ಬೆಂಗಳೂರು : ನಾನು ಎಲ್ಲೂ ಕುಡಾ ಸಣ್ಣ ನುಡಿಯನ್ನು ರಾಜ ವಂಶದ ಕುರಿತು ಮಾತನಾಡಿಲ್ಲ. ನಾನು ಪುನೀತ್ ರಾಜಕುಮಾರ್ ಅವರ ದೊಡ್ಡ ಅಭಿಮಾನಿ. ತೆರೆಮರೆಯಲ್ಲಿ ಅವರಿಗಾಗಿ ಕೆಲಸ ಮಾಡಿದ್ದೀನಿ. ರಾಜ ಕುಟುಂಬದ ಮೇಲೆ ಅಪಾರ ಗೌರವವಿದೆ. ಅದು ನನ್ನ ಹೃದಯದಲ್ಲಿದೆ ಎಂದು ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ನಿನ್ನೆ ಚಾಮರಾಜನಗರದಲ್ಲಿ ನಡೆದ ಘಟನೆ ಕುರಿತು ಸ್ಪಷ್ಟ ಪಡಿಸಿದ್ದಾರೆ.
ಜೀ ಸುದ್ದಿವಾಹಿನಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಪುನೀತ್ ಕರೆಹಳ್ಳಿ ಅವರು, ನನ್ನ ಮೇಲೆ ಮಾಡಿರುವ ಆರೊಪ ಶುದ್ಧು ಸುಳ್ಳು. ಶಿವಕುಮಾರ್ ಅವರು ಮಾನಸೀಕವಾಗಿ ಸ್ಥಿರವಾಗಿಲ್ಲ. ಏಕೆಂದರೆ ಮೊನ್ನೆ ಘಟನೆ ಬಳಿಕ ಪೊಲೀಸ್ ಸ್ಟೇಷನ್‌ನಲ್ಲಿ ಶಿವಕುಮಾರ್ ಅವರನ್ನು ಹಲ್ಲೆ ಕುರಿತು ಪೊಲೀಸರು ಕೇಳಿದ್ದರು. ಯಾವ ಕಾರಣಕ್ಕೆ ಪುನೀತ್ ಕರೆಹಳ್ಳಿ ಮೇಲೆ ಹಲ್ಲೆ ಮಾಡಿದ್ರಿ ಎಂದು ಪ್ರಶ್ನೆ ಮಾಡಿದಾಗ, ಶಿವಕುಮಾರ್ ಅವರು ಕೆರೆಹಳ್ಳಿ ಮುಂದೆ ಯಾವತ್ತೂ ಪುನೀತ್ ರಾಜಕುಮಾರ್ ಅವರ ಕುರಿತು ಮಾತನಾಡಬಾರದು ಅಂತ ಹೀಗೆ ಮಾಡಿದ್ದಾಗಿ ತಿಳಿಸಿದರು ಅಂತ ಪುನೀತ್ ಕೆರೆಹಳ್ಳಿ ತಿಳಿಸಿದರು.
ಇದನ್ನೂ ಓದಿ: ವಿವಾದಕ್ಕೆ ಕಾರಣವಾಯ್ತು RGV ಕ್ರಿಸ್ಮಸ್ ವಿಶ್ ಪೋಸ್ಟ್ : ಇದು ಸರಿಯಲ್ಲ ಎಂದ ನೆಟ್ಟಿಗರು..!
ಅಲ್ಲದೆ, ಇದು ಜೀಹಾದಿ ಮನಸ್ಥಿತಿಗಳ ಕೆಲಸ, ನನ್ನ ಮೇಲೆ ತೆರೆ ಹಿಂದೆ ಆಟ ನಡೆದಿದೆ. ನಾನು ಎಲ್ಲೂ ರಾಜ್ ಕುಟುಂಬದ ಬಗ್ಗೆ ಚಕಾರ ಎತ್ತಿಲ್ಲ ಎಂದಿದ್ದಾರೆ. ಪುನೀತ್ ರಾಜ ಕುಮಾರ್ ಪ್ಯಾನ್ಸ್ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದಾರೆ ಎಂದು ಎಲ್ಲೂ ಹೇಳಿಲ್ಲ. ನಾನು ಹೇಳಿದ್ದೇನೆ ಎಂದು ಆರೋಪ ಮಾಡುವವರು ಆ ಆರೋಪವನ್ನು ಇದೂವರೆಗೂ ಸಾಭೀತು ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದರು.
