Viral Video: ಬೇರೆ ಮಹಿಳೆ ಜೊತೆ ಸರಸ, ರೆಡ್‌ಹ್ಯಾಂಡ್ ಆಗಿ​ ಪತಿಯನ್ನು ಹಿಡಿದ ಮಾಜಿ 'ಮಿಸ್​ ವೈಜಾಗ್'​ ನಕ್ಷತ್ರ!

Former Miss Vizag Nakshatra Viral Video: ತನ್ನ ಪತಿ ಬೇರೊಬ್ಬ ಮಹಿಳೆಯೊಂದಿಗೆ ಇರುವಾಗಲೇ ''ರೆಡ್ ಹ್ಯಾಂಡ್'' ಆಗಿ ಹಿಡಿದ ''Miss Vizag'' ನಕ್ಷತ್ರ ಅವರು ಕ್ಯಾಮೆರಾ ಮುಂದೆಯೇ ತ್ರಿಪುರಾಣ ವೆಂಕಟ ಸಾಯಿ ತೇಜಾಗೆ ಕಪಾಳಮೋಕ್ಷ ಮಾಡಿದ್ದಾರೆ.

Written by - Puttaraj K Alur | Last Updated : Jun 1, 2024, 04:22 PM IST
  • ಕ್ಯಾಮೆರಾ ಮುಂದೆಯೇ ಪತಿಗೆ 'ಕಪಾಳಮೋಕ್ಷ' ಮಾಡಿದ Miss Vizag ನಕ್ಷತ್ರ
  • ಪತಿ ಬೇರೊಬ್ಬ ಮಹಿಳೆಯೊಂದಿಗಿರುವಾಗ ರೆಡ್ ಹ್ಯಾಂಡ್ ಆಗಿ ಹಿಡಿದ ನಕ್ಷತ್ರ
  • ನಟ ತ್ರಿಪುರಾಣ ವೆಂಕಟ ಸಾಯಿ ತೇಜಾ ವಿರುದ್ಧ ವಿವಾಹೇತರ ಸಂಬಂಧ ಆರೋಪ
Viral Video: ಬೇರೆ ಮಹಿಳೆ ಜೊತೆ ಸರಸ, ರೆಡ್‌ಹ್ಯಾಂಡ್ ಆಗಿ​ ಪತಿಯನ್ನು ಹಿಡಿದ ಮಾಜಿ 'ಮಿಸ್​ ವೈಜಾಗ್'​ ನಕ್ಷತ್ರ! title=
ಪತಿಗೆ ನಕ್ಷತ್ರ 'ಕಪಾಳಮೋಕ್ಷ'

Former Miss Vizag Nakshatra Viral Video: ಆಫೀಸ್‌ನಲ್ಲಿ ಬೇರೆ ಮಹಿಳೆಯ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ಪತಿಯನ್ನು ಮಾಜಿ ʼಮಿಸ್‌ ವೈಜಾಗ್‌ʼ ನಕ್ಷತ್ರ ಅವರು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಈ ವಿಡಿಯೋ ಇದಿಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಹೌದು, ಮಾಜಿ ಸುಂದರಿ ವೈಜಾಗ್‌ ನಕ್ಷತ್ರ ಅವರ ವೈವಾಹಿಕ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ. ಪತಿ ಬೇರೊಬ್ಬ ಮಹಿಳೆಯ ಜೊತೆಗೆ ಆಫೀಸ್‌ನಲ್ಲೇ ಸರಸ ಸಲ್ಲಾಪದಲ್ಲಿ ತೊಡಗಿದ್ದನ್ನು ಅವರು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ.  

ಇದನ್ನೂ ಓದಿ: ಕೇವಲ ₹200ಕ್ಕೆ ಸ್ಟಂಟ್‌ ಮಾಡ್ತಾಯಿದ್ದ ದುನಿಯಾ ವಿಜಯ್‌ ಹೀರೋ ಆಗಿದ್ದು ಹೇಗೆ ಗೊತ್ತಾ..?

