ನೀವೂ ಸ್ಟ್ಯಾಂಡ್‌ಅಪ್‌ ಕಾಮಿಡಿಯನ್‌ ಆಗಬೇಕೆ? : ಜೀ ಕನ್ನಡ ನ್ಯೂಸ್‌ ಒದಗಿಸಲಿದೆ ಸೂಕ್ತ ವೇದಿಕೆ

Zee Kannada News Standup Comedy :ನಿಮ್ಮ ಮನಸ್ಸಿನಲ್ಲಿ ಸ್ಟಾಂಡಪ್‌ ಕಾಮಿಡಿಯನ್‌ ಆಗುವ ಆಸೆ, ಕನಸು ಇದೆಯೇ? ಹಾಗಿದ್ದರೆ ನಿಮಗೆ ಸೂಕ್ತ ವೇದಿಕೆ ಒದಗಿಸಿ ಕೊಡಲಿದೆ ಜೀ ಕನ್ನಡ ನ್ಯೂಸ್‌.   

Written by - Ranjitha R K | Last Updated : May 23, 2024, 01:44 PM IST
  • ಸ್ಟಾಂಡಪ್‌ ಕಾಮಿಡಿಯನ್‌ ಆಗಲು ಅವಕಾಶ
  • ಭಾಗವಹಿಸಬೇಕಾದರೆ ಏನು ಮಾಡಬೇಕು ?
  • ಈ ನಂಬರಿಗೆ ವಿಡಿಯೋ ಕಳುಹಿಸಿ
ನೀವೂ ಸ್ಟ್ಯಾಂಡ್‌ಅಪ್‌ ಕಾಮಿಡಿಯನ್‌ ಆಗಬೇಕೆ? : ಜೀ ಕನ್ನಡ ನ್ಯೂಸ್‌ ಒದಗಿಸಲಿದೆ ಸೂಕ್ತ ವೇದಿಕೆ title=

ಬೆಂಗಳೂರು : ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ.ಆದರೆ ಆ ಪ್ರತಿಭೆಯ  ಪ್ರದರ್ಶನಕ್ಕೆ ಉತ್ತಮ ವೇದಿಕೆ ಬೇಕಾಗಿರುತ್ತದೆ. ಸೂಕ್ತ ವೇದಿಕೆ ಸಿಗದ ಕಾರಣ ಅದೆಷ್ಟೋ ಪ್ರತಿಭೆಗಳು ಎಲೆಮರೆಯ ಕಾಯಿಯಂತಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಸ್ಟಾಂಡಪ್‌ ಕಾಮಿಡಿ ಬಹಳ ಜನಪ್ರಿಯವಾಗುತ್ತಿದೆ. ನಮ್ಮ ಮಧ್ಯೆ ಕುಳಿತು ಮಾತನಾಡುವಾಗ ಹಾಸ್ಯ ಚಟಾಕಿಗಳನ್ನು ಹಾರಿಸುವವರು ಬಹಳ ಮಂದಿ ಇದ್ದಾರೆ. ಆದರೆ ಅದೇ ಹಾಸ್ಯ ಚಟಾಕಿ ಹಾರಿಸಲು ಅಧಿಕೃತ ವೇದಿಕೆ ಸಿಕ್ಕರೆ ಹೇಗಿರುತ್ತದೇ?. 

ಸ್ಟಾಂಡಪ್‌ ಕಾಮಿಡಿಯನ್‌ ಆಗಲು ಅವಕಾಶ : 
ಹೌದು, ನಿಮ್ಮಲ್ಲಿರುವ ಹಾಸ್ಯ ಪ್ರಜ್ಞೆಯನ್ನು ಹೊರತಂದು ನೀವೂ  ಸ್ಟಾಂಡಪ್‌ ಕಾಮಿಡಿಯನ್‌ ಆಗಬೇಕೆ? ನಿಮ್ಮ ಮನಸ್ಸಿನಲ್ಲಿ ಸ್ಟಾಂಡಪ್‌ ಕಾಮಿಡಿಯನ್‌ ಆಗುವ ಆಸೆ, ಕನಸು ಇದೆಯೇ? ಹಾಗಿದ್ದರೆ ನಿಮಗೆ ಸೂಕ್ತ ವೇದಿಕೆ ಒದಗಿಸಿ ಕೊಡಲಿದೆ ಜೀ ಕನ್ನಡ ನ್ಯೂಸ್‌. 