ಮೊನ್ನೆ ನಾನು ದರ್ಶನ್ ಅವರ ಪರವಾಗಿ ಮಾತನಾಡಿದ್ದೇನೆ ಎಂಬ ವಿಚಾರ ಸುದ್ದಿ ಚಾನಲ್‌ಗಳಲ್ಲಿ ಕೇಳಿಬಂತು. ಆಗ ಎಲ್ಲರೂ ನನಗೆ ಕರೆ ಮಾಡಿ ಕೇಳಿದ್ರು. ಆದ್ರೆ ನಾನು ಎಲ್ಲೂ ದರ್ಶನ್ ಅವರ ಪರವಾಗಿ, ಪುನೀತ್ ಅವರ ವಿರೋಧವಾಗಿ ಹೇಳಿಕೆ ನೀಡಿಲ್ಲ. ಅದಕ್ಕೆ ಸಾಕ್ಷಿಯೂ ಇಲ್ಲ. ಯಾರೋ ಯೂಟ್ಯೂಬ್‌ರ್ಸ್ ಮಾಡಿರುವ ಕೆಲಸ ಇಷ್ಟೇಲ್ಲ ಅವಾಂತಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Samantha Ruth Prabhu : ʼಎಲ್ಲರಿಗೂ ನಾನು ಇದನ್ನೇ ಹೇಳಲು ಇಚ್ಚಿಸಿದ್ದೆ..ʼ ಸಮಂತಾ ಪೋಸ್ಟ್ ವೈರಲ್..!
ಅಲ್ಲದೆ, ದರ್ಶನ್ ಅವರ ವಿಚಾರದಲ್ಲಿ ನನ್ನ ಹೆಸರು ಯಾಕ್ ಬಂತು ಅಂದ್ರೆ ಅವರನ್ನು ಮಣಿಸಲಾಗದವರು ಈ ಕೆಲಸ ಮಾಡಿದ್ದಾರೆ. ಅದರಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರೂ ಸಹ ಇದ್ದಾರೆ. ಇದಕ್ಕೆ ಕಾರಣ ದರ್ಶನ್ ಅವರು ಅದೃಷ್ಟ ಲಕ್ಷ್ಮಿಕುರಿತ ನೀಡಿದ್ದ ಹೇಳಿಕೆ. ನಾನು ಆ ಹೇಳಿಕೆ ಕುರಿತು ಎಲ್ಲೂ ಮಾತನಾಡಿದ್ದಿಲ್ಲ. ಆಗ ಟ್ರೋಲ್ ಪೇಜ್‌ನವರು ನಾನು ಈ ಕುರಿತು ಧ್ವನಿ ಎತ್ತುತ್ತಿಲ್ಲ ಅಂತ ನನ್ನ ಮೇಲೆ ಕೋಪಗೊಂಡಿದ್ದರು. ಅಲ್ಲದೆ, ಟ್ರೋಲ್ ಮಾಡಿ ನನ್ನ ಫೋನ್ ನಂಬರ್ ಹಾಕಿದ್ದರು. ಆದ್ರೆ ನಾನೂ ಎಲ್ಲೂ ಅಪ್ಪು ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿಲ್ಲ. ದರ್ಶನ್ ಅವರ ಹೇಳಿಗೆ ಬೆಂಬಲವನ್ನೂ ನೀಡಿಲ್ಲ ಎಂದು ಪುನೀತ್ ಕೆರೆಹಳ್ಳಿಯವರು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.