Benefits Of Bananas: ದಿನಕ್ಕೆ ಎರಡು ಬಾಳೆಹಣ್ಣು ತಿಂದ್ರೆ ಏನಾಗುತ್ತೆ ಗೊತ್ತಾ?

Health Benefits Of Bananas: ದೇಹದಲ್ಲಿ ಶಕ್ತಿಯ ಮಟ್ಟವನ್ನು ವೃದ್ಧಿಸಲು ನೈಸರ್ಗಿಕ ವಿಧಾನ ಅನುಸರಿಸಬೇಕು. ಇದಕ್ಕೆ ಬಾಳೆಹಣ್ಣು ನೆರವಾಗಲಿದ್ದು, ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಬಾಳೆಹಣ್ಣಿನಲ್ಲಿ ಅಧಿಕ ಮಟ್ಟದ ಕಾರ್ಬೋಹೈಡ್ರೇಟ್ಸ್‌ಗಳಾದ ಗ್ಲುಕೋಸ್, ಫ್ರಾಕ್ಟೋಸ್ ಮತ್ತು ಸುಕ್ರೋಸ್ ಇದೆ. ದೈಹಿಕ ಚಟುವಟಿಕೆ ವೇಳೆ ಆಗುವ ಹಾನಿ ತಪ್ಪಿಸಲು ಪೊಟಾಶಿಯಂ ಸಹಕಾರಿ. ವಿಟಮಿನ್ C & B6 ಬಾಳೆಹಣ್ಣಿನಲ್ಲಿದ್ದು, ಇದು ಚಯಾಪಚಯ ಪ್ರಕ್ರಿಯೆಗೆ ಸಹಕಾರಿ & ಶಕ್ತಿ ವೃದ್ಧಿಸುತ್ತದೆ.  

Incredible Health Benefits Of Bananas: ಬಾಳೆಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣು. ಪ್ರತಿಯೊಬ್ಬರೂ ಬಾಳೆಹಣ್ಣು ಇಷ್ಟಪಟ್ಟು ತಿನ್ನುತ್ತಾರೆ. ಇದರ ಸೇವನೆಯಿಂದ ದೇಹಕ್ಕೆ ಹಲವಾರು ಬಗೆಯ ಆರೋಗ್ಯ ಲಾಭಗಳಿವೆ. ಬಾಳೆಹಣ್ಣಿನಲ್ಲಿ ವಿಟಮಿನ್ C ಮತ್ತು B6 ಸಮೃದ್ಧವಾಗಿವೆ. ವಿಟಮಿನ್ C ಪ್ರತಿರೋಧಕ ಶಕ್ತಿ ವೃದ್ಧಿಸಿದರೆ, ವಿಟಮಿನ್ B6 ಮೆದುಳಿನ ಕಾರ್ಯ ವೃದ್ಧಿಸುತ್ತದೆ. ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ನಾರಿನಾಂಶ ಹಾಗೂ ಪೊಟಾಶಿಯಂ ಇದೆ. ನಾರಿನಾಂಶವು ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತದೆ ಮತ್ತು ಮಲಬದ್ಧತೆ ನಿವಾರಿಸುತ್ತದೆ. ಪೊಟಾಶಿಯಂ ಅಂಶವು ರಕ್ತದೊತ್ತಡ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದಯ ರಕ್ತನಾಳದ ಅಪಾಯ ತಗ್ಗಿಸಲು ಸಹಕಾರಿಯಾಗಿದೆ. ಪ್ರತಿದಿನವೂ ಎರಡು ಬಾಳೆಹಣ್ಣು ಸೇವಿಸದರೆ ದೊರೆಯುತ ಆರೋಗ್ಯ ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
 

