Dhanush's Paternity Case: ಇವರೇ ನಟ ಧನುಷ್‌ ನಿಜವಾದ ತಂದೆ-ತಾಯಿ..! ಕೋರ್ಟ್‌ ತೀರ್ಪು ಬಹಿರಂಗ 

Dhanush paternity case : ಸಂಚಲನ ಮೂಡಿಸಿದ್ದ ನಟ ಧನುಷ್ ಪಿತೃತ್ವ ಪ್ರಕರಣದ ತೀರ್ಪು ಹೊರಬಿದ್ದಿದೆ. ಕೊನೆಗೂ ಈ ಪ್ರಕರಣ ಇತ್ಯರ್ಥ ಕಂಡಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Written by - Krishna N K | Last Updated : Mar 15, 2024, 06:35 PM IST
    • ನಟ ಧನುಷ್ ಪಿತೃತ್ವ ಪ್ರಕರಣದ ತೀರ್ಪು ಹೊರಬಿದ್ದಿದೆ.
    • ರೋಚಕತೆ ಹುಟ್ಟು ಹಾಕಿದ್ದ ಕೇಸ್‌ ಕೊನೆಗೂ ಇತ್ಯರ್ಥಿ ಕಂಡಿದೆ.
    • ಉದ್ಯೋಗ ಸರ್ಟಿಫಿಕೇಟ್ ಅನ್ನು ನ್ಯಾಯಾಲಯದ ಮುಂದಿಟ್ಟಿದ್ದರು.
Dhanush's Paternity Case: ಇವರೇ ನಟ ಧನುಷ್‌ ನಿಜವಾದ ತಂದೆ-ತಾಯಿ..! ಕೋರ್ಟ್‌ ತೀರ್ಪು ಬಹಿರಂಗ  title=
Dhanushs paternity case

Actor Dhanush : ಕಳೆದ 9 ವರ್ಷಗಳಿಂದ ಭಾರೀ ಚರ್ಚೆ ಕಾರಣವಾಗಿದ್ದ, ನಟ ಧನುಷ್ ಪಿತೃತ್ವ ಪ್ರಕರಣದ ತೀರ್ಪು ಕೊನೆಗೂ ಹೊರ ಬಿದ್ದಿದೆ. ರೋಚಕತೆ ಹುಟ್ಟು ಹಾಕಿದ್ದ ಕೇಸ್‌ ಕೊನೆಗೂ ಇತ್ಯರ್ಥ ಕಂಡಿದೆ. ಹಾಗಿದ್ರೆ ಧನುಷ್ ನಿಜವಾದ ತಂದೆ-ತಾಯಿ ಯಾರು..? ಕೋರ್ಟ್‌ ನೀಡಿದ ತೀರ್ಪೇನು..? ಇಲ್ಲಿದ ವರದಿ..

ಹೌದು.. 2015ರಲ್ಲಿ ಕದಿರೇಶನ್ ಮತ್ತು ಮೀನಾಕ್ಷಿ ದಂಪತಿ ಎಂಬ ದಂಪತಿಗಳು, ನಟ ಧನುಷ್ ನಮ್ಮ ಮಗ ಅಂತ ಕೋರ್ಟ್‌ ಮೆಟ್ಟಿಲೇರಿದ್ದರು.  ಅಲ್ಲದೆ ಹಲವಾರು ದಾಖಲೆಗಳನ್ನು ನ್ಯಾಯಾಲಯದ ಮುಂದಿಟ್ಟಿದ್ದರು. ದಂಪತಿ ಧನುಷ್‌ ಬರ್ತ್‌ ಸರ್ಟಿಫಿಕೇಟ್, ಶಾಲಾ ಟಿಸಿ ಹಾಗೂ ಉದ್ಯೋಗ ಸರ್ಟಿಫಿಕೇಟ್ ಅನ್ನು ಸಹ ನ್ಯಾಯಾಲಯದ ಮುಂದಿಟ್ಟಿದ್ದರು. 

ಇದನ್ನೂ ಓದಿ:ಅಮಿತಾಬ್‌ ಜೀ ಆರೋಗ್ಯಕ್ಕೆ ಏನಾಗಿದೆ..! 81 ವರ್ಷದ ಬಿಗ್‌ ಬಿಗೆ ಶಸ್ತ್ರಚಿಕಿತ್ಸೆ ಏಕೆ..? 

ಆದರೆ ಧನುಷ್ ಇದು ಸುಳ್ಳು, ನಿರ್ದೇಶಕ ಕಸ್ತೂರಿ ರಾಜಾ ಮತ್ತು ವಿಜಯಲಕ್ಷ್ಮಿ ನನ್ನ ತಂದೆ ತಾಯಿ ಅಂತ ವಾದಿಸಿದ್ದರು. ಇನ್ನು ಕದಿರೇಶನ್, ಪಿಯುಸಿ ಓದುತ್ತಿದ್ದ ಸಮಯದಲ್ಲಿ ಧನುಷ್ ಮನೆಬಿಟ್ಟು ಸಿನಿಮಾಗಳಲ್ಲಿ ನಟಿಸೋಕೆ ಹೋದ ಅಂತ ಹೇಳಿದ್ದರು.

ಸಧ್ಯ ಈ ಪ್ರಕರಣದ ಅರ್ಜಿಯನ್ನು ಚೆನ್ನೈ ಹೈಕೋರ್ಟ್ ವಜಾಗೊಳಿಸಿದೆ. ಅರ್ಜಿದಾರರು ತಮ್ಮ ಆರೋಪ ರುಜು ಮಾಡಲು ಬೇಕಾದ ಸೂಕ್ತ ದಾಖಲೆಗಳನ್ನು ಸಲ್ಲಿಸಿಲ್ಲ ಅಂತ ಪ್ರಕರಣವನ್ನು ವಜಾ ಗೊಳಿಸಿದೆ. ಇದರಿಂದಾಗಿ ಕದಿರೇಶನ್ ಮತ್ತು ಮೀನಾಕ್ಷಿ ದಂಪತಿಗೆ ಪ್ರಕರಣದಲ್ಲಿ ಹಿನ್ನಡೆ ಉಂಟಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News