ರೋಹಿತ್‌ ವಿರುದ್ಧ ಇಂಜಮಾಮ್‌ ಉಲ್‌ ಹಕ್‌ ಕಿಡಿ ಕಿಡಿ: " ನೀನು ನಮಗೆ ಪಾಠ ಹೇಳಿ ಕೊಡ್ತೀಯಾ" ಎಂದ ಪಾಕ್‌ ಮಾಜಿ ನಾಯಕ

Rohith Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ನಡುವಿನ ಮಾತಿನ ಸಮರ ಮುಂದುವರೆದಿದೆ. ಟಿ20 ವಿಶ್ವಕಪ್‌ 2024 ಟೂರ್ನಿಯಲ್ಲಿ  ಟೀಂ ಇಂಡಿಯಾ ಬಾಲ್ ಟ್ಯಾಂಪರ್ ಮಾಡುತ್ತಿದೆ ಎಂದು ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ. ಪಾಕ್‌ ಮಾಜಿ ನಾಯಕನ ಹೇಳಿಕೆಗೆ ರೋಹಿತ್ ಶರ್ಮಾ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.  

Written by - Zee Kannada News Desk | Last Updated : Jun 29, 2024, 08:31 AM IST
  • ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ನಡುವಿನ ಮಾತಿನ ಸಮರ ಮುಂದುವರೆದಿದೆ.
  • ಪಾಕ್‌ ಮಾಜಿ ನಾಯಕನ ಹೇಳಿಕೆಗೆ ರೋಹಿತ್ ಶರ್ಮಾ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
  • ಎರಡನೆಯ ವಿಷಯವೆಂದರೆ ಚೆಂಡು ಹೇಗಿದೆ? ಯಾವ ಸಂದರ್ಭಗಳಲ್ಲಿ ರಿವರ್ಸ್ ಆಗುತ್ತದೆ ಎಂದು ನಾವು ಹೇಳಬೇಕಾಗಿಲ್ಲ.
ರೋಹಿತ್‌ ವಿರುದ್ಧ ಇಂಜಮಾಮ್‌ ಉಲ್‌ ಹಕ್‌ ಕಿಡಿ ಕಿಡಿ: " ನೀನು ನಮಗೆ ಪಾಠ ಹೇಳಿ ಕೊಡ್ತೀಯಾ" ಎಂದ ಪಾಕ್‌ ಮಾಜಿ ನಾಯಕ title=

Rohith Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ನಡುವಿನ ಮಾತಿನ ಸಮರ ಮುಂದುವರೆದಿದೆ. ಟಿ20 ವಿಶ್ವಕಪ್‌ 2024 ಟೂರ್ನಿಯಲ್ಲಿ  ಟೀಂ ಇಂಡಿಯಾ ಬಾಲ್ ಟ್ಯಾಂಪರ್ ಮಾಡುತ್ತಿದೆ ಎಂದು ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ. ಪಾಕ್‌ ಮಾಜಿ ನಾಯಕನ ಹೇಳಿಕೆಗೆ ರೋಹಿತ್ ಶರ್ಮಾ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

 ಪಿಚ್ ಒಣಗಿದಾಗ ಚೆಂಡು ತಾನಾಗೆ ರಿವರ್ಸ್‌ ಸ್ಟಿಂಗ್‌ ಆಗುತ್ತದೆ, ಆರೋಪ ಮಾಡುವ ಮೊದಲು ಸ್ವಲ್ಪ ಬುದ್ದಿ ಬಳಸಬೇಕು ಎಂದು ರೋಹಿತ್‌ ಶರ್ಮಾ ಪಾಕ್‌ ಮಾಜಿ ನಾಯಕನಿಗೆ ಟಾಂಗ್‌ ಕೊಟ್ಟಿದ್ದಾರೆ. ಈ ಕಮೆಂಟ್‌ಗಳಿಗೆ ಪ್ರತಿಕ್ರಿಯಿಸಿರುವ ಇಂಜಮಾಮ್ ಉಲ್ ಹಕ್ "ಗುರುಗಳಿಗೆ ಪಾಠ ಹೇಳಿಕೊಡುವಷ್ಟು ನೀವು ದೊಡ್ಡವರಾಗಿದ್ದೀರಾ? ಯಾವ ಪರಿಸ್ಥಿತಿಯಲ್ಲಿ ಚೆಂಡು ರಿವರ್ಸ್ ಸ್ವಿಂಗ್ ಆಗುತ್ತದೆ ಎಂಬುದು ನಮಗೆ ಗೊತ್ತಿದೆ, ರಿವರ್ಸ್ ಸ್ವಿಂಗ್ ತಂತ್ರವನ್ನು ಜಗತ್ತಿಗೆ ಪರಿಚಯಿಸಿದ ದೇಶಕ್ಕೆ ಪಾಠ ಕಲಿಸುವ ಅಗತ್ಯವಿಲ್ಲ ಎಂದು ಪಾಕ್‌ ಮಾಜಿ ನಾಯಕ ಪ್ರತಿಕ್ರಿಯಿಸಿದ್ದಾರೆ.