1 /5

ದಿನಕ್ಕೆ ಎರಡು ಬಾಳೆಹಣ್ಣು ಸೇವಿಸಿದರೆ ಕರುಳಿನ ಕಾರ್ಯ & ಜೀರ್ಣಕ್ರಿಯೆ ಆರೋಗ್ಯ ಸುಧಾರಣೆಯಾಗುತ್ತದೆ. ಬಾಳೆಹಣ್ಣಿನಲ್ಲಿ ಕರಗುವ & ಕರಗದ ನಾರಿನಾಂಶವಿದ್ದು, ಇದು ಜೀರ್ಣಕ್ರಿಯೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಕರಗುವ ನಾರಿನಾಂಶವು ನೀರನ್ನು ಹೀರಿಕೊಂಡು ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಸಾಗುತ್ತದೆ, ಲೋಳೆಯ ಅಂಶವನ್ನು ಉತ್ಪತ್ತಿ ಮಾಡಿ ಮಲವನ್ನು ಸರಾಗವಾಗಿ ಹೊರ ಹೋಗಲು ಸಹಕರಿಸುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ. ಕರಗದಿರುವ ನಾರಿನಾಂಶವು ಕರುಳಿನಲ್ಲಿ ಮಲದ ವೇಗವನ್ನು ಹೆಚ್ಚು ಮಾಡುತ್ತದೆ. ಇದರಿಂದ ಹೊಟ್ಟೆಯುಬ್ಬರ ಕಡಿಮೆಯಾಗುವುದರ ಜೊತೆಗೆ ದೇಹದಿಂದ ಕಲ್ಮಷ ಹೊರ ಹೋಗುತ್ತದೆ. 

2 /5

ಇಂದು ಅನೇಕರಿಗೆ ಹೃದಯದ ಸಮಸ್ಯೆ ಕಾಡುತ್ತಿದ್ದು, ಇದರಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಇದರ ಅಪಾಯ ಕಡಿಮೆ ಮಾಡಬಹುದು. ಪೊಟಾಶಿಯಂ ಸಮೃದ್ಧವಾಗಿರುವ ಬಾಳೆಹಣ್ಣನ್ನು ಸೇವಿಸಿದರೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಎಲೆಕ್ಟ್ರೋಲೈಟ್ಸ್ ಆಗಿರುವ ಬಾಳೆಹಣ್ಣು ರಕ್ತದೊತ್ತಡ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೊಟಾಶಿಯಂ ಸರಿಯಾದ ಪ್ರಮಾಣದಲ್ಲಿದ್ದರೆ ರಕ್ತನಾಳಗಳಿಗೆ ಆಗುವ ಹಾನಿ ಕಡಿಮೆಯಾಗುತ್ತದೆ. ಬಾಳೆಹಣ್ಣಿನಲ್ಲಿರುವ ನಾರಿನಾಂಶ ಮತ್ತು ಆ್ಯಂಟಿ-ಆಖ್ಸಿಡೆಂಟ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ನಾರಿನಾಂಶವು ಸಹಕಾರಿ. ದಿನಕ್ಕೆ ಎರಡು ಬಾಳೆಹಣ್ಣು ಸೇವಿಸಿದರೆ ಹೃದಯದ ಆರೋಗ್ಯ ಕಾಪಾಡಬಹುದು ಮತ್ತು ರಕ್ತದೊತ್ತಡವನ್ನು ನಿಭಾಯಿಸಬಹುದು.

3 /5

ಸೋಂಕು ಮತ್ತು ಅನಾರೋಗ್ಯದ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿ ಅಗತ್ಯ. ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳು ದೇಹದಲ್ಲಿನ ಪ್ರತಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಬಾಳೆಹಣ್ಣಿನಲ್ಲಿರುವ ವಿಟಮಿನ್ C ಪ್ರತಿರೋಧಕ ಶಕ್ತಿ ವೃದ್ಧಿಸಲು ಸಹಕಾರಿ. ಈ ವಿಟಮಿನ್ ಆ್ಯಂಟಿ-ಆಕ್ಸಿಡೆಂಟ್ ರೀತಿ ಕೆಲಸ ಮಾಡಿ, ಹಾನಿಕಾರಕ ಫ್ರೀ ರಾಡಿಕಲ್‌ನಿಂದ ರಕ್ಷಣೆ ನೀಡುತ್ತದೆ. ಪ್ರತಿರೋಧಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬಿಳಿ ರಕ್ತಕಣಗಳ ಕಾರ್ಯವನ್ನು ಸರಿಪಡಿಸುವುದು. ಬಾಳೆಹಣ್ಣಿನಲ್ಲಿರುವ ವಿಟಮಿನ್ B೬ ಮತ್ತು ಸತುವಿನ ಅಂಶವು ಪ್ರತಿರೋಧಕ ವ್ಯವಸ್ಥೆಗೆ ಸಹಕಾರಿ.  