ಇದನ್ನೂ ಓದಿ : Shah Rukh Khan: ಶಾರುಖ್ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್.. ನಿಟ್ಟುಸಿರು ಬಿಟ್ಟ ಫ್ಯಾನ್ಸ್‌!!

ಭಾಗವಹಿಸಬೇಕಾದರೆ ಏನು ಮಾಡಬೇಕು ? : 
ನಿಮ್ಮ ನೆಚ್ಚಿನ ಜೀ ಕನ್ನಡ ನ್ಯೂಸ್‌ನಲ್ಲಿ ಅತಿ ಶೀಘ್ರದಲ್ಲೇ ಸ್ಟಾಂಡಪ್‌ ಕಾಮಿಡಿಯನ್‌ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ. ನಿಮ್ಮಲ್ಲಿ ನಗಿಸುವ ಕಲೆ ಇದ್ದರೆ, ಸ್ಟಾಂಡಪ್‌ ಕಾಮಿಡಿಯನ್‌ ಆಗುವ ಉತ್ಸಾಹ ನಿಮ್ಮಲ್ಲಿದ್ದರೆ ಕನಿಷ್ಠ 7 ನಿಮಿಷದ ವಿಡಿಯೋ ಮಾಡಿ ನಮ್ಮ ವಾಟ್ಸಪ್‌ ನಂಬರ್‌ಗೆ ಕಳುಹಿಸಿದರೆ ಸಾಕು. ಇಲ್ಲಿ ಸೂಕ್ತ ವೀಯಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹೀಗೆ ಆಯ್ಕೆಯಾಗುವ ವಿಡಿಯೋಗಳನ್ನು ನಮ್ಮ ಚಾನೆಲ್‌ನಲ್ಲಿಯೇ ಪ್ರಸಾರ ಮಾಡಲಾಗುತ್ತದೆ.

ಈ ನಂಬರಿಗೆ ವಿಡಿಯೋ ಕಳುಹಿಸಿ :
ನೀವು ಬೆಸ್ಟ್ ಕಾಮಿಡಿಯನ್ ಎಂದಾದರೆ ನಮ್ಮ ಸ್ಟುಡಿಯೋಗೂ ನಿಮ್ಮನ್ನು ಕರೆಸಿ ವೇದಿಕೆ ಕಲ್ಪಿಸಿಕೊಡಲಾಗುತ್ತೆ.ಆಸಕ್ತರು ಈಗಲೇ 7 ನಿಮಿಷದ ವಿಡಿಯೋ ಮಾಡಿ ನಮ್ಮ ವಾಟ್ಸಪ್‌ ನಂಬರ್‌ 98117 82234ಗೆ ಕಳುಹಿಸಬಹುದು.ಸ್ಟಾಂಡಪ್‌ ಕಾಮಿಡಿಯನ್‌ ಆಗಿ ಖ್ಯಾತಿ ಪಡೆಯಬಹುದು. 

ಇದನ್ನೂ ಓದಿ : ಶಾರುಖ್ ಖಾನ್ ಅನಾರೋಗ್ಯಕ್ಕೆ ಕಾರಣವಾಗಿದ್ದೇ ಇದು... ನಟಿ ಜೂಹಿ ಚಾವ್ಲಾ ಕೊಟ್ರು ಹೆಲ್ತ್ ಅಪ್‌ಡೇಟ್‌ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News