ಈ ಇಬ್ಬರ ಮಾತಿನ ಚಕಮಕಿ ನಡುವೆ ಪ್ರತಿಕ್ರಿಯೆ ನೀಡಿರುವ ಇಂಜಮಾಮ್‌ "ಮೊದಲ ವಿಷಯವೆಂದರೆ ನಾವು ಹೇಳಿದಂತೆ, ರೋಹಿತ್ ಶರ್ಮಾ ಕೂಡ ಚೆಂಡು ರಿವರ್ಸ್ ಸ್ವಿಂಗ್ ಆಗಲಿದೆ ಎಂದು ಹೇಳಿದರು. ಎರಡನೆಯ ವಿಷಯವೆಂದರೆ ಚೆಂಡು ಹೇಗಿದೆ? ಯಾವ ಸಂದರ್ಭಗಳಲ್ಲಿ ರಿವರ್ಸ್ ಆಗುತ್ತದೆ ಎಂದು ನಾವು ಹೇಳಬೇಕಾಗಿಲ್ಲ. ನಾವು ರಿವರ್ಸ್ ಸ್ವಿಂಗ್ ತಂತ್ರವನ್ನು ಜಗತ್ತಿಗೆ ಪರಿಚಯಿಸಿದ್ದೇವೆ. ಶಿಕ್ಷಕರಿಗೆ ಪಾಠ ಹೇಳುವುದು ಹೇಗೆ? ಟೀಂ ಇಂಡಿಯಾ ಬಾಲ್ ಟ್ಯಾಂಪರಿಂಗ್ ಮಾಡಿದ್ದರೆ ಎಂದು ನಾವು ಹೇಳುತ್ತಿಲ್ಲ. ಚೆಂಡಿನ ಮೇಲೆ ನಿಗಾ ಇಡುವಂತೆ ಅಂಪೈರ್‌ಗಳಿಗೆ ಸೂಚನೆ ನೀಡಿದ್ದೇವೆ' ಎಂದು ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನೂ ಓದಿ: 37 ರನ್‌ಗಳ ಇನ್ನಿಂಗ್ಸ್‌, 1 ಬೌಂಡರಿ 3 ಸಿಕ್ಸರ್‌, ODI ವಿಶ್ವಕಪ್‌ನಲ್ಲಿ 3000ಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆ ಈತನದು...!

ಟಿ20 ವಿಶ್ವಕಪ್ 2024 ರ ಅಂಗವಾಗಿ ಆಸ್ಟ್ರೇಲಿಯಾ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ವೇಗಿ ಅರ್ಶದೀಪ್‌ ಸಿಂಗ್ ಅವರ ರಿವರ್ಸ್ ಸ್ವಿಂಗ್ ಬಗ್ಗೆ ಇಂಜಮಾಮ್-ಉಲ್-ಹಕ್ ಅನುಮಾನ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಚೆಂಡು ಹಳೆಯದಾದಾಗ ರಿವರ್ಸ್ ಆಗುವ ಸಾಧ್ಯತೆ ಇದೆ.  ಹೊಸ ಚೆಂಡಿನೊಂದಿಗೆ ರಿವರ್ಸ್ ಸ್ವಿಂಗ್ ಹೇಗೆ ಆಗುತ್ತದೆ ಎಂದು ಅರ್ಷದೀಪ್ ಸಿಂಗ್ ಬೌಲಿಂಗ್‌ ಬಗ್ಗೆ ಉಲ್‌ ಹಕ್‌ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರೋಹಿತ್‌, ನಾವು ಡೈ ಪಿಚ್‌ನಲ್ಲಿ ಆಟವಾಡಿದ ಕಾರಣ ಬಾಲ್‌  ಹಾಕಿದಾಗ ಅದು ರಿವರ್ಸ್‌ ಟ್ಯಾಂಪರ್‌ ಆಗುತ್ತದೆ. ಮಾತನಾಡುವ ಮುಂಚೆ ಜನರು ಸ್ವಲ್ಪ ತಲೆ ಉಪಯೋಗಿಸಬೇಕು. ನಾವು ಎಲ್ಲಿ ಆಡುತ್ತಿದ್ದೇವೆ ಎನ್ನುವುದು ಕೂಡ ತುಂಬಾ ಮುಖ್ಯ ಆಗುತ್ತದೆ ಎಂದು ಪಾಕ್‌ ಮಾಜಿ ನಾಯಕನ ವಿರುದ್ಧ ರೋಹಿತ್‌ ಶರ್ಮಾ ಗುಡುಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News