Prabhas : ಫ್ಲೈಟ್‌ನಲ್ಲಿ ಪ್ರಭಾಸ್‌ ಮಲಗಿದ್ದಾಗ ದಿಶಾ ಪಟಾನಿ ಮಾಡಿದ್ದೇನು ಗೊತ್ತೆ..! ಫೋಟೋ ವೈರಲ್‌

Kalki 2898 AD updates : ʼಕಲ್ಕಿ 2898 ಎಡಿʼ ಚಿತ್ರತಂಡ ಇಟಲಿಗೆ ತೆರಳಿದೆ. ಪ್ರಯಾಣದ ಮಧ್ಯ ಡಾರ್ಲಿಂಗ್‌ ಪ್ರಭಾಸ್‌ ಮಲಗಿದ್ದಾಗ ಬಾಲಿವುಡ್‌ ನಟಿ ದಿಶಾ ಪಟಾನಿ ಮಾಡಿದ ಪ್ರಸಂಗದ ದೃಶ್ಯ ಎಲ್ಲೆಡೆ ವೈರಲ್‌ ಆಗಿದೆ.. ಅಷ್ಟಕ್ಕೂ ದಿಶಾ ಮಾಡಿದ್ದಾದ್ರೂ ಏನು.. ಇಲ್ಲಿದೆ ವರದಿ..

Written by - Krishna N K | Last Updated : Mar 7, 2024, 07:29 PM IST
    • ʼಕಲ್ಕಿ 2898 ಎಡಿʼ ಚಿತ್ರತಂಡ ಇಟಲಿಗೆ ತೆರಳಿದೆ.
    • ನಟಿ ದಿಶಾ ಪಟಾನಿ ಮಾಡಿದ ಪ್ರಸಂಗದ ದೃಶ್ಯ ಎಲ್ಲೆಡೆ ವೈರಲ್‌.
    • ಕಲ್ಕಿ 2898 AD ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು.
Prabhas : ಫ್ಲೈಟ್‌ನಲ್ಲಿ ಪ್ರಭಾಸ್‌ ಮಲಗಿದ್ದಾಗ ದಿಶಾ ಪಟಾನಿ ಮಾಡಿದ್ದೇನು ಗೊತ್ತೆ..! ಫೋಟೋ ವೈರಲ್‌ title=
disha patani

Prabhas Disha Patani : ಬಹುನಿರೀಕ್ಷಿತ ʼಕಲ್ಕಿ 2898 ಎಡಿʼ ಸಿನಿಮಾ ಈ ವರ್ಷ ಮೇ 9 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಡಾರ್ಲಿಂಗ್‌ ಪ್ರಭಾಸ್‌ ಜೊತೆ ದಿಶಾ ಪಟಾನಿ, ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಇದೀಗ ಪ್ರಭಾಸ್‌ ಮತ್ತು ದಿಶಾ ಕುರಿತ ಮ್ಯಾಟರ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

ಹೌದು.. ಕಲ್ಕಿ 2898 AD ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಇದೀಗ ಚಿತ್ರದ ಬಿಡುಗಡೆಗೆ 2 ತಿಂಗಳಿಗಿಂತ ಕಡಿಮೆ ಸಮಯ ಉಳಿದಿರುವಾಗ, ಚಿತ್ರತಂಡ ಹಾಡಿನ ಚಿತ್ರೀಕರಣಕ್ಕಾಗಿ ಇಟಲಿಗೆ ಹೊರಟಿದ್ದು, ದಿಶಾ ಪಟಾನಿ ಮತ್ತು ಪ್ರಭಾಸ್ ಒಳಗೊಂಡ ಮೊದಲ ಚಿತ್ರವನ್ನು ತಂಡ ಹಂಚಿಕೊಂಡಿದೆ. 

ಇದನ್ನೂ ಓದಿ:ಅಂಬಾನಿ ಜೀ.. ನಿಮ್ಮ ಮಗನನ್ನು 5 ದಿನ ನನ್ನ ಜೊತೆ ಕಳುಹಿಸಿ.. ನಾನು.. ಅವರಿಗೆ! ರಾಖಿ ಆಫರ್‌

ಫೋಟೋದಲ್ಲಿ, ದಿಶಾ, ಸಂಪೂರ್ಣ ಕಪ್ಪು ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಕೊಂಡಿದ್ದಾರೆ. ಮುಂಭಾಗದ ಸೀಟಿನಲ್ಲಿ ಕುಳಿತಿರುವ ಪ್ರಭಾಸ್ ಅವರ ಫೋಟೋವನ್ನು ದಿಶಾ ಕ್ಲಿಕ್ ಮಾಡುತ್ತಿರುವ ದೃಶ್ಯ ಫೋಟೋದಲ್ಲಿದೆ. ವೈಜಯಂತಿ ಮೂವೀಸ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕಲ್ಕಿ 2898 AD ಯ ಅಧಿಕೃತ Instagram ಪುಟದಲ್ಲಿ ಇಟಲಿಗೆ ಬಂದಿಳಿದ ಇಡೀ ಸಿಬ್ಬಂದಿ ಚಿತ್ರವನ್ನು ಸಹ ಹಂಚಿಕೊಳ್ಳಲಾಗಿದೆ. 

ಈ ವರ್ಷ ಮೇ 9 ರಂದು ಕಲ್ಕಿ 2898 ಎಡಿ ಚಿತ್ರವು ವಿಶ್ವಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ನಾಗ್ ಅಶ್ವಿನ್ ನಿರ್ದೇಶನ ಈ ಸಿನಿಮಾದಲ್ಲಿ ಪ್ರಭಾಸ್‌, ದೀಪಿಕಾ ಪಡುಕೋಣೆ, ಅಮಿತಾಬ್‌ ಬಚ್ಚನ್‌, ಕಮಲ್‌ ಹಾಸನ್‌ ಸೇರಿದಂತೆ ಅನೇಕ ದಿಗ್ಗಜ ನಟರಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News