Darshan: ಪ್ರಾಣ ಸ್ನೇಹಿತನಿಗೆ ನಟ ದರ್ಶನ್‌ ನೆರವು.. ಕುಟುಂಬಕ್ಕೆ ಬೆನ್ನುಲುಬಾದ 'ಡಿ ಬಾಸ್'

Darshan:ದರ್ಶನ್‌ ಮಾಡಿರುವ ಆ ಒಂದೇ ಒಂದು ಕೆಲಸ ಅಭಿಮಾನಿಗಳನ್ನ ಮತ್ತೆ ಹೆಮ್ಮೆಪಡುವಂತೆ ಮಾಡಿದೆ.

Written by - Malathesha M | Edited by - Chetana Devarmani | Last Updated : Feb 17, 2022, 12:19 PM IST
  • ಅಭಿಮಾನಿಗಳನ್ನ ಮತ್ತೆ ಹೆಮ್ಮೆಪಡುವಂತೆ ಮಾಡಿದ ದರ್ಶನ್‌
  • ಪಿ.ಎನ್.ಸತ್ಯ ಅವರ ಕುಟುಂಬಕ್ಕೆ ದರ್ಶನ್‌ ಸಹಾಯ
  • 'ಮೆಜೆಸ್ಟಿಕ್‌'‌ ಚಿತ್ರದ ನಿರ್ದೇಶಕ ಪಿ.ಎನ್.ಸತ್ಯ
Darshan: ಪ್ರಾಣ ಸ್ನೇಹಿತನಿಗೆ ನಟ ದರ್ಶನ್‌ ನೆರವು.. ಕುಟುಂಬಕ್ಕೆ ಬೆನ್ನುಲುಬಾದ 'ಡಿ ಬಾಸ್' title=
ದರ್ಶನ್‌

‌ಬೆಂಗಳೂರು: ನಟ ದರ್ಶನ್‌ಗೆ (Darshan) ಈ ಹುಟ್ಟುಹಬ್ಬ ಡಬಲ್‌ ಸಂಭ್ರಮವನ್ನು ಕೊಟ್ಟಿದೆ. ಒಂದು ಕಡೆ ದರ್ಶನ್‌ ನಟನೆಯ ಮೊದಲ ಚಿತ್ರ 'ಮೆಜೆಸ್ಟಿಕ್‌' (Majestic) 20 ವರ್ಷ ಪೂರೈಸಿದ್ದರೆ, ಮತ್ತೊಂದು ಕಡೆ ಎರಡೆರಡು ಬಹುನಿರೀಕ್ಷಿತ ಚಿತ್ರಗಳು ಫಸ್ಟ್‌ ಲುಕ್‌ನಲ್ಲೇ ಕಮಾಲ್‌ ಮಾಡಿವೆ. ಅಂದಹಾಗೆ ವಿಷಯ ಅದಲ್ಲ, ದರ್ಶನ್‌ ಮಾಡಿರುವ ಆ ಒಂದೇ ಒಂದು ಕೆಲಸ ಅಭಿಮಾನಿಗಳನ್ನ ಮತ್ತೆ ಹೆಮ್ಮೆಪಡುವಂತೆ ಮಾಡಿದೆ.

ಇದನ್ನೂ ಓದಿ:ಕನ್ನಡಕ್ಕಾಗಿ ಒಂದನ್ನು ಒತ್ತಿ' ಅಂತಿದ್ದ ಕೃಷಿ ಈಗ ವಿಭಿನ್ನ ವೇಷದಲ್ಲಿ..!

ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ 'ಮೆಜೆಸ್ಟಿಕ್‌' ಚಿತ್ರದ 20ನೇ ವರ್ಷದ ಸಂಭ್ರಮಾಚರಣೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟ ದರ್ಶನ್‌, 'ಮೆಜೆಸ್ಟಿಕ್‌'‌ ಚಿತ್ರದ ನಿರ್ದೇಶಕ ಹಾಗೂ ತನ್ನ ಆಪ್ತ ಸ್ನೇಹಿತ ಪಿ.ಎನ್.ಸತ್ಯ (P N Satya) ಅವರನ್ನು ನೆನಪು ಮಾಡಿಕೊಂಡಿದ್ದರು. ಪಿ.ಎನ್.ಸತ್ಯ ಇವತ್ತು ತಮ್ಮ ಜೊತೆ ಇಲ್ಲ, ಆದರೂ ಅವರು ಅಂದು ಮಾಡಿದ್ದ ಸಹಾಯ ಮರೆಯಲು ಆಗುವುದಿಲ್ಲ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ್ದರು.‌

ಆದರೆ ವಿಷಯ ಇಷ್ಟೇ ಅಲ್ಲ, ಇದೇ ಸಮಾರಂಭದಲ್ಲಿ ದಿವಂಗತ ಪಿ.ಎನ್.ಸತ್ಯ ಅವರ ಕುಟುಂಬ ಕೂಡ ಪಾಲ್ಗೊಂಡಿತ್ತು. ಕಾರ್ಯಕ್ರಮದಲ್ಲಿ ಪಿ.ಎನ್.ಸತ್ಯ ಅವರ ಕುಟುಂಬಕ್ಕೆ ದರ್ಶನ್‌ ತೂಗುದೀಪ್ ದೊಡ್ಡ ಮೊತ್ತದ ಸಹಾಯವನ್ನೇ ಮಾಡಿದ್ದಾರೆ. ಯಾರಿಗೂ ತಿಳಿಯದಂತೆ 10 ಲಕ್ಷ ರೂಪಾಯಿಯನ್ನ ದರ್ಶನ್‌ ನೀಡಿದ್ದಾರಂತೆ. ಈ ವಿಚಾರವನ್ನ ಅಣಜಿ ನಾಗರಾಜ್ (Anaji Nagaraj) ಅವರೇ ತಿಳಿಸಿದ್ದಾರೆ.

ಇದನ್ನೂ ಓದಿ:ತೆಲುಗು ಚಿತ್ರದಲ್ಲಿ ಕನ್ನಡತಿ.. ರವಿತೇಜ ಸಿನಿಮಾಗೆ ಶ್ರೀಲೀಲಾ ನಾಯಕಿ!

ಅಣಜಿ ನಾಗರಾಜ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ''ಮೆಜೆಸ್ಟಿಕ್‌‌ ಚಿತ್ರದ ಸಂಭ್ರಮಾಚರಣೆ ಸಮಾರಂಭದಲ್ಲಿ ಪಿ.ಎನ್.ಸತ್ಯ ಅವರ ಕುಟುಂಬ ಕೂಡ ಭಾಗವಹಿಸಿತ್ತು. ಅಂದು ದರ್ಶನ್‌ (Darshan) ಅವರು 10 ಲಕ್ಷ ರೂಪಾಯಿಯನ್ನ ಪಿ.ಎನ್.ಸತ್ಯ ಅವರ ಕುಟುಂಬಕ್ಕೆ ತಲುಪಿಸಿದ್ದಾರೆ. ಆದರೆ ಕಾರ್ಯಕ್ರಮಕ್ಕೆ ಬಂದ ಹಲವರಿಗೆ ಈ ವಿಷಯ ಗೊತ್ತೇ ಆಗಿಲ್ಲ. ದರ್ಶನ್ ಸಹಾಯ ಮಾಡಿದರೆ ಯಾರಿಗೂ ಹೇಳಿಕೊಳ್ಳಲ. ಅದು ಅವರ ದೊಡ್ಡ ಗುಣ'' ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News