ಮೇ 31ರಂದು ವಿಶಾಖಪಟ್ಟದಲ್ಲಿರುವ ಶೂಟಿಂಗ್ ಕಚೇರಿಯಲ್ಲಿ ನಕ್ಷತ್ರ ಅವರ ಪತಿ, ನಟ-ನಿರ್ಮಾಪಕ ತ್ರಿಪುರಾಣ ವೆಂಕಟ ಸಾಯಿ ತೇಜಾ ಬೇರೊಬ್ಬ ಮಹಿಳೆಯ ಜೊತೆಗಿದ್ದರಂತೆ. ಈ ವಿಷಯ ತಿಳಿಯುತ್ತಿದ್ದಂತೆ ನಕ್ಷತ್ರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ತೆರಳಿ ರೆಡ್ ಹ್ಯಾಂಡ್ ಆಗಿ ಹಿಡಿದು ಬುದ್ಧಿ ಕಲಿಸಿದ್ದಾರೆ.

ವೈರಲ್‌ ಆಗಿರುವ ವಿಡಿಯೋದಲ್ಲಿ ನಕ್ಷತ್ರ ಅವರು ವ್ಯಕ್ತಿಯೊಬ್ಬನಿಗೆ ಕಚೇರಿಯ ಬಾಗಿಲು ತೆರೆಯಲು ಹೇಳುತ್ತಿರುವುದನ್ನು ಕಾಣಬಹುದಾಗಿದೆ. ಕೊನೆಗೆ ಅವರೇ ಬಾಗಿಲು ತಳ್ಳಿ ಒಳಹೋಗಿ, ಪತಿ ತೇಜಾ ಜೊತೆಗಿದ್ದ ಮಹಿಳೆಯ ಮೇಲೆ ಸಿಕ್ಕಸಿಕ್ಕ ವಸ್ತುಗಳನ್ನು ಎಸೆದಿದ್ದಾರೆ. ಈ ವೇಳೆ ಪತಿ ಆಕೆಯ ವಿರುದ್ಧವೋ ಜೋರುಧ್ವನಿಯಲ್ಲಿ ಮಾತನಾಡಲು ಮುಂದಾಗಿದ್ದಾನೆ. ಸಿಟ್ಟಿಗೆದ್ದ ನಕ್ಷತ್ರ ಪತಿಗೆ ಕಪಾಳಮೋಕ್ಷ ಮಾಡಿದ್ದಾರೆ. ತನ್ನ ಪತಿ ತೇಜಾ ವಿಚ್ಛೇದನ ನೀಡದೆ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ ಅಂತಾ ಆರೋಪಿಸಿದ್ದಾರೆ.

ಇದನ್ನೂ ಓದಿ: ಒಂದು ಕಾಲದಲ್ಲಿ ಸಮೋಸಾ ಮಾರುವವನ ಮಗಳು.. 50 ರೂಪಾಯಿಗೆ ಪರದಾಡಿದ್ದ ಈಕೆ ಇಂದು ಬಾಲಿವುಡ್‌ನ ಸ್ಟಾರ್..‌ ನೂರಾರು ಕೋಟಿ ಆಸ್ತಿಗೆ ಒಡತಿ !

ನಕ್ಷತ್ರ ಮಾಡಿರುವ ಎಲ್ಲಾ ಆರೋಪಗಳನ್ನು ತಿರಸ್ಕರಿಸಿರುವ ತೇಜಾ, ʼನನ್ನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದು, ಅವು ನ್ಯಾಯಾಲಯದಲ್ಲಿ ಬಾಕಿ ಇವೆ. ತನ್ನ ಕೋಣೆಯಲ್ಲಿದ್ದ ಮಹಿಳೆಯು ಸಿನಿಮಾದ ಆಡಿಷನ್‌ಗೆ ಬಂದಿದ್ದಳು. ಈ ವೇಳೆ ದಿಢೀರ್‌ ದಾಳಿ ನಡೆಸಿ ನಮ್ಮ ಮೇಲೆ ನಕ್ಷತ್ರ ಸಿಟ್ಟಿನಿಂದ ಹಲ್ಲೆ ಮಾಡಿದಳು ಅಂತಾ ತೇಜಾ ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News