ಶೀಘ್ರದಲ್ಲೇ ಒಳ್ಳೆಯ ಸುದ್ದಿ ನೀಡುತ್ತೇನೆ..! ಅಶ್ಲೀಲ ವಿಡಿಯೋ ವೈರಲ್‌ ಬೆನ್ನಲ್ಲೆ ಜ್ಯೋತಿ ರೈ ಪೋಸ್ಟ್ ಸಂಚಲನ

Jyothi Rai viral post : ಸಿನಿಮಾ, ಧಾರಾವಾಹಿ, ವೆಬ್‌ ಸಿರೀಸ್‌ ಅಂತ ಬ್ಯುಸಿಯಾಗಿರುವ ನಟಿ ಜ್ಯೋತಿ ರೈ ಕಳೆದ ಕೆಲವು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಜ್ಯೋತಿಯವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡಿದ್ದರು, ಇದೀಗ ಸಿಹಿ ಸುದ್ದಿ ನೀಡುವುದಾಗಿ ನಟಿ ಹಾಕಿರುವ ಪೋಸ್ಟ್‌ ಒಂದು ಸಂಚಲನ ಸೃಷ್ಟಿಸುತ್ತಿದೆ.
 

1 /9

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸೌಂದರ್ಯದಿಂದ ಮಿಂಚುತ್ತಿರುವವರಲ್ಲಿ ಜ್ಯೋತಿ ರಾಯ್ ಕೂಡ ಒಬ್ಬರು. ಸಿನಿಮಾ ನಾಯಕಿಯರಿಗೆ ಪೈಪೋಟಿ ನೀಡುತ್ತಿರುವ ನಟಿಗೆ ಒಳ್ಳೆಯ ಕ್ರೇಜ್ ಇದೆ..   

2 /9

ಆಗಾಗ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಜ್ಯೋತಿ ಹಂಚಿಕೊಳ್ಳುವ ಫೊಟೋಸ್‌ ಮತ್ತು ವಿಡಿಯೋ ಸಖತ್‌ ವೈರಲ್‌ ಆಗುತ್ತಿರುತ್ತವೆ.  

3 /9

ವಯ್ಯಾರಿ ಭಾಮೆಯ ಸೌಂದರ್ಯಕ್ಕೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಜ್ಯೋತಿ ಅಪ್‌ಡೇಟ್ಸ್‌ಗಾಗಿಯೇ ಕೆಲವು ನೆಟ್ಟಿಗರು ಕಾಯುತ್ತಿರುತ್ತಾರೆ.  

4 /9

ಸಾಮಾಜಿಕ ಜಾಲತಾಣಗಳ ಮೂಲಕ ಭಾರೀ ಕ್ರೇಜ್ ಗಳಿಸಿರುವ ನಟಿಯದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್‌ ಆಗಿದ್ದವು.  

5 /9

ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಜ್ಯೋತಿ, ಈ ಸುದ್ದಿ ಸುಳ್ಳು ಅಂತ ತಳ್ಳಿಹಾಕಿದ್ದರು. ಅಲ್ಲದೆ, ತಮ್ಮ ತೇಜೋವಧೆ ಮಾಡಲಾಗುತ್ತಿದೆ ಅಂತ ದೂರಿದ್ದರು.  

6 /9

ಇದೇ ವೇಳೆ ಇತ್ತೀಚೆಗೆ ನಟಿ ಮಾಡಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಬೆಚ್ಚಿಬೀಳಿಸಿದೆ. ಶೀಘ್ರದಲ್ಲೇ ಒಳ್ಳೆಯ ಸುದ್ದಿ ನೀಡುತ್ತೇನೆ ಎಂದು ಜ್ಯೋತಿ ರೈ ಪೋಸ್ಟ್ ಹಂಚಿಕೊಂಡಿದ್ದಾರೆ.  

7 /9

ಜ್ಯೋತಿ ರಾಯ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಕುರಿತು ನಟಿ ಅಧಿಕೃತವಾಗಿ ಹೇಳಿಕೊಂಡಿಲ್ಲ.  

8 /9

ಅಲ್ಲದೆ, ಯುವ ನಿರ್ದೇಶಕ ಸುಕು ಪೂರ್ವಜ್ ಅವರೊಂದಿಗೆ ಜ್ಯೋತಿ ರಾಯ್ ಕಳೆದ ಕೆಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದು, ಇಬ್ಬರು ಶೀಘ್ರವೇ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.  

9 /9

ತಮ್ಮ ಇನ್‌ಸ್ಟಾಗ್ರಾಮ್‌ ಪ್ರೊಫೈಲ್‌ನಲ್ಲಿಯೂ ಸಹ ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವ ನಟಿ ಸಧ್ಯ ಅಧಿಕೃತವಾಗಿ ವಿವಾಹ ಸುದ್ದಿಯನ್ನು ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.