Salaar Movie: ಸಲಾರ್ ಸಿನಿಮಾದ ಮೇಲೆ ಹೆಚ್ಚಿದ ನಿರೀಕ್ಷೆ, 2000 ಕೋಟಿ ದಾಟುತ್ತಾ?

Salaar Movie: ಸಲಾರ್ ಚಿತ್ರದ ಟೀಸರ್ ಬಿಡುಗಡೆಯಾದ ನಂತರ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ. ಎಲ್ಲರೂ ನಿರೀಕ್ಷೆ ಇಟ್ಟುಕೊಂಡ ರೀತಿಯಲ್ಲೇ 100 ಮಿಲಿಯನ್ ವ್ಯೂಸ್ ದಾಟಿದೆ.    

Written by - Chetana Devarmani | Last Updated : Jul 9, 2023, 07:01 AM IST
  • ಸಲಾರ್ ಸಿನಿಮಾದ ಮೇಲೆ ಹೆಚ್ಚಿದ ನಿರೀಕ್ಷೆ
  • ಟೀಸರ್ ಬಿಡುಗಡೆಯಾದ ಹೆಚ್ಚಾಯ್ತು ಕ್ರೇಜ್‌
  • 100 ಮಿಲಿಯನ್ ವ್ಯೂಸ್ ದಾಟಿದ ಟೀಸರ್
Salaar Movie: ಸಲಾರ್ ಸಿನಿಮಾದ ಮೇಲೆ ಹೆಚ್ಚಿದ ನಿರೀಕ್ಷೆ, 2000 ಕೋಟಿ ದಾಟುತ್ತಾ? title=
Salaar

Salaar Movie: ಈಗ ಎಲ್ಲರ ಕಣ್ಣು ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಮೇಲೆ ನೆಟ್ಟಿದೆ. ಎಲ್ಲರ ನಿರೀಕ್ಷೆಯಂತೆ ಚಿತ್ರ ಒಂದೇ ಭಾಗದಲ್ಲಿ ಇಲ್ಲ. ಸಲಾರ್ ಚಿತ್ರ ಕೆಜಿಎಫ್ ನಂತೆ ಎರಡು ಭಾಗಗಳಲ್ಲಿ ಬರಲಿದೆ ಎಂದು ಪ್ರಶಾಂತ್ ನೀಲ್ ಟೀಸರ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಹಾಗಾಗಿಯೇ ಈಗ ಸಲಾರ್ ಮೇಲಿನ ನಿರೀಕ್ಷೆಗಳು ಹೆಚ್ಚಿವೆ.

ಕೆಜಿಎಫ್ ಮತ್ತು ಕೆಜಿಎಫ್ 2 ಸೃಷ್ಟಿಕರ್ತ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಪ್ರಭಾಸ್ ನಾಯಕನಾಗಿ ತಯಾರಾಗುತ್ತಿರುವ ಸಲಾರ್ ಸಿನಿಮಾದ ಮೇಲೆ ಭಾರೀ ನಿರೀಕ್ಷೆಗಳಿವೆ. ರಾಧೇಶ್ಯಾಮ್ ಮತ್ತು ಆದಿಪುರುಷ್ ಸಿನಿಮಾಗಳು ಡಿಸಾಸ್ಟರ್ ಆದ ನಂತರ ಪ್ರಭಾಸ್ ಕೆರಿಯರ್ ಪ್ರಶ್ನೆಯಾಗುತ್ತಿದೆಯೇ ಎಂಬ ಅನುಮಾನ ಮೂಡಿತ್ತು. ಆ ಹೊತ್ತಿನಲ್ಲಿ ಎಲ್ಲರ ನಿರೀಕ್ಷೆ ಅದರಲ್ಲೂ ಪ್ರಭಾಸ್ ಅಭಿಮಾನಿಗಳ ನಿರೀಕ್ಷೆ ಸಲಾರ್ ಚಿತ್ರದ ಮೇಲೆ ಬಿದ್ದಿದೆ. ಸಲಾರ್ ಚಿತ್ರದ ಟೀಸರ್ ಮೂಲಕ ಚಿತ್ರ ಎರಡು ಭಾಗವಾಗಿರಲಿದೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಸ್ಪಷ್ಟಪಡಿಸಿದ್ದಾರೆ. ಸಲಾರ್ ಸಿನಿಮಾದ ಮೇಲಿನ ಕ್ರೇಜ್ ಮತ್ತು ಕುತೂಹಲ ಎಷ್ಟಿದೆ ಎಂದರೆ ಟೀಸರ್ ನಲ್ಲಿ ಪ್ರಭಾಸ್ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಟೀಸರ್ ವೀಕ್ಷಣೆ 100 ಮಿಲಿಯನ್ ದಾಟಿದೆ.

ಇದನ್ನೂ ಓದಿ: Kiccha Sudeep: ನಿರ್ಮಾಪಕ ಕುಮಾರ್‌ ವಿರುದ್ಧ ಕಿಚ್ಚ ಸುದೀಪ್ ಕಾನೂನು ಸಮರ

ಸಲಾರ್ ಸೆಪ್ಟೆಂಬರ್ 28 ರಂದು ಬಿಡುಗಡೆಯಾಗಲಿದೆ. ಇದು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಕೆಜಿಎಫ್ 1, ಕೆಜಿಎಫ್ 2 ಮತ್ತು ಕಾಂತಾರ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ಸಲಾರ್ ಟೀಸರ್ ನಂತರ ಟ್ರೇಲರ್ ಆಗಸ್ಟ್‌ನಲ್ಲಿ ಬಿಡುಗಡೆಯಾಗಬಹುದು.

ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಎದುರು ಆದ್ಯಾ ಪಾತ್ರದಲ್ಲಿ ಶ್ರುತಿ ಹಾಸನ್ ನಟಿಸಿದ್ದಾರೆ. ಈಶ್ವರಿ ರಾವ್ ಮತ್ತು ಜಗಪತಿ ಬಾಬು ಕಾಣಿಸಿಕೊಳ್ಳಲಿದ್ದಾರೆ. ರವಿ ಬಸ್ರೂರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಲಾರ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 2000 ಕೋಟಿ ಕಲೆಕ್ಷನ್ ಮಾಡುವ ವಿಶ್ವಾಸವಿದೆ ಎಂದು ಹಾಸ್ಯ ನಟ ಸಪ್ತಗಿರಿ ಸ್ಪಷ್ಟಪಡಿಸಿದ್ದಾರೆ. ಚಿತ್ರದಲ್ಲಿ ಅವಕಾಶ ನೀಡಿದ ನಾಯಕ ಪ್ರಭಾಸ್, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲಂಸ್ ಅವರಿಗೆ ಸಪ್ತಗಿರಿ ಧನ್ಯವಾದ ತಿಳಿಸಿದ್ದಾರೆ. ಈ ಹಿಂದೆ ಬಾಹುಬಲಿ 2 ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಇದೀಗ ಸಲಾರ್ ಮೂಲಕ ಪ್ರಭಾಸ್‌ ಮತ್ತೆ ಟ್ರ್ಯಾಕ್‌ಗೆ ಮರಳುವ ನಿರೀಕ್ಷೆಯಿದೆ.

ಇದನ್ನೂ ಓದಿ: ಶ್ರೀರಾಮನ ನಂತರ 'ಶ್ರೀಮಹಾ ವಿಷ್ಣು'ವಿನ ಅವತಾರದಲ್ಲಿ ರೆಬಲ್‌ ಸ್ಟಾರ್‌ ಪ್ರಭಾಸ್ ನಟನೆ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News