ಆಟೋ ಹಿಂದೆ ಅತಿರಥ ಮಹಾರಥ ʼಸಾರಥಿʼ : DBoss ಅಭಿಮಾನಿಗಳ ಅಭಿಮಾನ..!

ದಿನದಿಂದ ದಿನಕ್ಕೆ ಛಾಲೆಜಿಂಗ್‌ ಸ್ಟಾರ್‌ ನಟನೆಯ ʼಕ್ರಾಂತಿʼ ಅಬ್ಬರ ಕರುನಾಡಿನಲ್ಲಿ ಹೆಚ್ಚಾಗುತ್ತಲೇ ಇದೆ. ದಚ್ಚು ಫ್ಯಾನ್ಸ್‌ಗಳು ಭರ್ಜರಿಯಾಗಿ ಯಜಮಾನನ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ದಾಸನ ಅಭಿಮಾನಿಯೊಬ್ಬರು ತಮ್ಮ ಆಟೋ ಹಿಂದೆ ದರ್ಶನ್‌ ಅವರ ಫೋಟೋ ಪ್ರೀಂಟ್‌ ಮಾಡಿಸಿದ್ದು ಅದನ್ನ ಸ್ವತಃ ಸಾರಥಿಯೇ ಬಿಡುಗಡೆ ಮಾಡಿದ್ದು, ಡಿಬಾಸ್‌ ಅಭಿಮಾನಿಗಳಿಗೆ ಖುಷಿ ತಂದಿದೆ. ಈ ಕುರಿತು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Written by - Krishna N K | Last Updated : Nov 20, 2022, 04:46 PM IST
  • ಆಟೋ ಹಿಂದೆ ಅತಿರಥ ಮಹಾರಥ ʼಸಾರಥಿʼ
  • DBoss ಅಭಿಮಾನಿಗಳ ಅಭಿಮಾನಕ್ಕೆ ಸಾಟಿ ಇಲ್ಲ
  • ನಟ ಶಂಕರ್‌ನಾಗ್‌ ಅವರ ಫೋಟೋ ಬಿಟ್ಟರೆ ಹೆಚ್ಚಾಗಿ ಆಟೋ ಹಿಂದೆ ಕಾಣುವ ಸ್ಟಾರ್‌ ಅಂದ್ರೆ ದರ್ಶನ್‌
ಆಟೋ ಹಿಂದೆ ಅತಿರಥ ಮಹಾರಥ ʼಸಾರಥಿʼ : DBoss ಅಭಿಮಾನಿಗಳ ಅಭಿಮಾನ..! title=

D Boss : ದಿನದಿಂದ ದಿನಕ್ಕೆ ಛಾಲೆಜಿಂಗ್‌ ಸ್ಟಾರ್‌ ನಟನೆಯ ʼಕ್ರಾಂತಿʼ ಅಬ್ಬರ ಕರುನಾಡಿನಲ್ಲಿ ಹೆಚ್ಚಾಗುತ್ತಲೇ ಇದೆ. ದಚ್ಚು ಫ್ಯಾನ್ಸ್‌ಗಳು ಭರ್ಜರಿಯಾಗಿ ಯಜಮಾನನ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ದಾಸನ ಅಭಿಮಾನಿಯೊಬ್ಬರು ತಮ್ಮ ಆಟೋ ಹಿಂದೆ ದರ್ಶನ್‌ ಅವರ ಫೋಟೋ ಪ್ರೀಂಟ್‌ ಮಾಡಿಸಿದ್ದು ಅದನ್ನ ಸ್ವತಃ ಸಾರಥಿಯೇ ಬಿಡುಗಡೆ ಮಾಡಿದ್ದು, ಡಿಬಾಸ್‌ ಅಭಿಮಾನಿಗಳಿಗೆ ಖುಷಿ ತಂದಿದೆ. ಈ ಕುರಿತು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಚಂದನವನದ ಪ್ರಸಿದ್ಧ ನಟ ಶಂಕರ್‌ನಾಗ್‌ ಅವರ ಫೋಟೋ ಬಿಟ್ಟರೆ ಹೆಚ್ಚಾಗಿ ಆಟೋ ಹಿಂದೆ ಕಾಣುವ ಸ್ಟಾರ್‌ ಅಂದ್ರೆ ಅದು ದರ್ಶನ್‌ ಅವರು. ಸದ್ಯ ಆಟೋ ಚಾಲಕರೊಬ್ಬರು ತಮ್ಮ ಆಟೋಹಿಂದೆ ದರ್ಶನ್‌ ಅವರ ಫೋಟೋ ಹಾಕಿದ್ದು, ಅದನ್ನು ಸ್ವತಃ ದರ್ಶನ್‌ ಅವರೇ ರಿವೀಲ್‌ ಮಾಡಿದ್ದಾರೆ. ಈ ಕುರಿತ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋ ನೋಡಿದ ಅಭಿಮಾನಿಗಳು ಸೂಪರ್‌ ಬಾಸ್‌ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: ಪ್ರಚಾರಕ್ಕಾಗಿ ಊರ್ವಶಿ ಪಂತ್‌ ಬಗ್ಗೆ ಮಾತನಾಡುತ್ತಾಳೆ ಎಂದ ಗಿಲ್‌: ವಿಡಿಯೋ ವೈರಲ್‌  

