ, ಅವರನ್ನು ಹೈದರಾಬಾದ್ ನಲ್ಲಿ ಚಿತ್ರದ ನಿರ್ದೇಶಕ ಎ. ಗೋಕುಲ್ ಕೃಷ್ಣ ಭೇಟಿಯಾಗಿದ್ದಾರೆ.
Oscars 2023 Winner MM Keeravani: ಆಸ್ಕರ್ ವಿಶ್ವದ ಅತಿದೊಡ್ಡ ಚಲನಚಿತ್ರ ಪ್ರಶಸ್ತಿ. ಈ ವರ್ಷ ಈ ಪ್ರಶಸ್ತಿಗಳನ್ನು ಲಾಸ್ ಏಂಜಲೀಸ್ನಲ್ಲಿ ಆಯೋಜಿಸಲಾಗಿದೆ. ಆರ್ಆರ್ಆರ್ನ ನಾಟು ನಾಟು ಹಾಡಿನ ಮೇಲೆ ಎಲ್ಲರ ಭರವಸೆಯೂ ಇತ್ತು. ಈ ಹಾಡು ಇತಿಹಾಸವನ್ನು ಸೃಷ್ಟಿಸಿದೆ ಮತ್ತು ಈ ವರ್ಷದ ಅತ್ಯುತ್ತಮ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದೆ.
ಆರ್ಆರ್ಆರ್ ಚಿತ್ರತಂಡಕ್ಕೆ ಈಗ ಸುಗ್ಗಿ ಕಾಲ. ಸಾಲು ಸಾಲು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬರ್ತಿವೆ. ಇತ್ತೀಚಿಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಗೆ ಪಾತ್ರವಾಗಿದ್ದ ರಾಜಮೌಳಿ ಚಿತ್ರತಂಡ ಇದೀಗ ಆಸ್ಕರ್ ಅಂಗಳದಲ್ಲಿದೆ. ಇನ್ನು ಇದೇ ವೇಳೆ ಈ ʼನಾಟು ನಾಟುʼ ಹಾಡಿನ ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಅವರು ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಕುರಿತು ಸಂತೋಷ ವ್ಯಕ್ತಪಡಿಸಿರುವ ನಿರ್ದೇಶಕ ರಾಜಮೌಳಿ, ಸುದೀರ್ಘ ಬರಹದ ಮೂಲಕ ಕೀರವಾಣಿಯವರನ್ನು ಹಾಡಿ ಹೊಗಳಿದ್ದಾರೆ.
ನಾಟು ನಾಟು ಚಿತ್ರದ ಪ್ರಮುಖ ತಾರೆಗಳಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಮೇಲೆ ಚಿತ್ರಿಸಲಾದ ನೃತ್ಯ ಗೀತೆಯಾಗಿದೆ. ಇದನ್ನು ಎಂಎಂ ಕೀರವಾಣಿ ಸಂಯೋಜಿಸಿದ್ದಾರೆ ಮತ್ತು ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಹಾಡಿದ್ದಾರೆ.
RRR for Oscar : ಎಸ್ಎಸ್ ರಾಜಮೌಳಿ ಅವರ ಆರ್ಆರ್ಆರ್ ಆಸ್ಕರ್ ರೇಸ್ನಲ್ಲಿದೆ. ಇದೀಗ ಅಕಾಡೆಮಿಯಿಂದ ಅಪ್ಡೇಟ್ ಹೊರಬಿದ್ದಿದ್ದು, ತೆಲುಗು ಬ್ಲಾಕ್ಬಸ್ಟರ್ ಆರ್ಆರ್ಆರ್ ಸಿನಿಮಾದ ʼನಾಟು ನಾಡುʼ ಹಾಡು 95 ನೇ ಅಕಾಡೆಮಿ ಪ್ರಶಸ್ತಿಯ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನ ಗೊಂಡಿದೆ ಎಂದು ಘೋಷಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 12 ರಂದು ಲಾಸ್ ಏಂಜಲೀಸ್ನಲ್ಲಿ ನಡೆಯಲಿದೆ.
ಎಮ್ಎಮ್ ಕೀರವಾಣಿ ಸಂಯೋಜನೆಯ ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡು ಇತಿಹಾಸ ಸೃಷ್ಟಿಸಿದೆ. ಈ ಹಾಡಿಗೆ ಜನವರಿ 10 ರಂದು ಅತ್ಯುತ್ತಮ ಮೂಲ ಗೀತೆಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭಿಸಿದೆ. ಪಿಎಂ ನರೇಂದ್ರ ಮೋದಿ ಸೇರಿದಂತೆ ಶಾರುಖ್ ಖಾನ್, ಚಿರಂಜೀವಿ, ಆಲಿಯಾ ಭಟ್ ಮತ್ತು ಎಆರ್ ರೆಹಮಾನ್ ರಾಜಮೌಳಿ ತಂಡವನ್ನು ಅಭಿನಂದಿಸಿದ್ದರು. ಇದೀಗ ಟೈಗರ್ ಶ್ರಾಫ್ ಅವರು ಈ ಅದ್ಭುತ ಸಾಧನೆಗೆ ಪರಿಪೂರ್ಣ ನೃತ್ಯ ಗೌರವ ಸೂಚಿಸಿದ್ದಾರೆ.
Golden Globe Awards: RRR ಚಿತ್ರದ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿಯವರು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಸಮಾರಂಭದಲ್ಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ, ಜೂನಿಯರ್ NTR ಮತ್ತು ರಾಮ್ ಚರಣ್ ಹಾಗೂ ಅವರ ಪತ್ನಿ ಉಪಾಸನಾ ಕಾಮಿನೇನಿ ಭಾಗಿಯಾಗಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.