4 /5

ನಿಯಮಿತವಾಗಿ ಬಾಳೆಹಣ್ಣು ಸೇವಿಸಿದರೆ ಮೆದುಳಿನ ಆರೋಗ್ಯವನ್ನು ಕಾಪಾಡಬಹುದು. ಬಾಳೆಹಣ್ಣಿನಲ್ಲಿ ವಿಟಮಿನ್ B೬ ಸಮೃದ್ಧವಾಗಿದೆ. ಇದು ಸಂತೋಷದ ಹಾರ್ಮೋನ್ ಸೆರೊಟೊನಿನ್ ಮತ್ತು ಡೊಪಮೈನ್ ಬಿಡುಗಡೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಮನಸ್ಥಿತಿ ಸುಧಾರಣೆ, ಸುಖ ನಿದ್ರೆ ಮತ್ತು ಅರಿವಿನ ಕಾರ್ಯವು ಸುಧಾರಣೆಯಾಗುತ್ತದೆ. ಬಾಳೆಹಣ್ಣಿನಲ್ಲಿರುವ ಡೊಪಮೈನ್ ಮತ್ತು ಕ್ಯಾಟಚಿನ್ ಆ್ಯಂಟಿ-ಆಕ್ಸಿಡೆಂಟ್‌ಗಳು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತವೆ. ಇದು ವಯಸ್ಸಾದವರಲ್ಲಿ ಕಂಡುಬರುವ ಅರಿವಿನ ಸಮಸ್ಯೆಗಳನ್ನು ದೂರ ಮಾಡುತ್ತದೆ. ಬಾಳೆಹಣ್ಣಿನಲ್ಲಿರುವ ಮೆಗ್ನಿಶಿಯಂ ಅಂಶವು ರಕ್ತಸಂಚಾರವನ್ನು ಸುಗಮಗೊಳಿಸಿ ರಕ್ತನಾಳಗಳನ್ನು ಆರಾಮವಾಗಿಸುವುದು. ಇದರಿಂದ ಮೆದುಳಿಗೆ ಸರಿಯಾಗಿ ಆಮ್ಲಜನಕವು ಸರಬರಾಜಾಗಿ ಮೆದುಳಿನ ಕಾರ್ಯವು ಸುಧಾರಿಸುತ್ತದೆ.   

5 /5

ಬಾಳೆಹಣ್ಣು ಸೇವನೆ ಮಾಡಿದರೆ ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು. ಕರಗುವ & ಕರಗದ ನಾರಿನಾಂಶಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣು ಜೀರ್ಣಕ್ರಿಯೆಗೆ ಸಹಕರಿಸಿ, ಹೊಟ್ಟೆ ತುಂಬಲು ನೆರವಾಗುತ್ತದೆ. ಕರಗುವ ನಾರಿನಾಂಶವು ಲೋಳೆಯಂತಹ ಅಂಶವನ್ನು ನಿರ್ಮಾಣ ಮಾಡಿ ಹೊಟ್ಟೆ ಖಾಲಿಯಾಗುವುದನ್ನು ನಿಧಾನವಾಗಿಸುವುದು. ಇದರಿಂದ ದೀರ್ಘಕಾಲ ಹೊಟ್ಟೆ ತುಂಬಿದಂತೆ ಇರುವುದು ಮತ್ತು ಅನಾರೋಗ್ಯಕರ ಆಹಾರ ಸೇವನೆ ತಪ್ಪಿಸುತ್ತದೆ. ಹಸಿ ಬಾಳೆಹಣ್ಣು ಸೇವಿಸಿದರೆ ಹಸಿವು ಉಂಟು ಮಾಡುವ ಹಾರ್ಮೋನ್ ನಿಯಂತ್ರಿಸುತ್ತದೆ. ಇದರಿಂದ ಕ್ಯಾಲರಿ ಸೇವನೆಯು ಕಡಿಮೆಯಾಗುತ್ತದೆ.