ಇನ್ನು ಕ್ರಾಂತಿ ಸ್ಯಾಂಡಲ್‌ವುಡ್‌ನ ಮೋಸ್ಟ್‌ ಎಕ್ಸ್ಪೆಕ್ಟೆಡ್ ಸಿನಿಮಾ. ದರ್ಶನ್‌ ಅಭಿನಯದ ಈ ಚಿತ್ರ ಜ.26 ರಂದು ಬಿಡುಗಡೆಯಾಗಲಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಕ್ರಾಂತಿ' ಸಿನಿಮಾ ತೆರೆಗೆ ಬರ್ತಿದೆ. ಇಲ್ಲಿ ವಿಶೇಷ ಅಂದ್ರೆ, ದರ್ಶನ್‌ ಅವರ ಅಭಿಮಾನಿಗಳು. ಸ್ವತಃ ದರ್ಶನ್‌ ಅವರ ಫ್ಯಾನ್ಸ್‌ ಈ ಚಿತ್ರದ ಪ್ರಚಾರ ಕೆಲಸ ಮಾಡುತ್ತಿದ್ದಾರೆ. ಕಾರು, ಬೈಕ್‌, ಸೈಕಲ್‌, ಆಟೋ ಹೀಗೆ ಡಿ ಬಾಸ್‌ ಅಭಿಮಾನಿಗಳು ಕ್ರಾಂತಿ ಸಿನಿಮಾದ ಪೋಸ್ಟರ್‌ ಹಚ್ಚಿ ಸಿನಿ ಪ್ರಚಾರ ಕೈಗೊಂಡಿದ್ದಾರೆ. 

 

ಇಷ್ಟಲ್ಲದೆ, ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುವ ದರ್ಶನ್ ಅಭಿಮಾನಿಗಳು ಸಹ ಕೈಯಲ್ಲಿ ಕ್ರಾಂತಿ ಸಿನಿಮಾದ ಪೋಸ್ಟರ್‌ ಹಿಡಿದು ನೆಚ್ಚಿನ ನಟನ ಸಿನಿಮಾ ಯಶಸ್ಸು ಗಳಿಸಿಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ವಿದೇಶದಲ್ಲಿಯೂ ಸಹ ಕ್ರಾಂತಿ ಪ್ರಚಾರ ಅಬ್ಬರಿಸುತ್ತಿದೆ. ಹೊರದೇಶದಲ್ಲಿರುವ ದಚ್ಚು ಅಭಿಮಾನಿಗಳು ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಕಾರಿನ ಮೇಲೆ ಕ್ರಾಂತಿ ಸಿನಿಮಾದ ಪೋಸ್ಟರ್‌ ಹಚ್ಚಿ ಭರ್ಜರಿಯಾಗಿ ಪ್ರಮೋಷನ್‌ ಮಾಡುತ್ತಿದ್ದಾರೆ.

ಸದ್ಯ ದರ್ಶನ್‌ ಅವರ ಕ್ರಾಂತಿ ಸಿನಿಮಾವನ್ನು ಅವರ ಅಭಿಮಾನಿಗಳೇ ಬರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಜನವರಿ 26ಕ್ಕೆ ಸಿನಿಮಾ ತೆರೆಗೆ ಬರಲಿದೆ. ವಿ. ಹರಿಕೃಷ್ಣ ನಿರ್ದೇಶನದ ʼಕ್ರಾಂತಿʼಗೆ ಶೈಲಜಾ ನಾಗ್ ಹಾಗೂ ಬಿ. ಸುರೇಶ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ದರ್ಶನ್‌ ಅಭಿಮಾನಿಗಳಿಗೆ ಇನ್ನೊಂದು ಖುಷಿ ವಿಚಾರ ಅಂದ್ರೆ ತರುಣ್‌ ಸುದೀಪ್‌ ಅವರ ನಿರ್ದೇಶನದಲ್ಲಿ D56 ಸಿನಿಮಾ ಬರಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News